ಚಾಮರಾಜನಗರ: ಕ್ಯಾನ್ಸರ್ ಚಿಕಿತ್ಸೆ ಬಳಿಕ ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ 131 ಸಿನಿಮಾ ಶೂಟಿಂಗ್ ಗೆ ಬ್ರೇಕ್ ಹಾಕಿ ಪತ್ನಿ ಗೀತಾ ಶಿವರಾಜ್ ಕುಮಾರ್ ಒಟ್ಟಿಗೆ ತಂದೆಯ ಹುಟ್ಟೂರು ಚಾಮರಾಜನಗರ ಗಡಿಭಾಗವಾದ ಗಾಜನೂರಿಗೆ ಭೇಟಿಕೊಟ್ಟರು.ಸೋದರತ್ತೆ ನಾಗಮ್ಮ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಕೆಲ ಸಮಯ ಕಳೆದಿದ್ದಾರೆ.
ಇದನ್ನು ಓದಿ :-ಕಲಬುರಗಿ| ಮೀಟರ್ ಬಡ್ಡಿ ಕಿರುಕುಳ: ಆಟೋ ಚಾಲಕ ಆತ್ಮಹತ್ಯೆ
ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬಂದ ಬಳಿಕ ಶಿವಣ್ಣ ಕೆಲ ತಿಂಗಳು ರೆಸ್ಟ್ ಮೂಡ್ ನಲ್ಲಿದ್ದರು. ವಿಶ್ರಾಂತಿಗೆ ವಿರಾಮ ಹಾಕಿ ಕಳೆದ ವಾರಷ್ಟೇ 131 ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾ ಬ್ಯುಸಿ ನಡುವೆಯೂ ಗಾಜನೂರಿಗೆ ಭೇಟಿ ಕೊಟ್ಟು ಸಮಯ ಕಳೆದಿದ್ದಾರೆ.