ಬೆಂಗಳೂರು: ಕನ್ನಡದ ಹಿರಿಯ ನಟ ದ್ವಾರಕೀಶ್ ನಿಧನರಾಗಿದ್ದಾರೆ.81 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಕನ್ನಡದ ಕುಳ್ಳ ಎಂದೇ ಹೆಸರುವಾಸಿ ಆಗಿದ್ದ ಸ್ಯಾಂಡಲ್‌ವುಡ್ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 81 ವರ್ಷ ವಯಸ್ಸಾಗಿತ್ತು.ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಆನ್ಲೈನ್ ಮೂಲಕ ಡಿಪ್ಲೋಮಾ ಸಿಇಟಿ; ಎಐಡಿಎಸ್‌ಒ ವಿರೋಧ
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19ರಂದು ಜನಿಸಿದ ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ ಮತ್ತು ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ , ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಪ್ರಾರಂಭಿಸಿದರು. ಆದರೆ 1963ರಲ್ಲಿ ವ್ಯಾಪಾರ ಬಿಟ್ಟು ಬಣ್ಣದ ಬದುಕಿಗೆ ಕಾಲಿಟ್ಟರು.
1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.
ಕನ್ನಡ ಪ್ರೇಕ್ಷಕರು ಎಂದೂ ಮರೆಯದ ದ್ವಾರಕೀಶ್ ಅವರ ಬೆಸ್ಟ್ ಸಿನಿಮಾಗಳೆಂದರೆ ಮಮತೆಯ ಬಂಧನ, ಮೇಯರ್ ಮುತ್ತಣ್ಣ, ಕುಲ್ಲಾ ಏಜೆಂಟ್ 000, ಕೌಬಾಯ್ ಕುಲ್ಲಾ, ಭಾಗ್ಯವಂತರು, ಕಿಟ್ಟು ಪುಟ್ಟು, ಸಿಂಗಾಪುರದಲ್ಲಿ ರಾಜ ಕುಳ್ಳ, ಪ್ರೀತಿ ಮಾಡು ತಮಾಷೆ ನೋಡು, ಕುಳ್ಳ ಕುಳ್ಳಿ, ಮಂಕು ತಿಮ್ಮ, ಗುರು ಶಿಷ್ಯರು, ಮನೆ ಮನೆ ಕಥೆ, ಪ್ರೇಮದ ಕಾದಂಬರಿ, ಪೆದ್ದ ಗೆದ್ದ, ಅದೃಷ್ಟವಂತ, ನ್ಯಾಯ ಎಲ್ಲಿದೆ, ಗೆದ್ದ ಮಗ, ಆನಂದ ಭೈರವಿ, ಅದುತಾ ವರಿಸು, ಪ್ರಚಂಡ ಕುಳ್ಳ, ಪೊಲೀಸ್ ಪಾಪಣ್ಣ, ಇಂದಿನ ರಾಮಾಯಣ, ಆಪ್ತಮಿತ್ರ, ಚೌಕ. ದ್ವಾರಕೀಶ್ ಕೊನೆಯದಾಗಿ ಚೌಕ ಸಿನಿಮಾದಲ್ಲಿ ನಟಿಸಿದ್ದರು.
ಇಂತಹ ಮಹಾನ್ ಕಲಾವಿದ ನಿಧನರಾಗಿರುವುದು ಕನ್ನಡ ಚಿತ್ರೋಧ್ಯಮಕ್ಕೆ ಬಹು ದೊಡ್ಡ ನಷ್ಟವೇ ಆಗಿದೆ.
ಇದನ್ನು ನೋಡಿ : ಸ್ಕಿಂ ನೌಕರರ ಬದಕನ್ನು ಬೀದಿಗೆ ತಂದ ಬಿಜೆಪಿಯನ್ನು ಸೋಲಿಸುತ್ತೇವೆ – ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ನಿರ್ಧಾರ