ಹಾಸನ| ರೀಲ್ಸ್ ಮಾಡಲೆಂದು ಬೆಟ್ಟದ ತುದಿಯಲ್ಲಿ ನಿಂತು ಪ್ರಪಾತಕ್ಕೆ ಬಿದ್ದ ಯುವಕ

ಹಾಸನ: ದೇಶದಲ್ಲಿ ಜನರಿಗೆ ರೀಲ್ಸ್ ಹುಚ್ಚು ಹೆಚ್ಚಾಗುತ್ತಿದ್ದೂ, ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆಗಲು ಯುವಜನ ಅತಿರೇಕದ ರೀಲ್ಸ್‌ ಮಾಡಲು ಹೋಗಿ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಕೈ ಕಾಲು ಮುರಿದುಕೊಂಡು ಹಾಸಿಗೆ ಹಿಡಿಯುವಂತಾಗುತ್ತಿದ್ದಾರೆ. ಹಾಸನ

ಇದೇ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿದ ಯುವಕನೊಬ್ಬ ಬೆಟ್ಟದಿಂದ ಬಿದ್ದು ಗಾಯಗೊಂಡ ಘಟನೆ ಹಾಸನದಲ್ಲಿ ನಡೆದಿದೆ. ರೀಲ್ಸ್ ಮಾಡಲೆಂದು ಸಕಲೇಶಪುರ ತಾಲೂಕಿನ ಗವಿ ಬೆಟ್ಟದ ತುದಿಯಲ್ಲಿ ನಿಂತ ಯುವಕ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಗಾಯಗೊಂಡಿದ್ದಾನೆ. ರಾಕಿದ್ (18) ನೂರು ಅಡಿ ಆಳದ ಪ್ರಪಾತಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡ ಯುವಕ.

ಇದನ್ನೂ ಓದಿ: ಬಲ್ಡೊಟ ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ಇಂದು ಕೊಪ್ಪಳ ಬಂದ್

ಶನಿವಾರಸಂತೆಯಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಸಕಲೇಶಪುರದ ಗವಿಬೆಟ್ಟಕ್ಕೆ ಬಂದಿದ್ದ ರಾಕಿದ್, ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದ ವೇಳೆ ಜಾರಿ ಬಿದ್ದ ಪರಿಣಾಮ ಆತನ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ

ಸ್ಥಳೀಯರು ಮತ್ತು ಯಸಳೂರು ಠಾಣೆ ಪೊಲೀಸರ ಸಹಾಯದಿಂದ ರಾಕಿದ್ ನನ್ನು ಮೇಲೆತ್ತಿ ತಕ್ಷಣವೇ ಶನಿವಾರಸಂತೆ ಅಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವೈದ್ಯರ ಸಲಹೆ ಮೇರೆಗೆ ಹಾಸನದ ಹಿಮ್ಸ್ಗೆ ಆಸ್ಪತ್ರೆಯಲ್ಲಿ ರಾಕಿದ್ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ.

ಯಸಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ನೋಡಿ: ಕೇಂದ್ರೀಕರಣದ ರಾಜಕಾರಣ ಮತ್ತು ವಿಕೇಂದ್ರೀಕರಣದ ಪಂಚಾಯತ್ ರಾಜ್ ವ್ಯವಸ್ಥೆಯ ವೈಫಲ್ಯ‌… Janashakthi Media

Donate Janashakthi Media

Leave a Reply

Your email address will not be published. Required fields are marked *