ಗುಜರಾತ್: 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಬಾಲಕಿಯ ಖಾಸಗಿ ಭಾಗಕ್ಕೆ ರಾಡ್ ಹಾಕಿರುವ ಅಮಾನವೀಯ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ. ಈ ಸಂಬಂಧ 35 ವರ್ಷದ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ. ಅತ್ಯಾಚಾರ
ಡಿಸೆಂಬರ್ 4 ರಂದು ರಾಜ್‌ಕೋಟ್‌ನ ದಾಹೋದ್ ಜಿಲ್ಲೆಯ ಅತ್ಕೋಟ್‌ನಲ್ಲಿ ಮಗು ಹೊಲದ ಬಳಿ ಆಟವಾಡುತ್ತಿದ್ದಾಗ ಆಕೆಯ ಪೋಷಕರು ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದರು. ಅಪರಿಚಿತ ವ್ಯಕ್ತಿಯೊಬ್ಬರು ಆಕೆಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಗು ಕಿರುಚಿದಾಗ, ದಾಳಿಕೋರನು ಲೋಹದ ರಾಡ್ ಅನ್ನು ಆಕೆಯ ಖಾಸಗಿ ಭಾಗಗಳಿಗೆ ತುರುಕಿ ತೀವ್ರ ರಕ್ತಸ್ರಾವ ಉಂಟುಮಾಡಿ ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ.
ಕುಟುಂಬವು ಆಕೆಯನ್ನು ಹುಡುಕಲು ಪ್ರಾರಂಭಿಸಿದಾಗ ಆಕೆ ಹೊಲದ ಮಧ್ಯೆ ಬಿದ್ದಿರುವುದನ್ನು ನೋಡಿದ್ದಾರೆ.ತೀವ್ರ ರಕ್ತಸ್ರಾವವಾಗುತ್ತಿದ್ದ ಆಕೆಯನ್ನು ರಾಜ್‌ಕೋಟ್‌ನ ಜನ್ನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯ ಮೂಲಗಳ ಪ್ರಕಾರ, ಆಕೆಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಬೆಂಗಳೂರು | ದೆಹಲಿ ಕರ್ನಾಟಕ ಸಂಘದಲ್ಲಿ 17ರಂದು ಕುವೆಂಪು ಕುರಿತು ವಿಚಾರಸಂಕಿರಣ
ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ದೊಡ್ಡ ಪ್ರಮಾಣದಲ್ಲೇ ರಾಜ್‌ಕೋಟ್ ಪೊಲೀಸರು ತಂಡವನ್ನು ರಚಿಸಿ ಆರೋಪಿಗಾಗಿ ಹುಡುಕಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 35 ವರ್ಷದ ಕೃಷಿ ಕಾರ್ಮಿಕನನ್ನು ಬಂಧಿಸಲಾಗಿದೆ.
ಘಟನೆಯ ಕುರಿತು ಮಾಹಿತಿ ನೀಡಿರುವ ರಾಜ್‌ಕೋಟ್‌ನ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ವಿಜಯಸಿನ್ಹ ಗುರ್ಜರ್ , ಘಟನೆಯ ಮಾಹಿತಿ ತಿಳಿದ ತಕ್ಷಣ ಸುಮಾರು 10 ತಂಡಗಳನ್ನು ರಚಿಸಲಾಗಿದ್ದು, 100 ಶಂಕಿತರನ್ನು ವಿಚಾರಣೆ ನಡೆಸಲಾಗಿದೆ.
ಆರೋಪಿಯ ಗುರುತನ್ನು ಪತ್ತೆ ಹಚ್ಚುವ ಸಲುವಾಗಿ ಮಕ್ಕಳ ತಜ್ಞರ ಸಮ್ಮುಖದಲ್ಲಿ ಸುಮಾರು 10 ವ್ಯಕ್ತಿಗಳನ್ನು ಮಗುವಿನ ಮುಂದೆ ಹಾಜರುಪಡಿಸಲಾಗಿದೆ. ಇವರಲ್ಲಿ ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯ ಕೃಷಿ ಕೆಲಸಗಾರ ರಾಮಸಿಂಗ್ ತೆರಾಸಿಂಗ್ ದದ್ವೇಜರ್ ಎಂಬಾತ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ವಿವಾಹಿತನಾಗಿರುವ ದದ್ವೇಜರ್ ಗೆ ಮೂವರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಇತರರು ಭಾಗಿಯಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿಲ್ಲ. ಆರೋಪಿಯನ್ನು ಪಕ್ಕದ ಹೊಲದ ಬಳಿ ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಬಾಲಕಿಯ ಚೇತರಿಕೆಯ ಮೇಲೂ ನಿಗಾ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ನೋಡಿ: Karnataka Legislative Assembly Day 04 Live | 16ನೇ ವಿಧಾನಸಭೆಯ 8ನೇ ಅಧಿವೇಶನದ ನೇರಪ್ರಸಾರ
