ಬೆಂಗಳೂರು: ಸನಾತನದ ಧರ್ಮ ರಕ್ಷಣೆ ಬಗ್ಗೆ ಅರುಚುತ್ತಾ ಕೋರ್ಟ್ ಕಲಾಪದಲ್ಲೇ ವಕೀಲರೊಬ್ಬರಿಂದ ಸಿಜೆಐ ರವರ ಮೇಲೆ ದಾಳಿ ನಡೆದಿರುವುದು ಅತ್ಯಂತ ಆತಂಕಕಾರಿ ದುರ್ಘಟನೆ ಯಾಗಿದ್ದು, ಕೋಮು ಆಸಹನೆಯ ಪರಾಕಾಷ್ಠೆಗೆ ಸಾಕ್ಷಿ ಒದಗಿಸಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ತೀವ್ರವಾದ ಆತಂಕವನ್ನು ವ್ಯಕ್ತಪಡಿಸುತ್ತದೆ ಎಂದು ಅಧ್ಯಕ್ಷ ಯು ಬಸವರಾಜ ಮತ್ತು ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಜಂಟಿ ಹೇಳಿಕೆ ನೀಡಿದ್ದಾರೆ. ಸಿಜೆಐ
ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ವ್ಯಕ್ತಿ ಒಬ್ಬರು ಕುಳಿತಿರುವುದು ಈ ಸನಾತನ ಧರ್ಮ ರಕ್ಷಕರ ಆಸಹನೆಗೆ ಕಾರಣವಾಗಿರುವಂತಹದ್ದು. ನರೇಂದ್ರ ಮೋದಿ ರವರ ಅಧಿಕಾರದ ರಕ್ಷಣೆಯಲ್ಲಿ ದೇಶದಾದ್ಯಂತ ಪ್ರತಿ ದಿನವೂ ವರದಿಯಾಗುತ್ತಿರುವ ಕೋಮು ಮನಸ್ಥಿತಿಯ ಅಸಹನೆಗಳು ಈಗ ಕೋರ್ಟ್ ಕಲಾಪವನ್ನು ಪ್ರವೇಶಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವ ಆತ್ಮಸ್ತೈರ್ಯ; ಹೆಚ್ಚುತ್ತಿರುವ ಆತ್ಮಹತ್ಯೆ
ಅತ್ಯುನ್ನತ ನ್ಯಾಯಾಂಗದ ಸಂಸ್ಥೆಯ ಕಲಾಪದಲ್ಲಿ, ಅದೂ ಒಬ್ಬ ಹಿರಿಯ ವಕೀಲರ ಇಂತಹ ಅನುಚಿತ, ಅಕ್ಷಮ್ಯ ದುರ್ವರ್ತನೆ ಯು ನಮ್ಮ ಘನ ಸಂವಿಧಾನದ ಮೇಲೆ ನಡೆದಿರುವ ನೇರ ಧಾಳಿಯಾಗಿದೆ.
ಇಂತಹ ಅನಿರೀಕ್ಷಿತ ದಾಳಿಯನ್ನು ಗರಿಷ್ಠ ಸಂಯಮದಿಂದ ನಿಭಾಯಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿಗಳ ನಡೆ ಅಭಿನಂದನಾರ್ಹವಾಗಿದ್ದು ಎಲ್ಲಾ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಪ್ರೇಮಿಗಳು ಈ ಮತೀಯ ಮನಸ್ಥಿತಿಯ ಹೀನ ಕೃತ್ಯವನ್ನು ಹಾಗೂ ಹೀನ ಕೃತ್ಯ ಎಸಗಿದ ವ್ಯಕ್ತಿ ಪರವಾಗಿ ಸಹಾನುಭೂತಿ ಮೂಡಿಸುವ ಫ್ಯಾಸಿಸ್ಟ್ ಶಕ್ತಿಗಳ ಪ್ರಚಾರಾಂದೋಲನ ವನ್ನು ತೀವ್ರವಾಗಿ ಖಂಡಿಸಬೇಕು ಮತ್ತು ತೀವ್ರವಾಗಿ ಪ್ರತಿಭಟಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ನಾಟಕ | “ಪ್ಲಾಸ್ಟಿಕ್ ಅಸುರ” Janashakthi Media
