ಆದಾನಿಯನ್ನು ತಡೆಯಿರಿ, ಇಲ್ಲವಾದಲ್ಲಿ ಕುಟ್ಟಿಪಳ್ಳಿ ದ್ವೀಪ ನಾಶವಾಗಲಿದೆ – ತಮಿಳರ ಆಗ್ರಹ

ಚೆನ್ನೈ, ಫೆ 07 : ತಮಿಳುನಾಡಿನ ಕಟ್ಟುಪ್ಪಳ್ಳಿ ಬಂದರನ್ನು ವಿಸ್ತರಿಸುವ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಗೌತಮ್ ಅದಾನಿ ಮಾಲೀಕತ್ವದ ಮೆರೈನ್ ಇನ್‌ಫ್ರಾಸ್ಟ್ರಕ್ಚರ್ ಡೆವೆಲಪರ್ ಪ್ರೈವೇಟ್ ಲಿಮಿಟೆಡ್ ಈ ಪ್ರಾಜೆಕ್ಟ್‌ನ ಟೆಂಡರ್ ಪಡೆದುಕೊಂಡಿದೆ. ಇದು ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ ಎಂದು ನ್ಯಾಷನಲ್ ಹೆರಾಲ್ಡ್ ಇಂಡಿಯಾ ವೆಬ್ಸೈಟ್ ಸುದ್ದಿಯನ್ನು ಮಾಡಿದೆ.

ಸ್ಟಾಪ್ ಅದಾನಿ ಸೇವ್ ಚೆನ್ನೈ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಕಟ್ಟುಪ್ಪಳ್ಳಿ ಬಂದರು ವಿಸ್ತರಣೆ ಯೋಜನೆಯಿಂದ ಇಲ್ಲಿನ ಬಂದರನ್ನೇ ಜೀವನದ ಮೂಲ ಆಸರೆಯನ್ನಾಗಿ ಅವಲಂಬಿಸಿರುವ ನೂರಾರು ಮೀನುಗಾರರ ಕುಟುಂಬಗಳ ಜೀವನ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.

ಪ್ರಸ್ತುತ ಇರುವ ಬಂದರಿನಲ್ಲಿನ ಸರಕು ನಿರ್ವಹಣೆ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಸಂಬಂಧ 2018ರ ನವೆಂಬರ್‌ನಲ್ಲಿ ಎಂಐಡಿಎಲ್ ತನ್ನ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಅನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ಕೇಂದ್ರ ಸರ್ಕಾರದಿಂದ ಈಗ ಅನುಮೋದನೆ ದೊರಕಿರುವುದು ಬಂದರು ಹಾಗೂ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಜತೆಗೆ ಪರಿಸರಕ್ಕೆ ಇದು ಮಾರಕ ಎಂಬ ವಿರೋಧ ಕೂಡ ವ್ಯಕ್ತವಾಗಿದೆ.

