ಶೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಕೈಚಳಕಗಳ ತಾಜಾಪುರಾವೆಗಳು

ಸುಪ್ರಿಂ ಕೋರ್ಟ್‍ ಮಧ್ಯಪ್ರವೇಶಿಸಬೇಕು -ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅದಾನಿ

ಅದಾನಿ ಸಮೂಹ  ತನ್ನ ಕಂಪನಿಗಳ ಮೌಲ್ಯ ಮತ್ತು ಆಸ್ತಿಗಳನ್ನು ಉಬ್ಬಿಸಲು ಅವುಗಳ ಷೇರುಗಳ ಬೆಲೆಗಳಲ್ಲಿ ಕೈಚಳಕ ನಡೆಸಿರುವ ಬಗ್ಗೆ ತಾಜಾ ಪುರಾವೆಗಳು ಹೊರಹೊಮ್ಮಿವೆ.

‘ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಮಾಡುವ ಯೋಜನೆ’ (Organised Crime and Corruption Reporting Project- OCCRP) ಫೈನಾನ್ಶಿಯಲ್ ಟೈಮ್ಸ್ ಮತ್ತು ದಿ ಗಾರ್ಡಿಯನ್ ಪತ್ರಿಕೆಗಳಿಗೆ ಒದಗಿಸಿರುವ  ಮಾಹಿತಿಗಳು ವಿನೋದ್ ಅದಾನಿಯವರ ಇಬ್ಬರು ನಿಕಟ ಸಹವರ್ತಿಗಳು ಬರ್ಮುಡಾದಲ್ಲಿ ಒಂದು ಹೂಡಿಕೆ ನಿಧಿಯನ್ನು ಹೇಗೆ ಬಳಸಿದರು ಮತ್ತು ಅದಾನಿ ಕಂಪನಿಗಳಲ್ಲಿ  ಕೋಟ್ಯಂತರ ಡಾಲರ್ಗಳ  ಷೇರುಗಳನ್ನು ಖರೀದಿಸಲು ‘ಚಿಪ್ಪು ಕಂಪನಿ’ಗಳನ್ನು ಹೇಗೆ ಸ್ಥಾಪಿಸಿದರು ಎಂಬುದನ್ನು ಬಹಿರಂಗಪಡಿಸಿವೆ ಎಂದು ವರದಿಯಾಗಿದೆ.

2014 ರಲ್ಲಿ ಅದಾನಿ ಕಂಪನಿಗಳ ಕಡಲಾಚೆಯ ನಿಧಿಯ ವಿಷಯ ಸೆಬಿ(ಶೇರು ಮಾರುಕಟ್ಟೆಯ ನಿಯಂತ್ರಕ ವ್ಯವಸ್ಥೆ)ಯ  ಪರಿಶೀಲನೆಯಲ್ಲಿತ್ತು. ಆದರೆ ನಂತರ ವಿಚಾರಣೆಗಳನ್ನು ಮುಕ್ತಾಯಗೊಳಿಸಲಾಯಿತು ಎಂಬುದನ್ನೂ ಈ ವರದಿ ತೋರಿಸುತ್ತದೆ.

ಪ್ರಧಾನಮಂತ್ರಿ ಮೋದಿಯವರೊಂದಿಗಿನ ಅದಾನಿ ಸಂಪರ್ಕಗಳು ಇಲ್ಲಿಯವರೆಗೆ ನಿಯಂತ್ರಕ ಅಧಿಕಾರಿಗಳು ಷೇರು ಮಾರುಕಟ್ಟೆಯಲ್ಲಿ ಇಂತಹ ವ್ಯಾಪಕ ವಂಚನೆ ಮತ್ತು ಕೈಚಳಕದ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದಂತೆ ಖಚಿತಪಡಿಸಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ  ಈ ತಾಜಾ ಪುರಾವೆ ಗಂಭೀರವಾದ ತನಿಖೆಯನ್ನು  ಅಗತ್ಯಗೊಳಿಸಿದೆ ಎಂದಿದೆ ಮತ್ತು ಇದರ ಮೇಲೆ ಮುಸುಕೆಳೆಯದಂತೆ  ಖಚಿತಪಡಿಸಲು ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕಾಗುತ್ತದೆ ಎಂದು ಹೇಳಿದೆ. ಅದಾನಿ

