ಎಸಿಬಿ ದಾಳಿ ಸಂದರ್ಭದಲ್ಲಿ ಸಿಕ್ಕಿಬಿದ್ದ 15 ಸರ್ಕಾರಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲು

ಬೆಂಗಳೂರು: ಇತ್ತೀಚೆಗೆ ಕೆಲವು ದಿನಗಳ ಹಿಂದೆ 15 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳನ್ನು ಜಪ್ತಿ ಮಾಡಿದ್ದರು. ಈಗ ಆ 15 ಜನ ಅಧಿಕಾರಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಬಂಧನದ ಭೀತಿ ಎದುರಾಗಿದೆ.

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಏಕಕಾಲದಲ್ಲಿ ರಾಜ್ಯದ 60 ಕಡೆ ದಾಳಿ ನಡೆಸಿತ್ತು. ಈ ವೇಳೆ 15 ಅಧಿಕಾರಿಗಳ ನಿವಾಸ ಸೇರಿ ವಿವಿಧ ಸ್ಥಳಗಳಲ್ಲಿ ಎಸಿಬಿ ಶೋಧ ಕಾರ್ಯಾಚರಣೆ ನಡೆಸಿತ್ತು.

  1. ಎಸ್‌ಎಂ ಬಿರಾದರ್, ಲೋಕೋಪಯೋಗಿ ಇಲಾಖೆ, ಕಿರಿಯ ಇಂಜಿನಿಯರ್ , ಜೇವರ್ಗಿ
  2. ಟಿಎಸ್ ರುದ್ರೇಶಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಗದಗ
  3. ಶ್ರೀನಿವಾಸ್ ಕೆ, ಕಾರ್ಯಪಾಲಕ ಇಂಜಿನಿಯರ್‌, ಎಚ್‌ಎಲ್‌ಸಿ -3 , ಕೆಆರ್ ಪೇಟೆ ಉಪ ವಿಭಾಗ, ಮಂಡ್ಯ
  4. ಕೆಎಸ್ ಅಂಗೇಗೌಡ , ಕಾರ್ಯಪಾಲಕ ಇಂಜಿನಿಯರ್‌, ಸ್ಮಾರ್ಟ್ ಸಿಟಿ , ಮಂಗಳೂರು ಪಾಲಿಕೆ
  5. ಎಲ್‌ಸಿ ನಾಗರಾಜ್, ಆಡಳಿತಾಧಿಕಾರಿ, ಸಕಾಲ ಯೋಜನೆ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು
  6. ಜಿವಿ ಗಿರಿ, ಗ್ರೂಪ್ – ಡಿ ನೌಕರ, ಚಿಟಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್‌, ಮಾರಪ್ಪನಪಾಳ್ಯ , ಯಶವಂತಪುರ
  7. ಎಸ್‌ಎಸ್ ರಾಜಶೇಖರ್ , ಪಿಸಿಯೋಥೆರಪಿಸ್ಟ್ , ಸರ್ಕಾರಿ ಆಸ್ಪತ್ರೆ , ಯಲಹಂಕ
  8. ಮಾಯಣ್ಣ , ಪ್ರಥಮ ದರ್ಜೆ ಸಹಾಯಕ, ಬಿಬಿಎಂಪಿ ಕೇಂದ್ರ ಕಚೇರಿ, ಎನ್ ಆರ್.ವೃತ್ತ , ಬೆಂಗಳೂರು ನಗರ
  9. ಕೆಎಸ್ ಶಿವಾನಂದ್, ಸಬ್ ರಿಜಿಸ್ಟಾರ್ ( ನಿವೃತ್ತ ) , ಬಳ್ಳಾರಿ ಜಿಲ್ಲೆ
  10. ಸದಾಶಿವ ರಾಯಪ್ಪ ಮರಅಂಗಣ್ಣನವರ್, ಹಿರಿಯ ಮೋಟಾರು ನಿರೀಕ್ಷಕ, ಗೋಕಾಕ, ಬೆಳಗಾವಿ
  11. ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ , ಅಭಿವೃದ್ಧಿ ಅಧಿಕಾರಿ, ಸಹಕಾರ ಇಲಾಖೆ, ರಾಯಬಾಗ ತಾಲೂಕು , ಬೆಳಗಾವಿ
  12. ನಾಥಾಜಿ ಪೀರಾಜ ಪಾಟೀಲ್‌, ಲೈನ್ ಮೆಕಾನಿಕ್ ಗ್ರೇಡ್ -2 , ಹಸ್ಲಾಂ , ಬೆಳಗಾವಿ
  13. ಲಕ್ಷ್ಮೀನರಸಿಂಹಯ್ಯ , ರಾಜಸ್ವ ನಿರೀಕ್ಷಕರು, ಕಸಬಾ -2 ದೊಡ್ಡಬಳ್ಳಾಪುರ ತಾಲೂಕು , ಬೆಂಗಳೂರು ಗ್ರಾಮಾಂತರ
  14. ವಾಸುದೇವ್ ಆರ್‌ಎನ್ , ಮಾಜಿ ಯೋಜನಾ ನಿರ್ದೇಶಕರು , ನಿರ್ಮಿತಿ ಕೇಂದ್ರ , ಬೆಂಗಳೂರು ಗ್ರಾಮಾಂತರ
  15. ಬಿ ಕೃಷ್ಣಾರೆಡ್ಡಿ, ಪ್ರಧಾನ ವ್ಯವಸ್ಥಾಪಕರು, ನಂದಿನಿ ಹಾಲು ಉತ್ಪನ್ನ

ಮೇಲಿನ ಎಲ್ಲಾ 15 ಮಂದಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 13(1), 13(2)ರಡಿ ಎಫ್‍ಐಆರ್ ದಾಖಲಾಗಿಸಲಾಗಿದೆ.

ಏಕಕಾಲದಲ್ಲಿ ದಾಳಿ ನಡೆಸಿದ್ದ ಎಸಿಬಿ ಅಕಾರಿಗಳು, ಬೆಂಗಳೂರು, ಬೆಳಗಾವಿ, ಗದಗ ಸೇರಿ ಹಲವು ಜಿಲ್ಲೆಗಳ ಅಕಾರಿಗಳ ಮನೆಯಲ್ಲಿರುವ ಚಿನ್ನಾಭರಣ, ಕಾಗದ ಪತ್ರಗಳು, ಇತರೆ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಅಕಾರಿಗಳು ಕೋಟಿ ಕೋಟಿ ಒಡೆಯರಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ನಿವಾಸ ಮತ್ತು ಬೇರೆ ಬೇರೆ ನಗರಗಳಲ್ಲಿರುವ ಸಂಬಂಧಿಕರ ನಿವಾಸದ ಮೇಲೆಯೂ ದಾಳಿ ನಡೆದಿತ್ತು.

Donate Janashakthi Media

Leave a Reply

Your email address will not be published. Required fields are marked *