ಮಹಿಳಾಧಿಕಾರಿಗೆ ಬೆದರಿಕೆ ಹಾಕಿದ್ದು ನಿಜವಾದರೆ ಶಾಸಕನ ಪುತ್ರನ ವಿರುದ್ಧ ಕ್ರಮ: ಜಿ ಪರಮೇಶ್ವರ್

ಬೆಂಗಳೂರು: ಮಹಿಳಾಧಿಕಾರಿಗೆ ಸಂಗಮೇಶ್ ಪುತ್ರ ಬೆದರಿಕೆ ಹಾಕಿದ್ದು ನಿಜವಾದರೆ ಬಸವೇಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ತಿಳಿಸಿದ್ದಾರೆ.

ಶಿವಮೊಗ್ಗ ಜಲ್ಲೆಯಲ್ಲಿ ನಿನ್ನೆ ಮರಳು ಮಾಫಿಯಾ ಘಟನಾ ಸ್ಥಳಕ್ಕೆ ತೆರಳಿದ ವೇಳೆ ಗಣಿ ಮತ್ತು ಮಗುವಿಜ್ಞಾನ ಇಲಾಖೆ ಮಹಿಳಾಧಿಕಾರಿಗೆ ಶಾಸಕ ಸಂಗಮೇಶ್ ಪುತ್ರ ಬಸವೇಶ್ ಬೆದರಿಕೆ ಹಾಗೂ ಅವಾಚೆ ಪದಗಳಿಂದ ನಿಂದನೆ ಮಾಡಿರುವ ಪ್ರಕರಣದ ಕುರಿತು ಅವರು ಮಾತನಾಡಿದರು.

ಇದನ್ನೂ ಓದಿ: ಮಂಗಳೂರು| ಕಂಬಳ ನಡೆಸುವವರಿಂದ ಕೃಷಿಭೂಮಿ ಉಳಿಸಲು ಸಾಧ್ಯವೇ? – ಮುನೀರ್ ಕಾಟಿಪಳ್ಳ ಪ್ರಶ್ನೆ

ಮಹಿಳಾ ಅಧಿಕಾರಿಗೆ ಸಂಗಮೇಶ್ ಪುತ್ರನಿಂದ ನಿಂದನೆ ಆರೋಪದ ಕುರಿತಾಗಿ ಸಂಗಮೇಶ್ ಪುತ್ರ ಬೆದರಿಕೆ ಹಾಕಿರುವುದು ಗೊತ್ತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ಆಗಿದೆ ಎಂದರು.

ಆದಷ್ಟು ಬೇಗ ಪ್ರಕರಣದ ತನಿಖೆಯ ವರದಿ ಬರಲಿದೆ ವರದಿಯ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಉದಯಗಿರಿ ಠಾಣೆ ಕೇಸ್ ವಿಚಾರವಾಗಿಯೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ನಮಗೆ ಸಿಕ್ಕಿರುವಂತಹ ವಿಡಿಯೋವನ್ನು ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಇನ್ನು ಬಿಜೆಪಿ ಸರ್ಕಾರ ಇದ್ದಾಗ ಯಾವುದೇ ಕೇಸ್ ಆಗಿಲ್ವಾ? ಎಂದು ಇದೆ ವೇಳೆ ಗೃಹ ಸಚಿವ ಪರಮೇಶ್ವರ್ ಗರಂ ಆದರು.

ಇದನ್ನೂ ನೋಡಿ: ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ರೈತ ಕೂಲಿಕಾರರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *