ಉತ್ತರ ಪ್ರದೇಶ: ಬಲ್ಲಿಯಾಲ ಕಾನ್ವೆಂಟ್ ಶಾಲೆಯ ಶಿಕ್ಷಕ ಟೋಪಿ ಧರಿಸಿ ಶಾಲೆಗೆ ಬಂದಿದ್ದ ಕಾರಣದಿಂದ 6ನೇ ತರಗತಿ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂಬ ಆರೋಪದ ಮೇಲೆ ಎಫ್‌ಐಆರ್(FIR) ದಾಖಲಾಗಿದೆ.
ಡಿಸೆಂಬರ್ 20ರಂದು ಈ ಘಟನೆ ನಡೆದಿದ್ದು, ಡಿಸೆಂಬರ್ 26ರಂದು ಜೈಪಕಾಶ್ ನಗರದ ಅನಿಲ್ ಕುಮಾರ್ ಗುಪ್ತ ಎಂಬುವವರು ನೀಡಿದ ದೂರಿನ ಮೇಲೆ ಶಾಲೆಯ ಶಿಕ್ಷಕ ಜಿತೇಂದ್ರರೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಡಾಲರ್ ಆಧಿಪತ್ಯಕ್ಕೆ ಬರುತ್ತಿವೆ ಸವಾಲುಗಳು
ಮಗು ಶಾಲೆಗೆ ಟೋಪಿ ಧರಿಸಿದ್ದಾಕ್ಕಾಗಿ ಕುಪಿತಗೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಮನಬಂದಂತೆ ನಿಂದಿಸಿದ್ದಾನೆ. ಅಲ್ಲದೆ ಗೋಡೆಗೆ ತಳ್ಳಿ ಥಳಿಸಿದ್ದಾನೆ. ತಲೆಗೆ ಹೊಡೆದಿದ್ದಾನೆ. ಮರುದಿನ ಈ ಘಟನೆಯ ಬಗ್ಗೆ ಮಗುವಿನ ತಂದೆ ಅನಿಲ್ ಕುಮಾರ್ ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ್ದಾನೆ.
ದೂರು ಹಿನ್ನೆಲೆ ಮತ್ತೆ ಹೊಡೆದಿದ್ದಾನೆ ಎಂದು ತಂದ ಆರೋಪಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತಲೆ ಮಾಡಲಾಗುವುದು ಎಂದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ನೋಡಿ: ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ! -ಸಂತೋಷ್ ಲಾಡ್ Janashakthi Media