ಬೆಂಗಳೂರಿನಿಂದ ಕೋಲ್ಕತಾಗೆ ರೈಲು ಟಿಕೆಟ್ ದರ ಬರೋಬ್ಬರಿ 10,100 ರೂಪಾಯಿ; ಬೆಚ್ಚಿ ಬಿದ್ದ ಪ್ರಯಾಣಿಕ

ಬೆಂಗಳೂರು: ಇತರ ಎಲ್ಲಾ ಸಾರಿಗೆ ವ್ಯವಸ್ಥೆಗಳಿಗಿಂತ ರೈಲು ಪ್ರಯಾಣ ಅಗ್ಗ. ಹೀಗಾಗಿ ರೈಲು ಪ್ರಯಾಣವನ್ನೇ ಬಹುತೇಕರು ನೆಚ್ಚಿಕೊಂಡಿದ್ದಾರೆ. ಆದರೆ ಪ್ರಯಾಣಿಕನೊಬ್ಬ ರೈಲಿನ ಟಿಕೆಟ್ ದರ ನೋಡಿ ಬೆಚ್ಚಿ ಬಿದ್ದಿದ್ದಾನೆ. ಕಾರಣ ಬೆಂಗಳೂರಿನಿಂದ ಕೋಲ್ಕತಾಗೆ ರೈಲು ಟಿಕೆಟ್ ಬುಕಿಂಗ್ ಮಾಡಲು ನೋಡಿದರೆ ಟಿಕೆಟ್ ದರ ಬರೋಬ್ಬರಿ 10,100 ರೂಪಾಯಿ. ಈ ಟಿಕೆಟ್ ದರದ ಸ್ಕ್ರೀನ್‌ಶಾಟ್ ಹಂಚಿಕೊಂಡ ಪ್ರಯಾಣಿಕನಿಗೆ ನೆಟ್ಟಗರು ಕೆಲ ಸಲಹೆ ನೀಡಿದ್ದಾರೆ. ಅದೇ ರೈಲಿನ ಅೆ ಕೋಚ್‌ನಲ್ಲಿ ಕಡಿಮೆ ಬೆಲೆಗೆ ಪ್ರಯಾಣಿಸುವ ಜುಗಾಡ್ ಐಡಿಯಾ ಕೊಟ್ಟಿದ್ದಾರೆ.

ರೆಡಿಟ್ ಬಳಕೆದಾರನೊಬ್ಬ ಬೆಂಗಳೂರಿನಿಂದ ಕೋಲ್ಕತಾಗೆ ಪ್ರಯಾಣಿಸಲು ರೈಲು ಟಿಕೆಟ್ ಬುಕ್ ಮಾಡಲು ಮುಂದಾಗಿದ್ದಾನೆ. 2ಎ ಎಸಿ ಟ್ರೈನ್ ಟಿಕೆಟ್ ಬುಕ್ ಮಾಡಲು ಹೋದ ಪ್ರಯಾಣಿಕ ಟಿಕೆಟ್ ದರ ನೋಡಿ ದಂಗಾಗಿದ್ದಾನೆ. ಬೆಂಗಳೂರು ಕೋಲ್ಕತಾ 2ಎ ಎಸಿ ಕೋಚ್‌ಗೆ ಟಿಕೆಟ್ ದರ ಬರೋಬ್ಬರಿ 10,100 ರೂಪಾಯಿ. ಕೇವಲ 2 ಎಸಿ ಕೋಚ್‌ಗೆ ಈ ಬೆಲೆ ಎಂದು ಪ್ರಯಾಣಿಕ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾನೆ.

ಬೆಂಗಳೂರಿನಿಂದ ಕೋಲ್ಕತಾಗೆ ವಿಮಾನ ಪ್ರಯಾಣ ದರ ಸರಾಸರಿ 4,000 ರಿಂದ 5,000 ರೂಪಾಯಿ. ಆದರೆ 2ಎ ಎಸಿ ಬೆಲೆ ಇದಕ್ಕಿಂತ ದುಪ್ಪಟ್ಟು. ಪ್ರಯಾಣಿಕ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಪೋಸ್ಟ್ ಮಾಡುತ್ತಿದ್ದಂತೆ ಹಲವರು ಕೆಲ ಸಲಹೆ ನೀಡಿದ್ದಾರೆ. ರೈಲಿಗಿಂತ ವಿಮಾನದಲ್ಲಿ ಪ್ರಯಾಣಿಸಿ ಈ ಬೆಲೆಯಲ್ಲಿ ಕೋಲ್ಕತಾದಲ್ಲಿ ಇಳಿದು ಬಂಗಾಳ ಸಿಹಿ ತಿಂದು ಬೆಂಗಳೂರಿಗೆ ಮರಳಬಹುದು ಎಂದು ಸೂಚಿಸಿದ್ದಾರೆ. ಇದೇ ವೇಳೆ ಕೆಲವರು ಇದೇ 2ಎ ಎಸಿ ಕೋಚ್‌ನಲ್ಲಿ ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣಿಸಿ ಬಳಿಕ ದಂಡ ಕಟ್ಟಿದರೆ ಸರಿ. ಹೀಗೆ ಮಾಡಿದರೂ 5,000 ರೂಪಾಯಿ ದಾಟಲ್ಲ ಎಂದಿದ್ದಾರೆ.

ಇದನ್ನೂ ಓದಿ: 24,657 ಕೋಟಿಯ 8 ರೈಲ್ವೆ ಯೋಜನೆಗಳಿಗೆ ಕೇಂದ್ರ ಸಂಪುಟ ಗ್ರೀನ್ ಸಿಗ್ನಲ್: ಕರ್ನಾಟಕಕ್ಕೆ ರೆಡ್ ಸಿಗ್ನಲ್!

ಇದು ತತ್ಕಾಲ್ ದರ ಸೇರಿಕೊಂಡಿದೆ. ಸಾಮಾನ್ಯವಾಗಿ ಬೆಂಗಳೂರಿನಿಂದ ಕೋಲ್ಕತಾ ಟಿಕೆಟ್ ಬೆಲೆ 3,000 ರೂಪಾಯಿ ಮಾತ್ರ. ತತ್ಕಾಲದಲ್ಲಿ ಬುಕಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಹೀಗಾಗಿ ಸರಿಸುಮಾರು 6,000 ರೂಪಾಯಿ ತತ್ಕಾಲ್ ಬೆಲೆ ಸೇರಿಕೊಂಡಿದೆ ಎಂದು ಕೆಲವರು ಸೂಚಿಸಿದ್ದಾರೆ.

ಇದೇ ವೇಳೆ ಹಲವರು ರೈಲು ಟಿಕೆಟ್ ದರ ಕುರಿತು ಕೆಲ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ರೈಲಿನಲ್ಲೇ ಬುಕಿಂಗ್ ಬೆಲೆ ಈ ರೀತಿ ಮಾಡಿದರೆ ತುರ್ತಾಗಿ ಪ್ರಯಾಣ ಮಾಡಬೇಕಿರುವ ಜನಸಾಮಾನ್ಯರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ನೋಡಿ: ನೆಲಕ್ಕೆ ಅಪ್ಪಳಿಸಿದ ವಿಮಾನ – 62 ಮಂದಿ ಸಾವು

Donate Janashakthi Media

Leave a Reply

Your email address will not be published. Required fields are marked *