ಕೇಜ್ರಿವಾಲ್ ಬಂಧನ ವಿರೋಧಿಸಿ ಉಪವಾಸ – ಗೋಪಾಲ್ ರೈ

ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಪಕ್ಷದ ನಾಯಕರು ಏಪ್ರಿಲ್ 7 ರಂದು ಜಂತರ್ ಮಂತರ್‌ನಲ್ಲಿ ಉಪವಾಸ ಮಾಡಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ರೈ ಹೇಳಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಉಪವಾಸಕ್ಕೆ ಕರೆ ನೀಡಿದ ಅವರು, ದೆಹಲಿ ಮುಖ್ಯಮಂತ್ರಿಯ ಬಂಧನಕ್ಕೆ ನಿಮ್ಮ ವಿರೋಧವಿದ್ದರೆ, ಬಂಧನದ ವಿರುದ್ಧ ಏಪ್ರಿಲ್ 7 ರಂದು ಉಪವಾಸ ಮಾಡಬಹುದು ಎಂದು ಅವರು ಹೇಳಿದರು. ನೀವು ಎಲ್ಲಿಯಾದರೂ, ಮನೆಯಲ್ಲಿ, ನಿಮ್ಮ ನಗರದಲ್ಲಿ ಸಾಮೂಹಿಕ ಉಪವಾಸವನ್ನು ಮಾಡಬಹುದು ಎಂದಿದ್ದಾರೆ.

ಇದನ್ನೂ ಓದಿತೆರೆದ ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಕಂದಮ್ಮ : ಮುಂದುವರಿದ ಕಾರ್ಯಾಚರಣೆ

ಆಮ್ ಆದ್ಮಿ ಪಕ್ಷವನ್ನು ನಾಶ ಮಾಡುವ ಉದ್ದೇಶದಿಂದ ಪಕ್ಷದ ಉನ್ನತ ನಾಯಕತ್ವವನ್ನು ಬಂಧಿಸಲಾಗಿದೆ ಎಂದು ಗೋಪಾಲ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೆಹಲಿ ಸರ್ಕಾರದ ಸಚಿವರು, ಎಎಪಿ ಸಂಸದರು, ಶಾಸಕರು, ಕೌನ್ಸಿಲರ್‌ಗಳು ಮತ್ತು ಅಧಿಕಾರಿಗಳು ಏಪ್ರಿಲ್ 7 ರಂದು ಜಂತರ್ ಮಂತರ್‌ನಲ್ಲಿ ಉಪವಾಸ ಮಾಡಲಿದ್ದಾರೆ ಎಂದು ಅವರು ಹೇಳಿದರು. ಇದೊಂದು ಮುಕ್ತ ಕಾರ್ಯಕ್ರಮವಾಗಲಿದ್ದು, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು, ವರ್ತಕರು ಆಗಮಿಸಿ ಭಾಗವಹಿಸಬಹುದು ಎಂದರು.

ಆಮ್ ಆದ್ಮಿ ಪಕ್ಷವನ್ನು ನಾಶ ಮಾಡುವ ಉದ್ದೇಶದಿಂದ ಪಕ್ಷದ ಉನ್ನತ ನಾಯಕತ್ವವನ್ನು ಬಂಧಿಸಲಾಗಿದೆ ಎಂದು ಗೋಪಾಲ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೆಹಲಿ ಸರ್ಕಾರದ ಸಚಿವರು, ಎಎಪಿ ಸಂಸದರು, ಶಾಸಕರು, ಕೌನ್ಸಿಲರ್‌ಗಳು ಮತ್ತು ಅಧಿಕಾರಿಗಳು ಏಪ್ರಿಲ್ 7 ರಂದು ಜಂತರ್ ಮಂತರ್‌ನಲ್ಲಿ ಉಪವಾಸ ಮಾಡಲಿದ್ದಾರೆ ಎಂದು ಅವರು ಹೇಳಿದರು. ಇದೊಂದು ಮುಕ್ತ ಕಾರ್ಯಕ್ರಮವಾಗಲಿದ್ದು, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು, ವರ್ತಕರು ಆಗಮಿಸಿ ಭಾಗವಹಿಸಬಹುದು ಎಂದು ಕರೆ ನೀಡಿದರು.

 

Donate Janashakthi Media

Leave a Reply

Your email address will not be published. Required fields are marked *