ಬೆಂಗಳೂರು: ಬೇಲೆಕೇರಿ ಬಂದರಿನಲ್ಲಿ ಲೋಕಾಯುಕ್ತ ತಂಡ ವಶ ಪಡಿಸಿಕೊಂಡಿದ್ದ 6.10 ಲಕ್ಷ ಟನ್ ಕಬ್ಬಿಣದ ಉತ್ಕೃಷ್ಟ ಅದಿರನ್ನು ಕದ್ದು ವಿದೇಶಕ್ಕೆ ರಫ್ತು ಮಾಡಿದ್ದ ಕಬ್ಬಿಣದ ಅದಿರುಗಳ್ಳತನದ ಮೇಲೆ ಶಾಸಕ ಸತೀಶ್ ಸೈಲ್ ಮತ್ತಿತರರಿಗೆ 6 ಪ್ರಕರಣಗಳಲ್ಲಿ ತಲಾ 7 ವರ್ಷದಂತೆ ಗರಿಷ್ಟ 42ವರ್ಷಗಳ ಜೈಲು ಹಾಗು ದಂಡ ವಿಧಿಸಿ ಶಿಕ್ಷೆಗೊಳಪಡಿಸಿದ, ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ 82ನೇ ವಿಶೇಷ ನ್ಯಾಯಾಲಯದ ತೀರ್ಪನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ರಾಜ್ಯ ಸಮಿತಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಕಾರ್ಯದರ್ಶಿ ಯು ಬಸವರಾಜ ಹೇಳಿದರು. ಸೈಲ್
ಈ ಕೂಡಲೆ ಅವರನ್ನು ಶಾಸನ ಸಭಾ ಸ್ಥಾನದಿಂದ ವಜಾ ಮಾಡಬೇಕೆಂದು ವಿಧಾನ ಸಭಾದ್ಯಕ್ಷರನ್ನು ಬಲವಾಗಿ ಒತ್ತಾಯಿಸುತ್ತದೆ. ಅದೇ ರೀತಿಯಲ್ಲಿ, ಇದುವರೆಗೆ ಶಾಸಕರ ಹೆಸರಿನಲ್ಲಿ ಅವರು ಸರಕಾರದಿಂದ ಪಡೆದ ಎಲ್ಲಾ ಸೌಲಭ್ಯಗಳ ಹಣವನ್ನು ಬಡ್ಡಿ ಸಮೇತ ವಾಪಾಸು ಪಡೆಯಬೇಕೆಂದು ಮುಖ್ಯಮಂತ್ರಿಗಳನ್ನು ಹಾಗು ವಿಧಾನ ಸಭಾದ್ಯಕ್ಷರನ್ನು ಸಿಪಿಐಎಂ ಒತ್ತಾಯಿಸುತ್ತದೆ ಎಂದರು. ಸೈಲ್
ಬಳ್ಳಾರಿ, ವಿಜಯನಗರ ಮತ್ತಿತರೆ ಜಿಲ್ಲೆಗಳ ವಿವಿಧ ಗಣಿಗಳಿಂದ ಅಕ್ರಮವಾಗಿ ಕೂಡಿಟ್ಟ 8.82 ಲಕ್ಷ ಡನ್ ದನ್ನು ಯು.ವಿ.ಸಿಂಗ್ ನೇತೃತ್ವದ ಲೋಕಾಯುಕ್ತ ತನಿಖಾ ತಂಡ ಅಂದು ಪ್ರತಿ ಟನ್ ಗೆ ಸುಮಾರು 3,000 ರೂ ನಂತೆ ಮಾರಾಟವಾಗುತ್ತಿದ್ದ ಸುಮಾರು 264 ಕೋಟಿ ರೂ ಗಳ ಮೌಲ್ಯ ಅದಿರನ್ನು ವಶ ಪಡಿಸಿಕೊಂಡಿತ್ತು.
ಇದನ್ನೂ ಓದಿ: ಹಾನಿಯಾದ ರೈತರಿಗೆ ಡಿಬಿಟಿ ಮೂಲಕ ಬೆಳೆ ನಷ್ಟ ಪರಿಹಾರ: ಕೃಷ್ಣ ಬೈರೇಗೌಡ
ಅದರಲ್ಲಿ ಸುಮಾರು 183 ಕೋಟಿ ಮೌಲ್ಯದ ಅದಿರನ್ನು ಬಿಗಿ ಭದ್ರತೆಯ ನಡುವೆ ದರೋಡೆ ಮಾಡಲಾಗಿತ್ತು. ಆದ್ದರಿಂದ ಅವರಲ್ಲಿರುವ ಅಕ್ರಮ ಆಸ್ತಿಯನ್ನು ಕೂಡಲೆ ಮುಟ್ಟುಗೋಲು ಹಾಕಿಕೊಳ್ಳಲು ಅಗತ್ಯ ಕ್ರಮವಹಿಸುವಂತೆಯು ರಾಜ್ಯ ಸರಕಾರವನ್ನು ಒತ್ತಾಯಿಸಿದೆ ಎಂದರು.
ಲೋಕಾಯುಕ್ತ ಶ್ರೀ ಸಂತೋಷ ಹೆಗ್ಡೆ ನೇತ್ರತ್ವದ ತನಿಖಾ ತಂಡ ತಮ್ಮ ವರದಿಯಲ್ಲಿ ಹೆಸರಿಸಿದ , ಅಕ್ರಮ ಗಣಿಗಾರಿಕೆ ಮತ್ತು ಕಬ್ಬಿಣ ಅದಿರು ದರೋಡೆಯಲ್ಲಿ ತೊಡಗಿದ್ದ ಎಲ್ಲ ಗಡಿ ಹಾಗು ಗಣಿಗಳ್ಳರನ್ನು ಶಿಕ್ಷಿಸಲು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆಯೂ ಸಿಪಿಐಎಂ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಹೇಳಿದರು.
ಇದನ್ನೂ ನೋಡಿ: ವಚನಾನುಭವ – 18 | ವಾರವೇಳು ಜಾತಿ ಹದಿನೆಂಟೆಂದು – ಅಲಮ್ಮಪ್ರಭುವಿನ ವಚನ Janashakthi Media