ಮೆದುಳು ನಿಷ್ಕ್ರಿಯಗೊಂಡು ನಿಧನ; ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದ ಮಹಿಳೆ

ಕೊಪ್ಪಳ: ತಮ್ಮ ಜೀವನವನ್ನು ಕೆಲವರು ಬದುಕಿದ್ದಾಗಲೂ ಸಾರ್ಥಕವಾಗಿಸಿಕೊಳ್ಳುತ್ತಾರೆ. ಸತ್ತಮೇಲೂ ಕೂಡಾ ಸಾರ್ಥಕ ಮಾಡಿಕೊಳ್ಳುತ್ತಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿ ಮೆದುಳು ನಿಷ್ಕ್ರಿಯಗೊಂಡು ಕೋಮಾಕ್ಕೆ ಜಾರಿದ್ದ ಕೊಪ್ಪಳದ ಭಾಗ್ಯ ನಗರದ ನಿವಾಸಿ, ಗೀತಾ ಸಂಗನಗೌಡರ (42) ಎಂಬುವರು ಸೋಮವಾರ ಸಂಜೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನಿಧನದ ಬಳಿಕವೂ ಅಂಗಾಂಗಗಳು ಜೀವಂತವಾಗಿ ಇರಲಿ ಅಂತ ಕುಟುಂಬ, ಗೀತಾ ಸಂಗನಗೌಡರ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಅಂಗಾಂಗಗಳು ಏಳು ಜನರ ಜೀವಕ್ಕೆ ಆಧಾರವಾಗಿವೆ. ಡಿಸೆಂಬರ್ 15 ರಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ಮಗಳನ್ನು ಮಾತನಾಡಿಸಿಕೊಂಡು, ಶಿವಮೊಗ್ಗ ಮಾರ್ಗವಾಗಿ ಗೀತಾ ಮತ್ತು ಅವರ ಪತಿ ಸೇರಿದಂತೆ ನಾಲ್ಕು ಜನರ ಕುಟುಂಬ ಮರಳಿ ಕೊಪ್ಪಳಕ್ಕೆ ಬರುತ್ತಿದ್ದರು.

ಆದರೆ, ಶಿವಮೊಗ್ಗ ಹೊರವಲಯದಲ್ಲಿ ಎದುರಿಗೆ ಬಂದಿದ್ದ ಇನ್ನೊವಾ ಕಾರು, ಗೀತಾ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಗೀತಾ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದೂ, ಗೀತಾ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗೀತಾ ರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ, ಕೋಮಾಕ್ಕೆ ಜಾರಿದ್ದರು. ಹೀಗಾಗಿ, ಡಿಸೆಂಬರ್ 19 ರಂದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

ಇದನ್ನೂ ಓದಿ: ನವದೆಹಲಿ| ವಿಧಾನಸಭಾ ಚುನಾವಣೆ – ಕಾಂಗ್ರೆಸ್ ನ 2ನೇ ಪಟ್ಟಿ ಬಿಡುಗಡೆ

ಆದರೆ, ಮೆದುಳು ನಿಷ್ಕ್ರಿಯಗೊಂಡಿದ್ದರಿಂದ, ಗೀತಾರನ್ನು ಉಳಿಸಿಕೊಳ್ಳಲು ವೈದ್ಯರ ಪ್ರಯತ್ನ ಫಲ ನೀಡಲಿಲ್ಲ. ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಆಸ್ಪತ್ರೆಯ ವೈದ್ಯರು, ಅಂಗಾಂಗ ದಾನದ ಬಗ್ಗೆ ಕುಟುಂಬದಸ್ತರಿಗೆ ಹೇಳಿದರು. ಇದಕ್ಕೆ ಗೀತಾ ಕುಟುಂಬದವರು ಒಪ್ಪಿಗೆ ನೀಡಿದ್ದಾರೆ.

ಹೀಗಾಗಿ, ಸೋಮವಾರ ಕಿಡ್ನಿ, ಲಿವರ್, ಹೃದಯ, ಕಣ್ಣುಗಳನ್ನು ತಗೆದು ಅವಶ್ಯಕತೆ ಇದ್ದ ಏಳು ಜನರಿಗೆ ಹಾಕಲಾಗಿದೆ. ಮಂಗಳವಾರ ಮುಂಜಾನೆ ಮೃತ ಗೀತಾರ ಪ್ರಾರ್ಥಿವ ಶರೀರಕ್ಕೆ ಗೌರವಪೂರ್ಣ ನಮನ ಸಲ್ಲಿಸಿ, ಪ್ರಾರ್ಥಿವ ಶರೀರವನ್ನು ಕೊಪ್ಪಳಕ್ಕೆ ಕಳುಹಿಸಿ ಕೊಟ್ಟರು. ಇಂದು ಮಧ್ಯಾಹ್ನದ ಹೊತ್ತಿಗೆ ಪ್ರಾರ್ಥಿವ ಶರೀರವನ್ನು ಕೊಪ್ಪಳಕ್ಕೆ ತಂದ ಕುಟುಂಬ, ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಕುಟುಂಬದವರು ಮತ್ತು ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಒಂದಡೆ ಗೀತಾಳನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದ್ದರೆ, ಇನ್ನೊಂದಡೆ ಅವರ ಅಂಗಾಂಗಗಳು ಏಳು ಜನರಿಗೆ ಜೀವ ಉಳಿಸಿಕೊಳ್ಳಲು ನೆರವಾಗಿದ್ದು ಕುಟುಂಬದವರಿಗೆ ಸ್ವಲ್ಪ ತೃಪ್ತಿ ನೀಡಿದೆ. ಸಾವಿನಲ್ಲಿ ಸಾರ್ಥಕತೆ ಮೆರೆಯುವ ಮೂಲಕ ಗೀತಾ ಏಳು ಜನರ ಜೀವಕ್ಕೆ ನೆರವಾಗಿದ್ದಾರೆ.

ಇದನ್ನೂ ನೋಡಿ: ಸಂಸತ್ತಿನ ಅಧಿವೇಶನವನ್ನು ಬೀದಿ ಜಗಳದ ಮಟ್ಟಕ್ಕಿಳಿಸಿದ ಬಿಜೆಪಿಯ ಅನೈತಿಕ ರಾಜಕಾರಣದ ಅನಾವರಣ…. Janashakthi Media

Donate Janashakthi Media

Leave a Reply

Your email address will not be published. Required fields are marked *