ಜಾತಿ ಗಣತಿ ಸಮೀಕ್ಷೆಗೆ ಗೈರಾದ ಸಿಬ್ಬಂದಿಗಳ ವಿರುದ್ಧ ಕ್ರಮ: ಸಂಪುಟ ಸಭೆ

ಬೆಂಗಳೂರು: ರಾಜ್ಯದಲ್ಲಿ  ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ಸೆಪ್ಟೆಂಬರ್ 22 ರಿಂದ ಪ್ರಾರಂಭಿಸಿದ್ದು, ಈ ಒಂದು ಸಮೀಕ್ಷೆಗೆ ರಾಜ್ಯದಲ್ಲಿ ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಗಣತಿ 

ಆದರೆ ಸಮೀಕ್ಷೆ ಆರಂಭದ ದಿನವೇ ನೂರಾರು ಸಮಸ್ಯೆಗಳು ಎದುರಾಗಿದ್ದು ಸರ್ವರ್ ಸಮಸ್ಯೆ ಹಾಗೂ ಮೊಬೈಲ್ನಲ್ಲಿ ತಾಂತ್ರಿಕ ದೋಷಗಳಿಂದ ಸಮೀಕ್ಷೆ ನಡೆಸುವುದು ಕಷ್ಟವಾಗಿದೆ.

ಇದನ್ನೂ ಓದಿ: ಮಾರುಕಟ್ಟೆ ಪರವಾನಗಿ ರದ್ದುಗೊಳಿಸಿದ ನಿರ್ಧಾರವನ್ನು ರದ್ದುಪಡಿಸಿ: ರೈತರು ಪ್ರತಿಭಟನೆ

ಇತ್ತ ಇನ್ನೊಂದು ಕಡೆ ಇಂದು ಸಚಿವ ಸಂಪುಟದಲ್ಲಿ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಗೈರಾದ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಒಂದು ಕಡೆ ಸರ್ವರ್ ಇಲ್ಲ ಮೊಬೈಲಲ್ಲಿ ತಾಂತ್ರಿಕ ದೋಷಗಳು ಇವೆ ಎಂದು ಶಿಕ್ಷಕರು ಈ ಒಂದು ಜಾತಿಗಣತಿ ಸಮೀಕ್ಷೆ ಮುಂದೂಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಸಮೀಕ್ಷೆಗೆ ಗೈರಾದ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಪುಟ ಮುಂದಾಗಿದೆ.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ‘ನ್ಯಾಯ ಸಮಾವೇಶ’ದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *