ಹಾಸನ: ಮೆಹಂದಿ ಕೋನ್ ತರುವಂತೆ ವೃದ್ಧನ ಮೂಳೆಚಿಕಿತ್ಸೆಗೆ ತರುವಂತೆ ಚೀಟಿ ಬರೆದುಕೊಟ್ಟಿದ್ದು ಇದನ್ನು ತರಲು ಆತ ಮೆಡಿಕಲ್ ಶಾಪ್‌ಗಳಿಗೆಲ್ಲಾ ತಿರುಗಾಡಿದ್ದು ಬಳಿಕ ಸಾಮಾಜಿಕ ಹೋರಾಟಗಾರ್ತಿಯ ಮೂಲಕ ಅದು ಔಷಧಿ ಅಲ್ಲ, ಮೆಹಂದಿ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿ ಬಳಿಕ ಸುದ್ದಿಕೇಂದ್ರಕ್ಕೆ ಬಂದು ಸದ್ದು ಮಾಡಿ ದಾದಿಯನ್ನು ಮುಜುಗರಕ್ಕೀಡಾಗುವಂತೆ ಮಾಡಿತ್ತು.
ಆದರೆ, ಈ ಮೆಹಂದಿಯ ಕಥೆಗೆ ಟ್ವಿಸ್ಟ್ ಎನ್ನುವಂತಹ ಚರ್ಚೆಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದಾಗುತ್ತಿದೆ. ಅದು ಏನಪ್ಪಾ! ಅಂದರೆ, “ಮೆಹಂದಿಯನ್ನು ಸಾಮಾನ್ಯವಾಗಿ ವೆರಿಕೋಸ್ ವೈನ್ಸ್ (vericous vine) ಗುರುತಿಸುವುದಕ್ಕೆ ಸರ್ಜರಿ ವಿಭಾಗದವರು ಮೆಹಂದಿ ಕೋನ್ ಯೂಸ್ ಮಾಡುತ್ತಾರೆ” ಎಂಬುದು.
ಇದನ್ನೂ ಓದಿ: ಜನತೆ ಮೇಲೆ ಬೆಲೆ ಏರಿಕೆ ಬರೆ: ಅಶ್ವತ್ಥನಾರಾಯಣ್
ಇದನ್ನು ಬಳಸುವುದರ ಮುಖ್ಯ ಉದ್ದೇಶ ಇದನ್ನ ಬಳಸಿ ಮಾಡಿದ ಮಾರ್ಕಿಂಗ್ ಹೋಗೋದಿಲ್ಲ ಅನ್ನೋದು. ಇದಕ್ಕೆ ಒಂದು ಮಾರ್ಕರ್ ಪೆನ್ನು ಕೂಡಾ ಸಿಗುತ್ತದೆ. ಆದರೆ ಅದು ಕಾಸ್ಟ್ಲಿ ಅನ್ನೋ ಕಾರಣಕ್ಕೆ ಬಡವರಿಗೆ ಖರೀದಿ ಮಾಡಲು ಕಷ್ಟ ಆಗುತ್ತದೆ ಎನ್ನುವ ಕಾರಣದಿಂದ ಮೆಹಂದಿ ಕೋನ್ ಬರೆದು ಕೊಡಲಾಗುತ್ತದೆ. ಸಂಜೆಯಿಂದ ಚರ್ಚೆಯಲ್ಲಿರುವ ತಾತನಿಗೂ ಅದೇ ಕಾರಣದಿಂದ ಬರೆದುಕೊಡಲಾಗಿತ್ತು ಎಂದು ಡಾಕ್ಟರ್ ಹೇಳಿರುವುದು. ಮೆಹೆಂದಿ ಬಳಕೆ ಬಗ್ಗೆ ಇನ್ನೂ ತಿಳಿಯಬೇಕಿದೆ.
ಇದನ್ನೂ ನೋಡಿ: ವಚನಾನುಭವ – 01 ಅರ್ಚನೆ ಪೂಜನೆ ನೇಮವಲ್ಲ, ಮಂತ್ರ ತಂತ್ರ ನೇಮವಲ್ಲ – ಡಾ. ಮೀನಾಕ್ಷಿ ಬಾಳಿ Janashakthi Media