ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುವಾಗ ತೆರದ ಗುಂಡಿಯೊಳಗೆ ಬಿದ್ದ ಮಹಿಳೆ

ಬಿಹಾರ: ಸಾರ್ವಜನಿಕ ರಸ್ತೆಗಳು ತೆರೆದ ಬಾಯಿಯಂತಿದ್ದರೆ, ಅವು ಪ್ರಾಣಕ್ಕೆ ಅಪಾಯ ತಂದೊಡ್ಡುವುದೆಂದೆ ಖಾತ್ರಿ. ಅಂದಹಾಗೆ, ಇಂತಹ ತೆರೆದ ಗುಂಡಿಯಲ್ಲಿ ಬಿದ್ದು, ಹಲವು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬಿಹಾರದ ಪಾಟ್ನಾದಲ್ಲಿ ನಡೆದ ಘಟನೆವೊಂದರ ವಿಡಿಯೋ ವೈರಲ್‌ ಆಗಿದ್ದು, ತೆರೆದ ಗುಂಡಿಯೊಳಗೆ ಮಹಿಳೆ ಬಿದ್ದಿರುವ ಘಟನೆ ನಡೆದಿದೆ.

ಬಿಹಾರ ಪಾಟ್ನಾ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯ ರಸ್ತೆಯ ಮಧ್ಯಭಾಗದಲ್ಲಿ ಗುಂಡಿಯೊಂದು ಬಾಯ್ತೆರೆದಿದ್ದು, ಅದರಲ್ಲಿ ಮಹಿಳೆ ಬಿದ್ದ ಘಟನೆ ನಡೆದಿದೆ. ಅಲಂಗಂಜ್ ಎಂಬ ಪ್ರದೇಶದ ರಸ್ತೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಗುಂಡಿಯೊಳಗೆ ಬೀಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉತ್ಕರ್ಷ್ ಸಿಂಗ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹಿಳೆ ಬಿದ್ದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವಾರ್ಡ್ ನಂಬರ್ 56ರ ವ್ಯಾಪ್ತಿಯ ಮಳಿಯ ಮಹಾದೇವ ಜಲ್ಲಾ ರಸ್ತೆಯಲ್ಲಿ ಏಳೆಂಟು ಅಡಿ ಆಳದ ಚರಂಡಿಯ ತೂಬು ತೆರೆದುಕೊಂಡಿದೆ. ಮಹಿಳೆಯೊಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಾ ಆ ರಸ್ತೆಯಲ್ಲಿ ಬರುತ್ತಾರೆ. ಆಕೆಯ ಮುಂದೆ ತೆರೆದ ಗುಂಡಿಯ ಮೇಲ್ಭಾಗದಲ್ಲಿ ವಾಹನ ನಿಂತಿರುತ್ತದೆ. ಆ ವಾಹನ ಮುಂದೆ ಸಾಗುತ್ತದೆ. ಗುಂಡಿತನ್ನು ಗಮನಿಸದ ಮಹಿಳೆಯೊಬ್ಬಳು ಅಲ್ಲಿ ಕಾಲಿಡುತ್ತಾಳೆ. ನೋಡ ನೋಡುತ್ತಿದ್ದಂತೆಯೇ ಕ್ಷಣ ಮಾತ್ರದಲ್ಲೇ ದಿಡೀರ್ ಅಂತ ಒಳಗೆ ಆಕೆ ಬೀಳುತ್ತಾಳೆ.

ಗುಂಡಿಯೊಳಗೆ ಮಹಿಳೆ ಬಿದ್ದ ಕೂಡಲೇ, ಸ್ಥಳೀಯರು ಕೂಡಲೇ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಮಹಿಳೆಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅನೇಕ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ ಎನ್ನಲಾಗಿದೆ.

ಮುನ್ಸಿಪಲ್ ಕಾರ್ಪೋರೇಷನ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ತೆರೆದ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು ಇಂತಹ ದುರಂತ ನಡೆಯಲು ಕಾರಣವಾಗುತ್ತಿದೆ. ಇದು ಮುನ್ಸಿಪಲ್ ಕಾರ್ಪೋರೇಷನ್ ನಿರ್ಲಕ್ಷ್ಯ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *