– ಸಿಐಟಿಯು ಆಯೋಜಿಸಿರುವ ವಿಚಾರಗೋಷ್ಠಿ
ಬೆಂಗಳೂರು: ಭಾರತದ ಸ್ವಾವಲಂಬನೆ ಮಾರುವುದನ್ನು ಆತ್ಮ ನಿರ್ಭರ ಎನ್ನಬೇಕೆ? ಮತ್ತು “ಮೋದಿ ಸರ್ಕಾರ ಸಾರ್ವಜನಿಕ ರಂಗವನ್ನು ಖಾಸಗೀಕರಿಸುತ್ತಿರುವ ಮರ್ಮವೇನು? ಎಂಬ ವಿಷಯಗಳ ಕುರಿತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸೋಮವಾರ ವಿಚಾರಗೋಷ್ಠಿ ಆಯೋಜಿಸಿದೆ.
ವಿಚಾರಗೋಷ್ಠಿ ಸೋಮವಾರ (ಅ.5) BSNL ಎಂಪ್ಲಾಯೀಸ್ ಯೂನಿಯನ್ ಕಚೇರಿ, ಟೆಲಿಫೋನ್ ಹೌಸ್, ರಾಜ ಭವನ ರಸ್ತೆ, ಬೆಂಗಳೂರುನಲ್ಲಿ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ.
ಆತ್ಮ ನಿರ್ಭರ ಭಾರತ’ ಅಂದರೆ ಭಾರತವನ್ನು ಸ್ವಾವಲಂಬನೆ ಗೊಳಿಸಿ ಎಂದು ಪ್ರಧಾನಿ ಮೋದಿ ಪದೇ ಪದೇ ಉಚ್ಛರಿಸುವ ಪದವಿದು. ಸಾರ್ವಜನಿಕ ರಂಗಗಳನ್ನೂ ಮೋದಿ ತನ್ನ ಆಳ್ವಿಕೆಯಲ್ಲಿ ಒಂದೊಂದಾಗಿಯೇ ಖಾಸಗಿಯವರಿಗೆ ಮಾರಾಟಮಾಡುವುದು ಸ್ವಾವಲಂಬನೆ? ಸ್ವಾವಲಂಬನೆ ಅಂದರೆ ಏನು ? ಯಾವುದು ಸ್ವಾವಲಂಬನೆ? ಸಾರ್ವಜನಿಕ ರಂಗಗಳಾದ ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ವಿಮಾ, ದೂರ ಸಂಪರ್ಕ, ಆರೋಗ್ಯ ಕ್ಷೇತ್ರಗಳ ಮೇಲೆ ಖಾಸಗೀಕರಣ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಷಯದ ಮೇಲೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (CITU) ಕರ್ನಾಟಕ ರಾಜ್ಯ ಸಮಿತಿಯ ವಿಚಾರಗೋಷ್ಠಿಯನ್ನು ಹಮ್ಮಿಕೊಂಡಿದೆ. ವಿಚಾರಗೋಷ್ಠಿ ನಡುವೆ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್ ವಿ.ಗೋಪಾಲಗೌಡ ವರ್ಚುವಲ್ ವೇದಿಕೆಯಲ್ಲಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಈ ಕಾರ್ಯಕ್ರಮದ ವಿಷಯದ ಪ್ರಸ್ತಾಪನೆಯನ್ನು ಸಿಐಟಿಯುನ ರಾಜ್ಯ ಪ್ರಾಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ನಡೆಸಿಕೊಡಲಿದ್ದು, ವಿಚಾರ ಗೋಷ್ಠಿಯ ಪ್ರತಿಕ್ರಿಯೆಯನ್ನು ಸಿಐಟಿಯುನ ರಾಜ್ಯ ಕಾರ್ಯದರ್ಶಿ ಕೆ.ಎನ್ ಉಮೇಶ್, ಬಿಎಸ್ಎನ್ಎಲ್ ನ ವಲಯ ಕಾರ್ಯದರ್ಶಿ ಹೆಚ್.ವಿ.ಸುದರ್ಶನ್, ವಿಮಾ ನೌಕರರ ಮುಖಂಡರಾದ ಎಸ್.ಕೆ.ಗೀತಾ, ಬಿಇಎಫ್ಐ ಕರ್ನಾಟಕದ ಜಂಟಿ ಕಾರ್ಯದರ್ಶಿ ನಾಗರಾಜ ಶಾನಬಾಗ್, ಬಾಗೆಪಲ್ಲಿಯ ಜನಪದ ವೈದ್ಯರಾದ ಡಾ.ಎ.ಅನಿಲ್ , ಬಿಇಎಂಎ ಅಧ್ಯಕ್ಷರಾದ ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಕೆಪಿಆರ್ ಎಸ್ ರಾಜ್ಯ ಸಮಿತಿ ಸದಸ್ಯರಾದ ಟಿ.ಯಶವಂತ ವಿಚಾರ ಗೋಷ್ಠಿ ಕುರಿತು ಪ್ರತಿಕ್ರಿಯೆ ನೀಡಲಿದ್ದಾರೆ.
ಈ ವಿಚಾರ ಗೋಷ್ಠಿ ಯಲ್ಲಿ ಬಿಎಸ್ಎನ್ಎಲ್ ನ ವಲಯ ಅಧ್ಯಕ್ಷರಾದ ಸಿ.ಕೆ.ಗುಂಡಣ್ಣ, ಸಿಐಟಿಯು ನ ರಾಜ್ಯ ಕಾರ್ಯದರ್ಶಿ ಕೆ.ಮಹಾತೇಶ, ಸಿಐಟಿಯುನ ರಾಜ್ಯ ಕಾರ್ಯದರ್ಶಿ ಪ್ರತಾಪ್ ಸಿಂಹ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.