2,472.85 ಹೆಕ್ಟೇರ್‌ ವಿಸ್ತರಣೆ : ಪ್ರಸ್ತುತ ಇರುವ ಬಂದರಿನ 133.50 ಹೆಕ್ಟೇರ್ ಪ್ರದೇಶ, ಸರ್ಕಾರದ 761.8 ಹೆಕ್ಟೇರ್ ಭೂಮಿ, 781.4 ಹೆಕ್ಟೇರ್ ಖಾಸಗಿ ಭೂಮಿ ಮತ್ತು 796.15 ಹೆಕ್ಟೇರ್ ಪ್ರಸ್ತಾವಿತ ಸಮುದ್ರ ಭಾಗ ಸುಧಾರಣೆ ಸೇರಿದಂತೆ ಒಟ್ಟು 2,472.85 ಹೆಕ್ಟೇರ್‌ಗಳಷ್ಟು ಪ್ರದೇಶದ ಬಂದರನ್ನು ಅಭಿವೃದ್ಧಿಪಡಿಸುವ ಪ್ರಸ್ತಾವವನ್ನು ಇಟ್ಟಿದೆ. ಇದು ತಮಿಳು ನಾಡು ಹಾಗೂ ಆಂದ್ರಪ್ರದೇಶ 82 ಹಳ್ಳಿಗಳಲ್ಲಿ ವಾಸಿಸುತ್ತಿರುವ 1 ಲಕ್ಷ ಜನರ ಮೇಲೆ ಪರಿಣಾಮ ಬೀರಲಿದೆ. ಬಂದರು ವಿಸ್ತರಣೆಯಿಂದಾಗಿ ತಿರುವಲ್ಲೂರು ಮತ್ತು ಚೆನ್ನೈಗೆ ಪ್ರವಾಹದ ಅಪಾಯದಿಂದಾಗಿ ಕೊಟ್ರಲ್ಲೈ ನದಿಗೆ ಸಮುದ್ರದ ನೀರು ಚೆಲ್ಲುವ ಅಪಾಯವೂ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇದನ್ನೂ ಓದಿ :ಉಷ್ಣ ವಿದ್ಯುತ್ ಕ್ಷೇತ್ರಕ್ಕಾಗಿ ಪರಿಸರ ನಿಯಮಗಳನ್ನು ದುರ್ಬಲಗೊಳಿಸುಲು ಮೋದಿ ಸರಕಾರದಿಂದ ಮತ್ತೊಂದು ಪ್ರಯತ್ನ

ಪರಿಣಾಮಗಳ ಬಗ್ಗೆ ಉಲ್ಲೇಖಿಸಿಲ್ಲ : ಈ ಪ್ರದೇಶದ ಪರಿಸರ ಸೂಕ್ಷ್ಮತೆಗಳನ್ನು ಸಮಿತಿ ಪರಿಗಣನೆಗೆ ತೆಗೆದುಕೊಂಡಿದ್ದರೂ, ಪರಿಸರ ಪ್ರಭಾವ ಮೌಲ್ಯನಿರ್ಣಯದ ವಿಸ್ತೃತ ಅಧ್ಯಯನ ಮತ್ತು ಪ್ರಮುಖ ಷರತ್ತುಗಳ ಕುರಿತಾದ ಶಿಫಾರಸುಗಳಾಚೆ ಸಮಿತಿಯ ವರದಿಯಲ್ಲಿ ಯೋಜನೆಯ ಪರಿಣಾಮಗಳ ಬಗ್ಗೆ ಯಾವುದೇ ಪ್ರಮುಖ ಕಳವಳಗಳನ್ನು ವ್ಯಕ್ತಪಡಿಸಿಲ್ಲ ಎಂದು ಎನ್‌ಜಿಒಗಳು ಆರೋಪಿಸಿವೆ.
ಆದರೆ ಈ ಯೋಜನೆಗೂ ಮುನ್ನ ಸುತ್ತಮುತ್ತಲ ಗ್ರಾಮಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕೋಸತಲೈಯರ್ ನದಿ ಮತ್ತು ಕರಾವಳಿ ಗ್ರಾಮಗಳ ಜನರು ತಮ್ಮ ಜೀವನೋಪಾಯಕ್ಕಾಗಿ ಇಲ್ಲಿನ ಭೂಮಿಯನ್ನು ಅವಲಂಬಿಸಿದ್ದಾರೆ. ಈ ಭಾಗದ ಉರ್ನಂಬೇಡು, ಸೆಗೆನಿಮೇಡು ಮತ್ತು ಇತರೆ ಐದು ಗ್ರಾಮಗಳಲ್ಲಿ 6,080 ಜನಸಂಖ್ಯೆಯಿದೆ. ನೆರೆಯ ಕಟ್ಟೂರ್ ಗ್ರಾಮದ 3,400ಕ್ಕೂ ಅಧಿಕ ನಿವಾಸಿಗಳು ಕೋಸತಲೈಯರ್ ನದಿಯಲ್ಲಿನ ಮೀನುಗಾರಿಕೆಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ. ಕರಾವಳಿ ಭಾಗದ ಕಟ್ಟುಪಳ್ಳಿ ಸೇರಿದಂತೆ ಮತ್ತೆಹತ್ತು ಗ್ರಾಮಗಳ ಮೀನುಗಾರಿಕೆಯ ಗ್ರಾಮಗಳು ಪ್ರಸ್ತಾಪಿತ ಬಂದರು ವಿಸ್ತರಣೆಯಿಂದ ಸಂಕಷ್ಟಕ್ಕೆ ಒಳಗಾಗುವ ಭೀತಿ ಎದುರಾಗಿದೆ.

