ಒಲಿಂಪಿಕ್ಸ್‌: ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಗಾಲ್ಫರ್‌ ಅದಿತಿ ಅಶೋಕ್‌ ನಾಲ್ಕನೇ ಸ್ಥಾನ

ಟೋಕಿಯೋ: ಕರ್ನಾಟಕದವರಾದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶವು ಕೂದಲೆಳೆ ಅಂತರದಲ್ಲಿ ಕೈತಪ್ಪಿದೆ. 200ನೇ ಶ್ರೇಯಾಂಕಿತ ಆಟಗಾರ್ತಿ ಕೊನೆಯ ಕ್ಷಣದಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದರಿಂದ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಅಮೆರಿಕದ ನೆಲ್ಲೇ ಕೊರಡಾ ಮಹಿಳೆಯರ ಗಾಲ್ಫ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು.

ಉತ್ತಮ ಸಾಧನೆ ಪ್ರದರ್ಶಿಸಿದ 23 ವರ್ಷದ ಅದಿತಿ ಅಶೋಕ್ ಒಟ್ಟಾರೆ 76 ಸುತ್ತಿನ ಸ್ಪರ್ಧೆಯಲ್ಲಿ ಕೊನೆಯ ಸುತ್ತಿನ ಅಂತ್ಯಕ್ಕೆ 4ನೇ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿದೆ. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಅದಿತಿ ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದರು. 4ನೇ ದಿನವಾದ ಇಂದು 17 ಹೋಲ್‌ ವೇಳೆಗೆ ಅದಿತಿ 3ನೇ ಸುತ್ತಿನ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದರು. ಒಲಿಂಪಿಕ್ಸ್‌ ಪಂದ್ಯದಲ್ಲಿ ಉತ್ತಮ ಸಾಧನೆ ಮೆರೆದು ನಿರ್ಗಮಿಸಿದ್ದಾರೆ.

ಇದನ್ನು ಓದಿ: ಟೋಕಿಯೋ ಒಲಿಂಪಿಕ್ಸ್ : ಮಹಿಳಾ ಹಾಕಿ ಪದಕದ ಕನಸು ಭಗ್ನ

ಮೂರನೇ ಹಂತದವರೆಗೂ ಅದಿತಿ ಪ್ರಬಲ ಪೈಪೋಟಿ ನೀಡಿದರು. ಕೊನೆಯ ಎರಡು ಹೋಲ್‌ಗಳಲ್ಲಿ ನ್ಯೂಜಿಲ್ಯಾಂಡ್ ನ ಕೊ ಲಿಡಿಯಾ, ಜಪಾನ್ ನ ಇನಾಮಿ ಮೊನಿ ಮುನ್ನಡೆ ಸಾಧಿಸಿದ್ದರಿಂದಾಗಿ ಅದಿತಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.  ಎರಡನೇ ಸ್ಥಾನದಲ್ಲಿ ಜಪಾನ್ ಹಾಗೂ ಮೂರನೇ ಸ್ಥಾನದಲ್ಲಿ ಅಮೆರಿಕಾ ಇತ್ತು. ಇದೇ ವೇಳೆ ಮಳೆ ಬಂದ ಪರಿಣಾಮ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು. ನಂತರ ಅಂತಿಮ ಫೈನಲ್ ರೌಂಡ್​​ ಆರಂಭಿಸಲಾಯಿತು.

ವಿಶ್ವದಲ್ಲಿ 200ನೇ ಸ್ಥಾನದಲ್ಲಿದ್ದ ಹೊರತಾಗಿಯೂ ಅದಿತಿ  ಮೂರು ಸುತ್ತಿನ ಆಟದ ಮೂಲಕ ವಿಶ್ವ ನಂ .1 ಹಾಗೂ  ಅಂತಿಮವಾಗಿ ಚಿನ್ನದ ಪದಕ ವಿಜೇತೆ ಅಮೆರಿಕದ ನೆಲ್ಲಿ ಕೊರ್ಡಾ ಅವರೊಂದಿಗೆ ಪದಕ ಸ್ಪರ್ಧೆಯಲ್ಲಿ ಉಳಿದಿದ್ದರು. ಎರಡನೇ ಪ್ರಯತ್ನದಲ್ಲೇ ಅದ್ಭುತ ಪ್ರದರ್ಶನ ತೋರಿದ ಅದಿತಿ ಅಶೋಕ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಇದನ್ನು ಓದಿ: ಕುಸ್ತಿ ಕಾದಾಟದಲ್ಲಿ ಹೋರಾಟ; ಬೆಳ್ಳಿಗೆ ಕೊರಳೊಡ್ಡಿದ ರವಿ ಕುಮಾರ್‌ ದಹಿಯಾ

ಗಾಲ್ಫ್ ಅನ್ನು ಇಲ್ಲಿಯವರೆಗೆ ಕೇವಲ ನಾಲ್ಕು ಆವೃತ್ತಿಗಳ ಒಲಿಂಪಿಕ್ಸ್ ನಲ್ಲಿ ಆಡಲಾಗಿದೆ (1900, 1904, 2016 ಹಾಗೂ 2020). 2016 ರ ರಿಯೋ ಗೇಮ್ಸ್‌ನಲ್ಲಿ, ಗಾಲ್ಫ್ ಒಲಿಂಪಿಕ್ಸ್  ಕಾರ್ಯಕ್ರಮಕ್ಕೆ ಮರಳಿತು, ಆಗ  ಒಟ್ಟಾರೆಯಾಗಿ ಮೂವರು ಭಾರತೀಯ ಗಾಲ್ಫ್ ಆಟಗಾರರು ಸ್ಪರ್ಧೆಯಲ್ಲಿದ್ದರು. ಅನಿರ್ಬನ್ ಲಹಿರಿ 57 ನೇ ಸ್ಥಾನ, ಎಸ್‌ಎಸ್‌ಪಿ ಚೌರಾಸಿಯಾ 50 ನೇ ಸ್ಥಾನ ಹಾಗೂ  ಅದಿತಿ ಅಶೋಕ್ ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ರಿಯೋ ಕ್ರೀಡಾಕೂಟದಲ್ಲಿ ಮಹಿಳಾ ಕ್ಷೇತ್ರದಲ್ಲಿ ಭಾರತದ ಏಕೈಕ ಗಾಲ್ಫ್ ಆಟಗಾರರಾಗಿದ್ದು 41 ನೇ ಸ್ಥಾನ ಪಡೆದಿದ್ದರು.

Donate Janashakthi Media

Leave a Reply

Your email address will not be published. Required fields are marked *