ಶಿವಮೊಗ್ಗ| ಕೆ.ಎಸ್.ಆರ್.ಟಿ.ಸಿ ಬಸ್ – ಕ್ಯಾಂಟರ್ ನಡುವೆ ಅಪಘಾತ; 5 ವಿದ್ಯಾರ್ಥಿಗಳಿಗೆ ಗಾಯ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ತಿರುವಿನಲ್ಲಿ ಜುಲೈ 24 ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕ್ಯಾಂಟರ್ ನಡುವೆ ಅಪಘಾತವಾಗಿದ್ದೂ, ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿದು ಬಂದಿದೆ.

ಬಸ್ಸಿನ ಚಾಲಕ ಹಾಗೂ ನಾಲ್ಕೈದು ವಿದ್ಯಾರ್ಥಿಗಳಿಗೆ ತೀವ್ರತರವಾದ ಗಾಯಗಳಾಗಿದ್ದು, ತಕ್ಷಣ ಮುಂಬಾಳು ಪ್ರದೇಶದ ಸ್ಥಳೀಯರು ಸಾಗರದ ಮರ್ಕಜ್ ಶಾಲೆಗೆಂದು ವಿದ್ಯಾರ್ಥಿಗಳನ್ನು ಕರೆದು ಕೊಂಡು ಬರುತ್ತಿದ್ದ ಬಸ್ಸಿನಲ್ಲಿ ಬರುವಾಗ ಅಪಘಾತ ಸಂಭಾವಿಸಿದೆ.

ಇದನ್ನೂ ಓದಿ: ಶಾಲೆ, ಕಾಲೇಜು ಮತ್ತು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ – ಎಸ್‌ಎಫ್‌ಐ ಪ್ರತಿಭಟನೆ

ತಕ್ಷಣ ಗಾಯಾಳುಗಳನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಮಯದಲ್ಲಿ ಮುಂಬಾಳು ಹಿಸಾಬಾ ಸಮಿತಿಯ ಉಸ್ಮಾನ್ ಹಾಗೂ ಮರ್ಕಜ್ ಬಸ್ಸಿನ ಚಾಲಕ ಜಿಯಾವುಲ್ಲಾ ಅವರ ಮಾನವೀಯತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ: ಬಿಹಾರ ಚುನಾವಣೇ | “ವಿಶೇಷ ತೀವ್ರ ಪರಿಷ್ಕರಣೆ”ಎನ್‌ಡಿಎ ಕೂಟದ ಹೊಸ ನಾಟಕ Janashakthi Media

Donate Janashakthi Media

Leave a Reply

Your email address will not be published. Required fields are marked *