ಬಾಗಲಕೋಟೆ: ಕುರಿಗಳನ್ನು ಹೊತ್ತೊಯ್ಯುತ್ತಿದ್ದ ಕಳ್ಳರ ಗ್ಯಾಂಗ್ ಪತ್ತೆಹಚ್ಚಲು ಸ್ವತಃ ತಾನೇ ಕಳ್ಳರ ಬೆನ್ನತ್ತಿದ್ದ ಗ್ರಾಮದ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾದ ಘಟನೆ ಬಾದಾಮಿ ತಾಲೂಕಿನ ಹಳಗೇರಿ ಟೋಲ್ ನಾಕಾ ಬಳಿ ಸಂಭವಿಸಿದೆ. ಬಾಗಲಕೋಟೆ
ಮೃತ ಯುವಕನನ್ನು ಶರಣಪ್ಪ ಜಮ್ಮನಕಟ್ಟಿ (23) ಎಂದು ಗುರುತಿಸಲಾಗಿದ್ದೂ, ಭೀಕರವಾಗಿ ಕೊಲೆಯಾದ ಶರಣಪ್ಪ ಉಗಲವಾಟ ಗ್ರಾಮದವನು ಎನ್ನಲಾಗಿದೆ.
ಇದನ್ನೂ ಓದಿ: ತುಮಕೂರು| ವ್ಹೀಲಿಂಗ್ ಪುಂಡರ ಅಟ್ಟಹಾಸದಿಂದ ಓರ್ವ ಸಾವು
ಕಲ್ಲು, ಕೊಡಲಿಯಿಂದ ಕೊಚ್ಚಿ ಶರಣಪ್ಪನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಯಾಕುಬ್ ಅಗಸಿಮನಿ, ಸಲ್ಮಾನ್ ಕರೆಮನ್ಸೂರ್, ಸಚಿನ್ ಭಜಂತ್ರಿ ಎಂಬವವರು ಕೊಲೆ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ನಿನ್ನೆ ರಾತ್ರಿ ಶರಣಪ್ಪನವರ ಕುರಿಗಳನ್ನು ಕಳ್ಳತನ ಮಾಡಿದ್ದರು. ಇವರನ್ನು ಗಮನಿಸಿದ ಶರಣಪ್ಪ ತಕ್ಷಣವೇ ಮೂವರನ್ನು ಸೆರೆಹಿಡಿಯಲು ಬೆನ್ನಟ್ಟಿದ್ದಾರೆ. ಆದರೆ, ಆರೋಪಿಗಳು ತಪ್ಪಿಸಿಕೊಳ್ಳುವ ಸಲುವಾಗಿ ಶರಪ್ಪನ ಮೇಲೆ ಕಲ್ಲು, ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೈದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ: ರಾಜ್ಯ ಬಜೆಟ್‌ನಲ್ಲಿ ದಲಿತರಿಗೆ ಸಿಕ್ಕಿದ್ದೇನು? ಮಾವಳ್ಳಿ ಶಂಕರ್ ಏನು ಹೇಳುತ್ತಾರೆ? Janashakthi Media