ಆಹಾರ ಕಿಟ್ ಅವ್ಯವಹಾರ ತನಿಖೆಗೆ ಕಟ್ಟಡ ಕಾರ್ಮಿಕರ ಆಗ್ರಹ: ಪ್ರತಿಭಟನಾಕಾರರ ಬಂಧನ

ಬೆಂಗಳೂರು: ರಾಜ್ಯದ ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡಲಾಗುತ್ತಿರುವ ಆಹಾರ ಕಿಟ್ ಹಂಚಿಕೆಯಲ್ಲಿ ನಡೆದಿರುವ ಕೋಟ್ಯಾಂತರ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕು ಮತ್ತು ಕಾರ್ಮಿಕರಿಗೆ ಕೋವಿಡ್ ಎರಡನೇ ಅಲೆ ಪರಿಹಾರ ಹತ್ತು ಸಾವಿರಕ್ಕೆ ಆಗ್ರಹಿಸಿ ರಾಜ್ಯದ ವಿವಿಧ ಕಟ್ಟಡ ಕಾರ್ಮಿಕ ಸಂಘಗಳು ಇಂದು ರಾಜ್ಯದ ವಿವಿದೆಡೆ ಪ್ರತಿಭಟನೆಯನ್ನು ನಡೆಸಿದ್ದಾರೆ.

ನಗರದ ಕಲ್ಯಾಣ ಮಂಡಳಿ ಕಛೇರಿ ಬಳಿ ನಡೆದ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ, ಪ್ರತಿಭಟನೆ ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಬೆಳೆಗ್ಗೆಯೇ 40 ಕ್ಕೂ ಅಧಿಕ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಮಂಡಳಿ ಮುಂಭಾಗವೇ ನೂರಾರು ಕಾರ್ಮಿಕರು ತೀವ್ರತರವಾದ ಧರಣಿಯನ್ನು ಕೈಗೊಂಡರು.

ಇದನ್ನು ಓದಿ: ಕಳಪೆ ಆಹಾರದ ಕಿಟ್ ವಿತರಣೆ ನಿರ್ಲಕ್ಷ್ಯವೋ!? ಅಥವಾ ಭ್ರಷ್ಟಾಚಾರವೋ!!?

ಕಾರ್ಮಿಕರು ಪೊಲೀಸರ ಕ್ರಮವನ್ನು ಖಂಡಿಸಿದರು. ಮತ್ತೆ ಧರಣಿ ನಿರತ ಕಾರ್ಮಿಕ ನಾಯಕರು ಮತ್ತು ಕಾರ್ಮಿಕರನ್ನು ಬಂಧಿಸಲು ಮುಂದಾದಾಗ ಅದನ್ನು ಖಂಡಿಸಿ ಕಾರ್ಮಿಕರು ಸಮನ್ವಯ ಸಮಿತಿ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರೆಯಿತು. ಹೋರಾಟಕ್ಕೆ ಮಣಿದು ಪೊಲೀಸರು ಧರಣಿಗೆ ಅವಕಾಶ ನೀಡಬೇಕಾಯಿತು. ಮಂಡಳಿ ಸಿಇಓ ಆಗಮಿಸಿ ಮನವಿ ಸ್ವೀಕರಿಸಿದರು.

ಬಾಕಿ ಇರುವ ಕೋವಿಡ್ ಪರಿಹಾರ, ಆಹಾರ ಕಿಟ್ ಹಂಚಿಕೆಯನ್ನು ಶಾಸಕರಿಗೆ ವಹಿಸಿರುವುದು, ವೈದ್ಯಕೀಯ ಪರಿಹಾರ, ಮನೆಗೆ ಧನಸಹಾಯ   ಪಿಂಚಣಿ ಸೇರಿ ಇತ್ಯಾದಿ ಅಂಶಗಳ ಕುರಿತು ತ್ವರಿತಗತಿಯಲ್ಲಿ ಕ್ರಮವಹಿಸಲು ಸಮನ್ವಯ ಸಮಿತಿ ಮುಖಂಡರು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಮನ್ವಯ ಸಮಿತಿಯ ಮುಖಂಡರಾದ ಕೆ.ಮಹಾಂತೇಶ, ಶಾಮಣ್ಣ ರೆಡ್ಡಿ ಎನ್.ಪಿ ಸ್ವಾಮಿ, ನಾಗನಾಥ್, ಅಪ್ಪಣ್ಣ,‌ಲಿಂಗರಾಜ್, ಲಕ್ಷ್ಮೀ, ಲಕ್ಮಣ್ ಕುಮಾರ್,‌ವಿನಯ್ ಶ್ರೀನಿವಾಸ್, ಲೀಲಾವತಿ ಧನಶೇಖರ್, ಹನುಮೇಶ್, ಶ್ರೀಕಾಂತ, ಹರೀಶಕುಮಾರ್ ಹನುಮಂತರಾವ್ ಹವಾಲ್ದಾರ್ ಸೇರಿ ಹಲವರು ವಹಿಸಿದ್ದರು.

ರಾಜ್ಯದ ಬೆಂಗಳೂರು,ತುಮಕೂರು, ಕೋಲಾರ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮಂಡ್ಯ, ಧಾರವಾಡ ಸೇರಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ.

Donate Janashakthi Media

Leave a Reply

Your email address will not be published. Required fields are marked *