ನವದೆಹಲಿ: ಎಮ್ಸ್ ಆಸ್ಪತ್ರೆಯ ಎಂಡೋಸ್ಕೋಪಿ ಕೊಠಡಿಯಲ್ಲಿ ಆಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ರೋಗಿಗಳನ್ನು ಸ್ಥಳಾಂತರಿಸಲಾಗಿದೆ.
ಹೊರರೋಗಿ ವಿಭಾಗ ಹಳೆಯ ರಾಜಕುಮಾರಿ ಒಪಿಡಿ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಹಿನ್ನೆಲೆ ಯಾವುದೇ ಪ್ರಾಣಹಾನಿಯುಂಟಾಗಿಲ್ಲ ಎಂದು ವರದಿಯಾಗಿದೆ. ಸ್ಥಳಕ್ಕೆ ಎಮ್ಸ್ ನಿರ್ದೇಶಕರು ಕೂಡ ಆಗಮಿಸಿದ್ದಾರೆ.
ಎಂಟು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು,ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ.
ಇದನ್ನೂ ಓದಿ:ಹಿರಿಯ ಕಾರ್ಮಿಕ ನಾಯಕ ಹರೀಶ್ ನಾಯ್ಕ (71) ನಿಧನ
ತುರ್ತು ನಿಯಂತ್ರಣಾ ಕೊಠಡಿಗೆ ಸೋಮವಾರ ಬೆಳಿಗ್ಗೆ 11.54ರ ಹೊತ್ತಿಗೆ ಕರೆ ಬಂದ ತಕ್ಷಣ ಎಲ್ಲಾ ರೋಗಿಗಳನ್ನು ಮತ್ತು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
Delhi: A fire broke out in the endoscopy room of AIIMS. All people evacuated
(Inside visuals) pic.twitter.com/3OdlpSRoLo
— ANI (@ANI) August 7, 2023