ನವದೆಹಲಿ ಜ, 31: ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಯ್ ಶಾ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಮಗನಾಗಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ಅವರವರ ಎಸಿಸಿ ಅಧಿಕಾರಾವಧಿ ಮುಗಿದಿದ್ದು, ಆ ಸ್ಥಾನಕ್ಕೆ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಈ ವಿಷಯವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೊರೋನಾ ವೈರಸ್ ಹಾವಳಿಯಿಂದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಾಮಾನ್ಯ ಸಭೆ ವರ್ಚುವಲ್ ನಲ್ಲಿ ನಡೆದಿದ್ದು ಅಲ್ಲಿ ಜಯ್ ಶಾ ಆಯ್ಕೆ ಖಚಿತವಾಗಿದೆ.
1983 ರಲ್ಲಿ ಎಸಿಸಿ ಹುಟ್ಟಿಕೊಂಡಿತ್ತು ಇದರ ಮೊದಲ ಅಧ್ಯಕ್ಷರಾಗಿ ಭಾರತದ ಎನ್.ಕೆ.ಪಿ ಸಾಳ್ವೆ ಆಯ್ಕೆಯಾದರು. ಐಎಸ್ ಬಿಂದ್ರಾ, ಜಗಮೋಹನ್ ದಾಲ್ಮೀಯಾ, ಶರದ್ ಪವರ್, ಎನ್ ಶ್ರೀನಿವಾಸ್ ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಯ್ ಶಾ ಭಾರತವನ್ನು ಪ್ರತಿನಿಧಿಸಿ ಆಯ್ಕೆಯಾದ 6 ನೇ ವ್ಯಕ್ತಿಯಾಗಿದ್ದಾರೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಭಾಂಗ್ಲಾದೇಶ್, ಅಫ್ಘಾನಿಸ್ತಾನ ದೇಶದ ಕ್ರಿಕೆಟ್ ತಂಡ್ ಗಳ ಈ ಎಸಿಸಿ ಸದಸ್ಯತ್ವಕ್ಕೆ ಒಳಪಟ್ಟ ತಂಡಗಳಾಗಿವೆ.
ಮುಂಬರುವ ಏಷ್ಯಾಕಪ್ ಟೂರ್ನಿಯನ್ನು ಜಯ್ ಶಾ ಹೇಗೆ ನಿರ್ವಹಿಸಬಹುದು ಎಂಬ ಕೂತುಹಲ ಈಗ ಗರಿಗೆದರಿದೆ. ಜಯ್ ಶಾ ತಂದೆ ಭಾರತದ ಗೃಹ ಸಚಿವರಾಗಿದ್ದು ಎನ್. ಆರ್.ಸಿ, ಎನ್.ಪಿ.ಆರ್ ಕಾಯ್ದೆಗಳ ಜಾರಿಗೆ ಮುಂದಾಗಿದ್ದರು, ಸದಾ ಪಾಕಿಸ್ತಾನದ ವಿರುದ್ಧ ಅಮಿತ್ ಶಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದು ಜಯ್ ಶಾ ಮೇಲೆ ಪರಿಣಾಮ ಬೀರಬಹುದಾ? ಅಥಾವಾ ಕ್ರೀಡಾಧರ್ಮವನ್ನು ಜಯ್ ಶಾ ಮೆರೆಯುವರಾ ಕಾದು ನೋಡಬೇಕಿದೆ.