ಮುಖ್ಯವಾಹಿನಿಯ ಕೊನೆಯ ಸ್ವತಂತ್ರ ಸುದ್ದಿ ಬುರುಜನ್ನು ಉರುಳಿಸುವ ಪ್ರಯತ್ನ-ಡಿ.ಯು.ಜೆ. ಖೇದ

“ಆಳುವ ಪಕ್ಷದ ಸಂಕುಚಿತ, ಏಕಧ್ರುವ ಕಣ್ಣೋಟವನ್ನು ಬಲಪಡಿಸುತ್ತದೆ, ಅದನ್ನು ನಾಗರಿಕರ ಮೇಲೆ ಹೇರುತ್ತದೆ”

ನವದೆಹಲಿ: ಎನ್‌ಡಿಟಿವಿಯನ್ನು ಅದಾನಿ ಗುಂಪು ಖರೀದಿಸುತ್ತಿದೆ ಎಂಬ ಸುದ್ದಿ ವರದಿಗಳು ಆಘಾತವುಂಟು ಮಾಡಿವೆ ಎಂದು ದಿಲ್ಲಿ ಪತ್ರಕರ್ತರ ಸಂಘ (ಡಿಯುಜೆ) ಹೇಳಿದೆ, ಭಾರತೀಯ ಅರ್ಥವ್ಯವಸ್ಥೆಯ ಇಬ್ಬರು ಪಾಳೇಗಾರರು ತಮ್ಮ ನಡುವೆ ಸಮಸ್ತ ಮಾಧ್ಯಮ ಉದ್ಯಮವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ, ಸ್ವತಂತ್ರ ಪ್ರಯತ್ನಗಳಿಗೆ  ಅವಕಾಶವಿಲ್ಲದಂತೆ ಮಾಡಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿರುವ ಡಿಯುಜೆ ಈ ಪ್ರಯತ್ನ ಮಾಧ್ಯಮಗಳಿಂದಾಗಲೀ, ಅಥವ ನಾಗರಿಕ ಸಮಾಜ ಅಥವಾ ರಾಜಕೀಯ ವಿರೋಧಿಗಳಿಂದಾಗಲೀ, ಯಾವುದೇ ವಿರೋಧವನ್ನು ಸಹಿಸದ ಪ್ರಸಕ್ತ ಸರ್ಕಾರದ ಆದೇಶದ ಮೇರೆಗೆ ನಡೆಯುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ,  ಈ ನಡೆಯು ಆಳುವ ಪಕ್ಷದ ಸಂಕುಚಿತ, ಏಕಧ್ರುವ ಕಣ್ಣೋಟವನ್ನು ಬಲಪಡಿಸುತ್ತದೆ ಮತ್ತು ಅದನ್ನು ನಾಗರಿಕರ ಮೇಲೆ ಹೇರುತ್ತದೆ ಎಂದು ಹೇಳಿದೆ.

ಟಿವಿಮಾಧ್ಯಮಗಳುಹೆಚ್ಚೆಚ್ಚಾಗಿ ಕಾರ್ಪೊರೇಟ್‌ಗಳುಮತ್ತುಕೆಲವುರಾಜಕೀಯಪಕ್ಷಗಳಧ್ವನಿಯಾಗಿಮಾರ್ಪಟ್ಟಿವೆ. ವಿವಿಧ ಮಾಧ್ಯಮಗಳಲ್ಲಿ ಹಿಡುವಳಿಗಳುಮತ್ತುಮಾಧ್ಯಮಏಕಸ್ವಾಮ್ಯಗಳುಸರ್ಕಾರಮತ್ತುದೊಡ್ಡಬಂಡವಳಿಗರ  ಅಭಿಪ್ರಾಯಗಳನ್ನೇ ಎಲ್ಲವಾಹಿನಿಗಳಲ್ಲೂ ಪುನರಾವರ್ತನೆಗೊಳಿಸುವಂತೆ ನೋಡಿಕೊಳ್ಳುತ್ತಿವೆ. ಪಕ್ಷಪಾತ ಎಷ್ಟು ಸ್ಪಷ್ಟವಾಗಿದೆಯೆಂದರೆ, ಪ್ರತಿ ಜನಾಂದೋಲನದ ಸಮಯದಲ್ಲಿ ಸಂಬಂಧಪಟ್ಟ ಜನವಿಭಾಗಗಳು  ಕೆಲವು ಟಿವಿಚಾನೆಲ್‌ಗಳು ಮತ್ತು ಅವುಗಳ ನಿರೂಪಕರುಗಳನ್ನು ಬಹಿರಂಗವಾಗಿ ತಿರಸ್ಕರಿಸುವಂತಾಗಿದೆ.. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನೆಗಳು ಮತ್ತು ರೈತರ ಹೋರಾಟದಸಮಯದಲ್ಲಿ, ಜನರುಈಚಾನೆಲ್‌ಗಳಅಪಪ್ರಚಾರದಮಿಂಚುದಾಳಿಗಳನ್ನುಜೋರಾಗಿಪ್ರಶ್ನಿಸಿದರು. ಕೆಲವು ಮಾಧ್ಯಮ ನಿರೂಪಕರು ವಹಿಸಿದ ಪಕ್ಷಪಾತದ ಪಾತ್ರ  ಮಾಧ್ಯಮದ ವಿಶ್ವಾಸಾರ್ಹತೆಯನ್ನು ಸಾರ್ವಕಾಲಿಕ ಕೆಳಮಟ್ಟಕ್ಕೆ ತಂದಿರುವ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತ ಡಿಯುಜೆ . ಸಮತೋಲಿತ, ನೈತಿಕವರದಿಗಾರಿಕೆ, ವಿಶ್ಲೇಷಣೆ ಮತ್ತು ಚರ್ಚೆಯ ಬದಲು  ಕರ್ಕಶ ಅಪಪ್ರಚಾರವನ್ನು ನಡೆಸಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದೆ.

