ಕೊಯಮತ್ತೂರು: ನಗರದ ಏರ್‌ಪೋರ್ಟ್ ಸಮೀಪ ತನ್ನ ಬಾಯ್‌ಫ್ರೆಂಡ್ ಜತೆ ಕಾರಿನಲ್ಲಿ ಮಾತನಾಡುತ್ತಾ ಕುಳಿತಿದ್ದ ಎಂಬಿಎ ವಿದ್ಯಾರ್ಥಿನಿಯನ್ನು ಎಳೆದೊಯ್ದ ಮೂವರ ಗುಂಪು ಅತ್ಯಾಚಾರವೆಸಗಿದ ಘಟನೆ ನವೆಂಬರ್ 2ರಂದು ನಡೆದಿದೆ. ವಿದ್ಯಾರ್ಥಿನಿ
ಕಾರಿನ ಬಳಿ ಆಗಮಿಸಿದ ಕಾಮುಕರು ಆಕೆಯ ಬಾಯ್‌ಫ್ರೆಂಡ್ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಅಲ್ಲಿಂದ ಎಳೆದೊಯ್ದು ಅತ್ಯಾಚಾರ ಎಸಗಿದ್ದರು. ಇನ್ನು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಬಾಯ್‌ಫ್ರೆಂಡ್ ಪೊಲೀಸರನ್ನು ಘಟನಾ ಸ್ಥಳಕ್ಕೆ ಕರೆತಂದಿದ್ದ.
ಇದನ್ನೂ ಓದಿ: ಬಿಹಾರ ಚುನಾವಣೆಯ ಫಲಿತಾಂಶದ ಬಳಿಕ ಸಚಿವ ಸಂಪುಟ ಪುನಾರಚನೆ: ಸಿಎಂ ಸಿದ್ದರಾಮಯ್ಯ
ಹುಟುಕಾಟ ಆರಂಭಿಸಿದ ಪೊಲೀಸರಿಗೆ ಬೆಳಗಿನ ಜಾವ 4 ಗಂಟೆಗೆ ವಿಮಾನ ನಿಲ್ದಾಣದಿಂದ ಒಂದು ಕಿಲೊಮೀಟರ್ ದೂರದಲ್ಲಿ ಸಂತ್ರಸ್ತೆ ವಿವಸ್ತ್ರ ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿ ದೊರಕಿದ್ದಳು.
ಹೀಗೆ ಸಂತ್ರಸ್ತೆಯನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಅತ್ಯಾಚಾರಿಗಳಿಗಾಗಿ ಹುಡುಕಾಟ ಆರಂಭಿಸಿದ ಪೊಲೀಸರು 24 ಗಂಟೆಯೊಳಗೆ ಎಡೆಮುರಿ ಕಟ್ಟಿದ್ದಾರೆ.
ಇನ್ನು ಅತ್ಯಾಚಾರಿಗಳ ಜಾಡು ಹಿಡಿದು ಅವರನ್ನು ಬಂಧಿಸಲು ಹೋದ ಪೊಲೀಸರ ಮೇಲೂ ಸಹ ಅವರು ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಪೊಲೀಸರು ಮೂವರ ಕಾಲಿಗೂ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ದವಾಸಿ, ಕಾರ್ತಿಕ್ ಹಾಗೂ ಕಾಳೀಶ್ವರನ್ ಬಂಧಿತ ಆರೋಪಿಗಳಾಗಿದ್ದಾರೆ.
ಇದನ್ನೂ ನೋಡಿ: ಜನಸ್ನೇಹಿ ಸಂತೆ – ರಾಗಿಕಣ ಸಂತೆ | ಪ್ರತಿ ಭಾನುವಾರ | ಉಚಿತ ಪ್ರವೇಶ
