ಇಳಕಲ್ | ಕಾರ್ಮಿಕರ ಕಣ್ಣೀರಿಗೆ ತೆರೆ: ಇಳಕಲ್‌ನಲ್ಲಿ ಜೀತಮುಕ್ತಿ ಕಾರ್ಯಾಚರಣೆ ಯಶಸ್ವಿ

ಇಳಕಲ್ : ಒಡಿಶಾ ಮೂಲದ ಐವರು ಬಾಲಕಾರ್ಮಿಕರು ತಾಲ್ಲೂಕಿನ ಸಂಕ್ಲಾಪೂರ ಗ್ರಾಮ ವ್ಯಾಪ್ತಿಯ ಇಟ್ಟಂಗಿ ಭಟ್ಟಿಯಲ್ಲಿ ಜೀತಕ್ಕಿದ್ದರು 25 ಕಾರ್ಮಿಕರನ್ನು ಜೀತಮುಕ್ತಗೊಳಿಸಲಾಗಿದೆ.

25 ಕಾರ್ಮಿಕರು ಹಾಗೂ ಅಲ್ಲಿಯೇ ಇದ್ದ 9 ಮಕ್ಕಳನ್ನು ಬಂಧಮುಕ್ತ ಮಾಡಿ, ರಕ್ಷಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್, ಪೋಲಿಸರು ಭಟ್ಟಿ ಮೇಲೆ ದಾಳಿ ಮಾಡಿದರು.

ಇದನ್ನೂ ಓದಿ : ಬಿಜೆಪಿ ನಾಯಕನಿಗೆ ರಾಜ್ಯ ಸಚಿವರ ಸ್ಥಾನಮಾನ ಹಿಂಪಡೆದ ರಾಜ್ಯ ಸರ್ಕಾರ

ಇಟ್ಟಂಗಿ ಭಟ್ಟಿ ಮಾಲೀಕ ಈರಪ್ಪ ವೀರಭದ್ರಪ್ಪ ಕುಂಬಾರ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಜೀತಪದ್ದತಿ ನಿಷೇಧ ಕಾಯ್ದೆಯಡಿ  ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಅಧಿಕಾರಿ ನಾಸಿರ್ ಹುಸೇನ ಬೋರಗಿ ದೂರು ನೀಡಿದ್ದಾರೆ.

ಇಳಕಲ್ ತಾಲ್ಲೂಕಿನ ಸಂಕ್ಲಾಪೂರ ಗ್ರಾಮದ ಹತ್ತಿರ ಇಟ್ಟಂಗಿಭಟ್ಟಿಯಲ್ಲಿ ಜೀತಕ್ಕಿದ್ದ 5 ಬಾಲಕಾರ್ಮಿಕರು 20 ಕಾರ್ಮಿಕರು 9 ಮಕ್ಕಳು ಸೇರಿ 34 ಜನರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ಹಾಗೂ ಪೊಲೀಸರು ಜೀತಮುಕ್ತ ಮಾಡಿದರು.

ಶೌಚಾಲಯ, ವೈದ್ಯಕೀಯ ಉಪಚಾರ ಹಾಗೂ ಊಟ ನೀಡದೇ, ನಿಗದಿತ ಅವಧಿಗಿಂತ ಹೆಚ್ಚಿಗೆ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು’ ಒಡಿಶಾದಿಂದ ಕರೆ ತರಲಾಗಿದ್ದ ಕಾರ್ಮಿಕರಿಗೆ ₹ 10 ಲಕ್ಷ ಮುಂಗಡ ನೀಡಿ, ವಾರಕ್ಕೆ ಒಬ್ಬರಿಗೆ ₹ 400 ನೀಡಲಾಗುತ್ತಿತ್ತು. ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಕಾರ್ಮಿಕರನ್ನು ಬಾಗಲಕೋಟೆಗೆ ಕರೆದೊಯ್ದು, ಅಲ್ಲಿಂದ ಒಡಿಶಾದ ಅವರ ಸ್ವಂತ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಸುಂಗಳದ ತಿಳಿಸಿದ್ದಾರೆ.

ಇದನ್ನೂ ನೋಡಿ : “ಮ್ಯಾಗ್ನೆಟ್ ಯೋಜನೆಗೆ ವಿರೋಧ – ಆಂದೋಲನವಾಗುತ್ತಿರುವ ಸರ್ಕಾರಿ ಶಾಲೆ ಉಳಿಸಿ ಹೋರಾಟ” Janashakthi Media

Donate Janashakthi Media

Leave a Reply

Your email address will not be published. Required fields are marked *