ಕೊನೆಯ ಸ್ವತಂತ್ರ ಮುಖ್ಯವಾಹಿನಿಯಾಗಿ ಉಳಿದಿರುವ ಎನ್‍.ಡಿ.ಟಿ.ವಿ.ಯನ್ನು ವಶಪಡಿಸಿಕೊಳ್ಳುವ ಪ್ರಯತ್ನ ತಮ್ಮಂತಹ ವೃತ್ತಿಪರಪತ್ರಕರ್ತರಲ್ಲಿ ತೀವ್ರ ನಿರಾಶೆ ಮತ್ತು ನಿರುತ್ಸಾಹ ಉಂಟುಮಾಡಿದೆ ಎಂದಿರುವ ಡಿಯುಜೆ ಇನ್ನು ಮುಂದೆ ಎನ್‍.ಡಿ.ಟಿ.ವಿ.ಯನ್ನು ಈಗ ದೇಶ ಮತ್ತು ವಿದೇಶಗಳಲ್ಲಿ ಅನೇಕ ವ್ಯಾಪಾರ ಉದ್ಯಮಗಳನ್ನು ವ್ಯಾಪಿಸಿರುವ ಅದಾನಿ ಸಾಮ್ರಾಜ್ಯವನ್ನು ಪ್ರಾಯೋಜಿಸಲು ಬಳಸಲಾಗುತ್ತದೆ. ಗಣಿಗಾರಿಕೆಯಿಂದ ಹಿಡಿದು ಬಂದರುಗಳು, ವಿಮಾನ ನಿಲ್ದಾಣಗಳು, ಆಹಾರ ಧಾನ್ಯಗಳು, ಖಾದ್ಯತೈಲಗಳು, ಸಿಮೆಂಟ್‌ ಮತ್ತು ಇಂಧನದ ವರೆಗಿನ ಅನೇಕ ವಲಯಗಳಲ್ಲಿನ ಬೆಳವಣಿಗೆಗಳ ನ್ಯಾಯಯುತ ವರದಿ ಅಸಾಧ್ಯವಾಗುತ್ತದೆ ಎಂದು ಡಿಯುಜೆ ಆತಂಕ ವ್ಯಕ್ತಪಡಿಸಿದೆ.

“ಈ ಹಿಂದಿನ ವರ್ಷಗಳಲ್ಲಿ ಎನ್‍.ಡಿ.ಟಿ.ವಿ.ಯ ಕೆಚ್ಚೆದೆಯ ಸಿಬ್ಬಂದಿ ಮತ್ತು ಆಡಳಿತದ ಮಂದಿ  ಅನೇಕ ಒತ್ತಡಗಳು ಮತ್ತು ಸವಾಲುಗಳನ್ನು ಎದುರಿಸಿಯೂ ವೃತ್ತಿಪರ ದೃಷ್ಟಿಕೋನದಿಂದ ನಮಗೆ ಸುದ್ದಿ ಮತ್ತು ಅಭಿಪ್ರಾಯಗಳನ್ನು ತಂದು ಕೊಟ್ಟಿದ್ದಾರೆ, ಅದಕ್ಕಾಗಿ ಅವರನ್ನು ನಾವು ವಂದಿಸುತ್ತೇವೆ” ಎಂದಿರುವ ದಿಲ್ಲಿ ಪತ್ರಕರ್ತರ ಸಂಘ, ಈಗ  ಸ್ವತಂತ್ರ ಪತ್ರಕರ್ತರನ್ನು ತೆಗೆದು ಹಾಕುವುದು ಅಥವ  ಬಲವಂತದ ರಾಜೀನಾಮೆಗಳು ನಡೆಯುತ್ತವೆ ಎಂಬ ಭಯವನ್ನು ವ್ಯಕ್ತಪಡಿಸುತ್ತ  ಅವರ ಭವಿಷ್ಯದ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸಿದೆ.

ಎನ್‍.ಡಿ.ಟಿ.ವಿ. ಯನ್ನು ಸ್ವಾಧೀನಪಡಿಸಿಕೊಳ್ಳುವ ಈ ಪ್ರಯತ್ನ ಮಾಧ್ಯಮಗಳಿಂದಾಗಲೀ, ಅಥವ ನಾಗರಿಕ ಸಮಾಜ ಅಥವಾ ರಾಜಕೀಯ ವಿರೋಧಿಗಳಿಂದಾಗಲೀ, ಯಾವುದೇ ವಿರೋಧವನ್ನು ಸಹಿಸದ ಪ್ರಸಕ್ತ ಸರ್ಕಾರದ ಆದೇಶದ ಮೇರೆಗೆ ನಡೆಯುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ.  ಈ ನಡೆಯು ಆಳುವ ಪಕ್ಷದ ಸಂಕುಚಿತ, ಏಕಧ್ರುವ ಕಣ್ಣೋಟವನ್ನು ಬಲಪಡಿಸುತ್ತದೆ ಮತ್ತು ಅದನ್ನು ನಾಗರಿಕರ ಮೇಲೆ ಹೇರುತ್ತದೆ. ಭಾರತ ಇನ್ನೂ ಪ್ರಜಾಪ್ರಭುತ್ವವಾಗಿದೆ  ಎಂಬ ಭ್ರಮೆ ಈಗ ನುಚ್ಚುನೂರಾಗಿದೆ ಎಂದು ದಿಲ್ಲಿ ಪತ್ರಕರ್ತರ ಸಂಘ ಖೇದದಿಂದ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *