ಆದಿತ್ಯಾ ಎಲ್‌ -1 ಉಡಾವಣಾ ಪೂರ್ವಾಭ್ಯಾಸ ಪರೀಕ್ಷೆ ಪೂರ್ಣ : ಇಸ್ರೋ ಮಾಹಿತಿ

ಬೆಂಗಳೂರು: ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ ಶನಿವಾರ (ಸೆ.2) ಉಡಾವಣೆಗೊಳ್ಳಲಿರುವ ಆದಿತ್ಯ ಎಲ್‌-1 ನ ಉಡಾವಣಾ  ಪೂರ್ವಾಭ್ಯಾಸ (ರಿಹರ್ಸಲ್‌) ಮತ್ತು ಆಂತರಿಕ ಪರೀಕ್ಷೆಯನ್ನು ಇಸ್ರೊ ಬುಧವಾರ ಪೂರ್ಣಗೊಳಸಿದೆ.

ಸೂರ್ಯನ ಅಧ್ಯನಯನಕ್ಕಾಗಿ ಭಾರತ ಕಳುಹಿಸಲಿರುವ ಪ್ರಥಮ ಯೋಜನೆ ಆದಿತ್ಯ-ಎಲ್‌1 ಶ್ರೀಹರಿಕೋಟದ ಅಂತರಿಕ್ಷ ಉಡಾವಣಾ ಕೇಂದ್ರದಿಂದ ಶನಿವಾರ ಬೆಳಿಗ್ಗೆ 11.50 ಕ್ಕೆ ಪಿಎಸ್‌ಎಲ್‌ವಿ-ಸಿ 57 ರಾಕೆಟ್‌ ಮೂಲಕ ಅಂತರಿಕ್ಷ ನೌಕೆಯ ಉಡಾವಣೆ ನಡೆಯಲಿದೆ. ಇದರಲ್ಲಿ ಸೂರ್ಯನ ಅಧ್ಯಯನ ನಡೆಸಲು ಒಟ್ಟು ಏಳು ಉಪಕರಣಗಳು (ಪೇಲೋಡ್‌) ಇರಲಿವೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೊ ಉಡಾವಣೆಗೆ ಎಲ್ಲ ರೀತಿಯ ಸಿದ್ಧತೆಗಳು ಪ್ರಗತಿಯಲ್ಲಿವೆ. ಉಡಾವಣಾ ಪೂರ್ವಾಭ್ಯಾಸ ಮತ್ತು ವಾಹನದ ಆಂತರಿಕ ಪರೀಕ್ಷೆಗಳೂ ಪೂರ್ಣಗೊಂಡಿವೆ ಎಂದು ಹೇಳಿದೆ.

ಇದನ್ನೂ ಓದಿ:ಸೆಪ್ಟೆಂಬರ್ 2ರಂದು ಆದಿತ್ಯಾ ಎಲ್ 1 ಉಡಾವಣೆ:ಇಸ್ರೋ ಮಾಹಿತಿ

 ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನ ನಡೆಸುವುದಕ್ಕೆ ಬೇಕಾದ ರೀತಿಯಲ್ಲಿ ಆದಿತ್ಯ ಎಲ್‌1 ಅನ್ನು ವಿನ್ಯಾಸಗೊಳಿಸಲಾಗಿದ್ದು, ಈ ಎಲ್‌ 1 ಪ್ರದೇಶದಲ್ಲಿ ಉಪಗ್ರಹವನ್ನು ಇರಿಸಿ ಸೌರ ಮಾರುತದ ಅಧ್ಯಯನ ನಡೆಸಲಾಗುವುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಎಲ್‌ ಎಂದರೆ, ಲಾಗ್ರೇಂಜ್‌ ಬಿಂದು. ಇದು ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣ ಬಲ ಸಮಾನವಾಗಿರುವ ಪ್ರದೇಶ. ಇಲ್ಲಿ ವೀಕ್ಷಣಾ ಉಪಗ್ರಹವನ್ನು ನಿಯೋಜಿಸಿದರೆ ಅದು ಅತ್ಯಂತ ಕಡಿಮೆ ಇಂಧನದಲ್ಲಿ ನೆಲೆ ನಿಲ್ಲಲು ಸಾಧ್ಯ. ಈ ಪ್ರದೇಶವು ಭೂಮಿಯಿಂದ 15 ಲಕ್ಷ ಕಿಲೋಮೀಟರ್‌ ದೂರದಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *