ಬೆಂಗಳೂರು : ಅಹೋರಾತ್ರಿ ಧರಣಿ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ವಾರಿಯರ್ ಎಂದು ಚಪ್ಪಾಳೆ ತಟ್ಟಿ ಸುಮ್ಮನೆ ಕುಳಿತರೆ ಸಾಲುವುದಿಲ್ಲ. ಅವರ ಬೇಡಿಕೆಗಳನ್ನು ಈಡೇರಿಸಿ ಎಂದು ನಟ ಚೇತನ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಹೋರಾಟ ಅಗತ್ಯವಾಗಿದೆ. ಪ್ರತಿಯೊಂದು ಮಹಿಳೆಯರು ಸಮಾಜದ ಅಭಿವೃದ್ಧಿಗೆ ಅವಶ್ಯಕವಾಗಿದ್ದಾರೆ. ಇಂತಹ ಮಹಿಳೆಯರಿಗೆ ಸರ್ಕಾರದ ಸುಗಮವಾದ ಮಾತುಗಳು ನಮಗೆ ಬೇಕಾಗಿಲ್ಲ. ಕೋವಿಡ್ ಸಮಯದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದರೂ ಅಂಗನವಾಡಿ ಕಾರ್ಯಕರ್ತೆಯರುಗೆ ಸಹಾಯ ಆಗುತ್ತಿಲ್ಲ. ಕೋವಿಡ್ ವಾರಿಯರ್ ಅಂತ ಚಪ್ಪಾಳೆ ತಟ್ಟುತ್ತಾರೆ. ಆದರೆ, ಅವರಿಗೆ ಆ ಚಪ್ಪಾಳೆ ಬೇಕಾಗಿಲ್ಲ. ಬೇಡಿಕೆಗಳನ್ನು ಈಡೇರಿಸಿ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : 9 ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ನೌಕರರ ಪ್ರತಿಭಟನೆ
ರಾಜ್ಯದಲ್ಲಿ ಸರ್ಕಾರ ಶ್ರೀಮಂತರ ಪರವಾಗಿದೆ. ಇಲ್ಲಿ ಸರ್ಕಾರ ಜನಪರವಾಗಿ ಕಾರ್ಯಗಳನ್ನು ಮಾಡುತ್ತಿಲ್ಲ. ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು 2017 – 2018ರಲ್ಲೂ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡಿದ್ದರು. ಅವರ ಬೇಡಿಕೆಗಳು ನ್ಯಾಯಯುತವಾಗಿವೆ. ಆದರೆ, ಇವರು ಸಾಮಾನ್ಯ ನೌಕರರು, ಬಡವರು ಹಾಗೂ ಮಹಿಳೆಯರು ಆಗಿದ್ದು, ಇವರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರಿಗೆ ಗೌರವ ನೀಡುತ್ತಿಲ್ಲ. ಇಂತಹ ನಿರ್ಲಕ್ಷ್ಯ ಧೋರಣೆಗಳನ್ನು ಬಿಟ್ಟು ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು. ಇಲ್ಲದಿದ್ದರೆ ಹೋರಾಟದ ಸ್ವರೂಪವನ್ನು ಬದಲಾವಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ ಆಗಲಿದೆ ಎಂದು ತಿಳಿಸಿದರು.
ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಐಟಿಯು ಮುಖ್ಯಸ್ಥರು ಇಂದು ಸಂಜೆಯೊಳಗೆ ಮುಖ್ಯಮಂತ್ರಿ ಜೊತೆ ಸಭೆ ಕರೆದು ಮಾತನಾಡಬೇಕು. ಇಲ್ಲದಿದ್ದರೆ ನಾಳೆ ಮುಂದಿನ ನಡೆ ಬೇರೆ ಆಗಿರುತ್ತದೆ. ಇಂದು ಸಂಜೆಯೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಿರುವ ಆದೇಶ ಜಾರಿಯಾಗದಿದ್ದರೆ ನಾಳೆ ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕುವ ಬಗ್ಗೆ ಗಡುವು ನೀಡಿದ್ದಾರೆ. ಒಂದು ವೇಳೆ ಸಿಎಂ ಮನೆಯನ್ನು ಮುತ್ತಿಗೆ ಹಾಕಲು ಅಂಗನವಾಡಿ ಕಾರ್ಯಕರ್ತೆಯರು ತೆರಳಿದಲ್ಲಿ ಅವರೊಂದಿಗೆ ನಾನೂ ಹೋರಾಟಕ್ಕೆ ಹೋಗುತ್ತೇನೆ ಎಂದು ನಟ ಚೇತನ್ ತಿಳಿಸಿದ್ದಾರೆ.
1 ತಿಂಗಳ ಕಥೆ ಸರ್ ಕೇಳಿ 30 ದಿನ್ ಅದರಲ್ಲಿ 5ರವಿವಾರ ಉಳಿದ 25 ದಿನ್ 1ಗೌರವ ಧನ ಸಭೆ 1 ವಲಯಸಭೆ ಉಳಿದ 23ದಿನ್ ಅದರಲ್ಲಿ 1 ಪೌಷ್ಟಿಕ ಶಿಬಿರ 2 ತಾಯಿಂದಿರ ಸಭೆ 2 ಫೋಶನ ಅಭಿಯಾನ ಕಾರ್ಯಕ್ರಮ 23–5–18ದಿನ ದಲ್ಲಿ 1 ಬಾಲ ವಿಕಾಸ ಸಮಿತಿ ಸಭೆ ಉಳಿತು 17 ದಿನ 1ದಿನ ರೇಶನ್ ಹಂಛೋಕೆ 1 ದಿನ್ ಮಕ್ಕಳ ತೂಕ ಉಳಿತು 15 ದಿನ ಇನ್ನು ಆರೋಗ್ಯ ಇಲಾಖೆ ಕೆಲಸ ಪೋಲಿಯೋ ಕಾರ್ಯಕ್ರಮ 4ದಿನ 11 ದಿನಉಳಿತು ಮಾತ್ರ ಇದು ಅಂಗ ನವಾಡಿ ಶಿಕ್ಷಕಿ ಯರ ಕೆಲಸ ಹೇಳಿ
ಸರ್ಕಾರ ಕಣ್ಣಿಗೆ ಬಟ್ಟೆ ಕಟ್ಟಿದೆ ಸ್ವಾಮಿ