ಬಿಜೆಪಿ ಕೈಗೊಂಬೆಯಾಗಿರುವ ಐಟಿ ಅಧಿಕಾರಿಗಳಿಂದ ಕಾರ್ಯಕರ್ತರ ಮೇಲೆ ದೌರ್ಜನ್ಯ, ದಬ್ಬಾಳಿಕೆ: ಡಿ.ಕೆ. ಸುರೇಶ್ ಆಕ್ರೋಶ

ಆನೇಕಲ್: “ಬಿಜೆಪಿ ಹಾಗೂ ಮಾಜಿ ಪ್ರಧಾನಿಗಳ ಕೈಗೊಂಬೆಯಾಗಿರುವ ಐಟಿ ಅಧಿಕಾರಿಗಳು ನಮ್ಮ ಕಾರ್ಯಕರ್ತರ ಮನೆಯಲ್ಲಿ ಮಹಿಳೆಯರನ್ನು ತೀಕ್ಷ್ಣವಾಗಿ ಕಂಡು, ಯುವಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ” ಎಂದು ಸಂಸದ ಡಿ.ಕೆ. ಸುರೇಶ್ ಕಿಡಿಕಾರಿದರು.

ಆನೇಕಲ್ ನಲ್ಲಿ ಪ್ರಚಾರದ ವೇಳೆ ಮಾಧ್ಯಮಗಳ ಪ್ರಶ್ನೆಗಳ ಜತೆ ಮಾತನಾಡಿದ ಸುರೇಶ್ ಅವರು,“ಚುನಾವಣೆ ಸೋಲಿನ ಭೀತಿಯಿಂದ ಐಟಿ, ಇಡಿ ಮೂಲಕ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ನಿನ್ನೆ ಕೆಲವು ಅಧಿಕಾರಿಗಳು ಬಂದು ನಮ್ಮ ಕಾರ್ಯಕರ್ತರನ್ನು, ಅವರ ಕುಟುಂಬದ ಹೆಣ್ಣುಮಕ್ಕಳನ್ನು ಬೆದರಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಬರೆಯುತ್ತಿದ್ದು, ಐಟಿ ಇಲಾಖೆ ಮುಖ್ಯಸ್ಥರ ಗಮನಕ್ಕೆ ತರುತ್ತೇನೆ. ಅವರ ಕೆಲಸ ಕೇವಲ ಪರಿಶೀಲನೆ ಮಾಡುವುದು ಮಾತ್ರ. ಅದನ್ನು ಬಿಟ್ಟು ಬಿಜೆಪಿ ಪರ ಪ್ರಚಾರ ಮಾಡುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.

ಇದನ್ನು ಓದಿ : ಈ ತಿಂಗಳು ಬೆಂಗಳೂರಿನಲ್ಲಿ ಮಳೆಯ ನಿರೀಕ್ಷೆ: ಐಎಂಡಿ

ನನ್ನ ಚಾಲಕರ ಮನೆಯಲ್ಲಿ ಅವರ ಕುಟುಂಬದವರನ್ನು ಎಳೆದಾಡಿದ್ದಾರೆ. ಮಹಿಳೆಯರನ್ನು ತೀಕ್ಷ್ಣವಾಗಿ ಕಂಡು, ಯುವಕರನ್ನು ಒಂಟಿ ಕಾಲಲ್ಲಿ ನಿಲ್ಲಿಸಿದ್ದಾರೆ. ಮಾಜಿ ಪ್ರಧಾನಮಂತ್ರಿಗಳು ಹಾಗೂ ಬಿಜೆಪಿಯವರ ಕೈಗೊಂಬೆಯಾಗಿ ಐಟಿ ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿದೆ.

ಅವರು ಚುನಾವಣೆಯಲ್ಲಿ ಜನರ ಮುಂದೆ ಹೋಗಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಅಧಿಕಾರಿಗಳ ದುರ್ಬಳಕೆ, ಸಾಮಾಜಿಕ ಜಾಲತಾಣಗಳಿಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ನಿಷ್ಪಕ್ಷಪಾತ ಚುನಾವಣೆ ಮಾಡಬೇಕು. ನಾನು ನನ್ನ ಕೆಲಸದ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ ಹೊರತು, ನನಗೆ ಯಾರನ್ನು ಬೆದರಿಸುವ ಅಗತ್ಯವಿಲ್ಲ. ನಾನು ಆಸ್ತಿ, ಕುಟುಂಬ ಉಳಿಸಿಕೊಳ್ಳಲು ಬೇರೆಯವರ ಜತೆ ಸೇರಿ ರಾಜಕಾರಣ ಮಾಡುತ್ತಿಲ್ಲ.”

ಇದನ್ನು ನೋಡಿ : ಚುನಾವಣೆ : ಜಾಗೃತ ನಾಗರಿಕರ ಜವಾಬ್ದಾರಿ |ಸುಳ್ಳುಗಳಿಂದ ಜನರನ್ನು ವಂಚಿಸಿದವರನ್ನು ದೂರವಿಡುವ ಕಾಲ ಬಂದಿದೆ

Donate Janashakthi Media

Leave a Reply

Your email address will not be published. Required fields are marked *