ಇದನ್ನೂ ಓದಿಪ್ರಧಾನಿ ಮೋದಿ ಆಪ್ತ ಉದ್ಯಮಿ ಅದಾನಿಯ ಮತ್ತೊಂದು ಮೋಸ ಬಹಿರಂಗ | ಸ್ವಂತ ಷೇರುಗಳ ಮೇಲೆಯೆ ರಹಸ್ಯ ಹೂಡಿಕೆ!

OCCRP ಗೆ ಸಿಕ್ಕಿದ ಹೊಸ ದಸ್ತಾವೇಜುಗಳು ಮೊದಲ ಭಾರಿಗೆ ಮಾರಿಷಸ್‍ ನಲ್ಲಿ ಇದುವರೆಗೆ ತಿಳಿಸದಿರುವ  ಮತ್ತು ಕ್ಲಿಷ್ಟವಾದ ಕಡಲಾಚೆಗಿನ ಕಾರ್ಯಾಚರಣೆಗಳ ವಿವರಗಳನ್ನು ಕೊಡುತ್ತವೆ ಎಂದು ‘ದಿ ಗಾರ್ಡಿಯನ್’ ಪತ್ರಿಕೆ ತಿಳಿಸಿದೆ. ‘ಸೆಬಿ’ಗೆ 2014ರಷ್ಟು ಹಿಂದೆಯೇ ಕಡಲಾಚೆಯ ನಿಧಿಗಳನ್ನು ಬಳಸಿಕೊಂಡು ಅದಾನಿ ಸಮೂಹ ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ  ತಿಳಿಸಲಾಗಿತ್ತು, ರೆವಿನ್ಯೂ ಪತ್ತೇದಾರಿ ನಿರ್ದೇಶನಾಲಯ (ಡಿಆರ್‌ಐ)ದ ಮುಖ್ಯಸ್ಥರು ‘ಸೆಬಿ’ಯ ಮುಖ್ಯಸ್ಥರಿಗೆ ಈ ಕುರಿತು ತಿಳಿಸಿದ್ದರು ಎಂಬುದನ್ನು OCCRP ಬೆಳಕಿಗೆ ತಂದಿರುವ ದಸ್ತಾವೇಜು ಸೂಚಿಸುತ್ತಿರುವುದಾಗಿ ಕೂಡ ‘ದಿ ಗಾರ್ಡಿಯನ್‍’ ಹೇಳಿದೆ.  ಈ ಬಗ್ಗೆ  ‘ಸೆಬಿ’  ಎಂದೂ ಸಾರ್ವಜನಿಕವಾಗಿ ತಿಳಿಸಿಲ್ಲ, ಮಾತ್ರವಲ್ಲ, ಇತೀಚೆಗೆ ನ್ಯಾಯಾಲಯದಲ್ಲಿ ಸಲ್ಲಿಸಿದ ಹೇಳಿಕೆಗಳಲ್ಲಿಯೂ 2020ರ ಮೊದಲು ಅದಾನಿ ಸಮೂಹದ ಬಗ್ಗೆ ತನಿಖೆಗಳು ನಡೆದಿರಲಿಲ್ಲ, 2016ರಷ್ಟು ಹಿಂದೆ ಅದು ಈ ಕುರಿತು ತನಿಖೆ ನಡೆಸಿತ್ತು ಎನ್ನುವುದು ಬುಡವಿಲ್ಲದ್ದು ಎಂದೂ ಹೇಳಿತ್ತು ಎಂದು ‘ದಿ ಗಾರ್ಡಿಯನ್’ ಟಿಪ್ಪಣಿ ಮಾಡಿದೆ. ಅದಾನಿ

 

Donate Janashakthi Media

Leave a Reply

Your email address will not be published. Required fields are marked *