ಈ ಯೋಜನೆಗೂ ಮುನ್ನ ಸುತ್ತಮುತ್ತಲ ಗ್ರಾಮಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕೋಸತಲೈಯರ್ ನದಿ ಮತ್ತು ಕರಾವಳಿ ಗ್ರಾಮಗಳ ಜನರು ತಮ್ಮ ಜೀವನೋಪಾಯಕ್ಕಾಗಿ ಇಲ್ಲಿನ ಭೂಮಿಯನ್ನು ಅವಲಂಬಿಸಿದ್ದಾರೆ. ಈ ಭಾಗದ ಉರ್ನಂಬೇಡು, ಸೆಗೆನಿಮೇಡು ಮತ್ತು ಇತರೆ ಐದು ಗ್ರಾಮಗಳಲ್ಲಿ 6,080 ಜನಸಂಖ್ಯೆಯಿದೆ. ನೆರೆಯ ಕಟ್ಟೂರ್ ಗ್ರಾಮದ 3,400ಕ್ಕೂ ಅಧಿಕ ನಿವಾಸಿಗಳು ಕೋಸತಲೈಯರ್ ನದಿಯಲ್ಲಿನ ಮೀನುಗಾರಿಕೆಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ. ಕರಾವಳಿ ಭಾಗದ ಕಟ್ಟುಪಳ್ಳಿ ಸೇರಿದಂತೆ ಮತ್ತೆಹತ್ತು ಗ್ರಾಮಗಳ ಮೀನುಗಾರಿಕೆಯ ಗ್ರಾಮಗಳು ಪ್ರಸ್ತಾಪಿತ ಬಂದರು ವಿಸ್ತರಣೆಯಿಂದ ಸಂಕಷ್ಟಕ್ಕೆ ಒಳಗಾಗುವ ಭೀತಿ ಎದುರಾಗಿದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಈ ಬಂದರು ಪುಲಿಕಟ್ ವನ್ಯಜೀವಿ ಸಂರಕ್ಷಣಾ ಪ್ರದೇಶದ ಸಮೀಪದಲ್ಲಿದೆ. ಹೀಗಾಗಿ ಬಂದರು ವಿಸ್ತರಣೆಯು ವನ್ಯಜೀವಿಗಳ ಮೇಲೆ ಪರಿಣಾಮ ಬೀರಲಿದೆ. ಕುಟ್ಟಿಪ್ಪಳ್ಳಿ ದ್ವೀಪ ನಾಶವಾಗಲಿದೆ. ಇದರಿಂದ ಮಳೆ ನೀರು ಗ್ರಾಮಗಳಿಗೆ ನುಗ್ಗಿ ಜನಜೀವನ ಅತೀವ್ರ ತೊಂದರೆಗೆ ಒಳಗಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅದಾನಿ ಬಂದರು ವಿಸ್ತರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ತಮಿಳು ನಾಡಿನ ಪ್ರಮುಖ ಪಕ್ಷಗಳಾದ ಸಿಪಿಐಎಂ, ಎಂಡಿಎಂಕೆ, ಮತ್ತು ಎಂಎಂಕೆ ಪಕ್ಷಗಳು ಬಂದರು ವಿಸ್ತರಿಸುವ ಯೋಜನೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿವೆ.

Donate Janashakthi Media

Leave a Reply

Your email address will not be published. Required fields are marked *