ಬೆಂಗಳೂರು: ಹೈಗ್ರೌಂಡ್ಸ್ ಠಾಣೆ ಪೊಲೀಸರು ನಗರದಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾದರಿಯ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರೇಮ್ ಅಲಿಯಾಸ್ ವೈಷ್ಣವ್ ಎಂದು ಗುರುತಿಸಲಾಗಿದೆ.
ಆರೋಪಿ ಬಳಿಯಿಂದ ಪೊಲೀಸರು 6,700 ತ್ಯಾಪೆನ್ಡನಾಲ್ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಈತ ಕಾಲೇಜು ವಿದ್ಯಾರ್ಥಿಗಳಿಗೆ ಇನ್ನೂರರಿಂದ ಐನೂರು ರೂ.ಗೆ ಒಂದು ಮಾತ್ರೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸರಕಾರಿ ಶಾಲೆ ಮುಚ್ಚಿದರೆ ಶೋಷಿತರ ಮಕ್ಕಳ ಹಕ್ಕು ಕಸಿದಂತೆ – ಸಾಹಿತಿ, ಚಿಂತಕರ ಅಭಿಪ್ರಾಯ
ಈ ಮಾತ್ರೆಗಳಿಂದ ಸೈಕೋಟ್ರಾಫಿಕ್ ಎಫೆಕ್ಟ್ ಆಗಿ ಮತ್ತು ಬರುತ್ತದೆ ಎಂದು ತಿಳಿದು ಬಂದಿದೆ. ಬೇರೆ ರಾಜ್ಯದಿಂದ ಆರೋಪಿ ಮಾತ್ರೆಗಳನ್ನು ತರಿಸಿ, ಮಾರಾಟ ಮಾಡುತ್ತಿದ್ದ. ಆರೋಪಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಜನಸಾಮಾನ್ಯರ ಬದುಕಿನಲ್ಲಿ ಪರಿವರ್ತನೆ ತಂದ ನಾಟಕಕಾರ ಪಿ.ಬಿ.ಧುತ್ತರಗಿ Janashakthi Media
