ಮಾರುಕಟ್ಟೆಯ ಅರ್ಧದಷ್ಟು ಬೆಲೆಗೆ ಟಮೆಟೋ ಮಾರಾಟ ಮಾಡಲು ಕ್ರಮ

ಚೆನ್ನೈ : ದೇಶಾದ್ಯಂತ ಟೊಮೆಟೋ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ರೈತರಿಂದ ನೇರವಾಗಿ ಟೊಮೆಟೋ ಖರೀದಿಸಿ ಮಾರುಕಟ್ಟೆಯ ಅರ್ಧದಷ್ಟು ಬೆಲೆಗೆ ಮಾರಾಟ ಮಾಡಲು ಕ್ರಮಕೈಗೊಳ್ಳುತ್ತಿಲಾಗುತ್ತಿದೆ ಎಂದು ಸಹಕಾರಿ ಸಚಿವ ಪೆರಿಯಕರುಪ್ಪನ್ ಹೇಳಿದ್ದಾರೆ.

ಇದನ್ನೂ ಓದಿ:ತಮಿಳುನಾಡು: ಸಚಿವರನ್ನು ಸಂಪುಟದಿಂದ ವಜಾಗೊಳಿಸಿ ಕೆಲವೇ ಗಂಟೆಗಳಲ್ಲಿ ಆದೇಶ ಹಿಂಪಡೆದ ರಾಜ್ಯಪಾಲ!

ಟೊಮೆಟೋ, ತರಕಾರಿ ಬೆಲೆ ಕಳೆದ ಕೆಲ ವಾರಗಳಿಂದ  ಒಂದೇ ಸಮನೆ ಆಕಾಶಕ್ಕೆ ಏರುತ್ತಿದೆ. ವಿಪರೀತ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಟೊಮೆಟೋ ದರ ಕೂಡ ಶತಕದ ಗಡಿ ದಾಟಿದ್ದು, ಅನೇಕರು ಟೊಮೆಟೋ ಬಳಸದೆಯೇ ಅಡುಗೆ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದಾರೆ. ಟೊಮೆಟೋ ದರ ಗಗನಕ್ಕೇರುತ್ತಿರುವ ಹೊತ್ತಿನಲ್ಲೇ ಟೊಮೆಟೋ ಖರೀದಿಸುವ ಗ್ರಾಹಕರಿಗೆ  ಚೆನ್ನೈನಲ್ಲಿ ಹೊಸದೊಂದು ಐಡಿಯಾವನ್ನು ಜಾರಿಗೆ ತರಲಾಗಿದೆ.

ಇಂದಿನಿಂದ ಚೆನ್ನೈ ನಿವಾಸಿಗಳು ತಮ್ಮ ಪಡಿತರ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಟೊಮೆಟೋವನ್ನು ಖರೀದಿಸಬಹುದಾಗಿದೆ. ಸಾಮಾನ್ಯವಾಗಿ ಚೆನ್ನೈನ ಇತರ ಅಂಗಡಿಗಳಲ್ಲಿ ಸದ್ಯ ಟೊಮೆಟೋ ಕೆಜಿ ಒಂದಕ್ಕೆ 100-130 ರೂಪಾಯಿ ಇದೆ. ಆದರೆ ಪಡಿತರ ಅಂಗಡಿಗಳಲ್ಲಿ ಕಡಿಮೆ ದರದಲ್ಲಿ ಟೊಮೆಟೋ ಸಿಗಲಿದ್ದು, ಕೆಜಿ ಒಂದಕ್ಕೆ 60 ರೂಪಾಯಿ ನಿಗದಿ ಪಡಿಸಲಾಗಿದೆ. ಸಹಕಾರಿ ಸಚಿವ ಕೆಆರ್ ಪೆರಿಯಕುರುಪ್ಪನ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮಂಗಳವಾರದಿಂದ ನಗರದಾದ್ಯಂತ 82 ಸಾರ್ವಜನಿಕ ವಿತರಣಾ ಅಂಗಡಿಗಳು (ಪಿಡಿಎಸ್) ಅಥವಾ ಪಡಿತರ ಅಂಗಡಿಗಳಲ್ಲಿ ಟೊಮೆಟೋ ಕೆಜಿಗೆ 60 ರೂ.ಗೆ ಮಾರಾಟವಾಗಲಿದೆ. ಮುಂದಿನ ದಿನಗಳಲ್ಲಿ ಚೆನ್ನೈ ಹೊರತುಪಡಿಸಿ ಇತರ ಜಿಲ್ಲೆಗಳ ಎಲ್ಲಾ ಪಡಿತರ ಅಂಗಡಿಗಳಲ್ಲಿ ಟೊಮೇಟೊ ಮಾರಾಟ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *