ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಶ್ರಯದಲ್ಲಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಹೊರಡಿಸಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜುಲೈ 22ರಂದು ಭೈರಮಂಗಲ – ಕಂಚಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ರಾಮನಗರ ಜಿಲ್ಲೆ ಬಿಡದಿ ಹೋಬಳಿ ಭೈರಮಂಗಲ ಗ್ರಾಮದಲ್ಲಿ ಬಿಡದಿ-ಹಾರೋಹಳ್ಳಿ ಮುಖ್ಯ ರಸ್ತೆ ತಡೆದು ತೀವ್ರವಾದ ಪ್ರತಿಭಟನೆ ವ್ಯಕ್ತಪಡಿಸಿದರು. ರದ್ದು
ಪ್ರತಿಭಟನಾ ಸಭೆ ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ.ಟಿ ಯಶವಂತ ಮಾತಾನಾಡಿ ವರ್ಷ ಪೂರ್ತಿ ನೀರಾವರಿ ಸೌಕರ್ಯ ಇರುವ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಬಿಡದಿ ಉಪ ನಗರ ಯೋಜನೆ ಉದ್ದೇಶಕ್ಕಾಗಿ ಈ ಹಳ್ಳಿಗಳ ಸುಮಾರು 9600 ಎಕರೆ ಭೂ ಸ್ವಾಧೀನ ಮಾಡಿಕೊಳ್ಳುವುದು ಯಾರೂ ಕೂಡ ಒಪ್ಪುವಂತಹದ್ದಲ್ಲ.
ಇದನ್ನೂ ಓದಿ: ನ್ಯಾ. ವರ್ಮಾ ವಿರುದ್ಧ ಮಹಾಭಿಯೋಗ ಪ್ರಸ್ತಾವನೆ: ಸ್ಪೀಕರ್‌ಗೆ ಪತ್ರ ಸಲ್ಲಿಸಿದ 100 ಸಂಸದರು
ಈಗಾಗಲೇ ಸುಮಾರು 3000 ಕ್ಕೂ ಹೆಚ್ಚು ಕುಟುಂಬಗಳು ಭೂ ಸ್ವಾಧೀನ ಕ್ಕೆ ಲಿಖಿತ ಅಸಮ್ಮತಿ ಮತ್ತು ವಿರೋಧವನ್ನು ನೀಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನ ಕ್ಕೆ ಮುಂದಾದರೆ ಸಮರಶೀಲ ಹೋರಾಟದ ಮೂಲಕ ಹಿಮ್ಮೆಟ್ಟಿಸಲಾಗುವುದು. ಇಂತಹ ಜನ ವಿರೋಧಿ ಭೂ ಸ್ವಾಧೀನ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.

ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ , ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಹೊನ್ನೂರು ಪ್ರಕಾಶ್ ಪ್ರತಿಭಟನೆ ಉದ್ದೇಶಿಸಿ ಮಾತಾನಾಡಿದರು.
ಸುಮಾರು ಎರಡು ಸಾವಿರ ಸಂಖ್ಯೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಒಗ್ಗಟ್ಟಿನಿಂದ ಛಲ ಬಿಡದೆ ಹೋರಾಡುವುದಾಗಿ ತಮ್ಮ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ರಾಮಣ್ಣ, ಪ್ರಕಾಶ್ ,ರಾಧಾಕೃಷ್ಣ ಮುಂತಾದವರು ಪ್ರತಿಭಟನಾ ನೇತೃತ್ವ ವಹಿಸಿದ್ದರು.
ಇದನ್ನೂ ನೋಡಿ: ಆಸಕ್ತಿಕರ ಸಂಗತಿ |ಪ್ರಾಣಿಗಳಲ್ಲಿ ಆಕಳಿಕೆJanashakthi Media
