ಉತ್ತರ ಪ್ರದೇಶ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಟವಾಗುತ್ತಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿಯಲ್ಲಿ ಭಾರೀ ಹಿನ್ನಡೆಯನ್ನು ಸಾಧಿಸಿದ್ದಾರೆ.
ಅಮೇಥಿಯಲ್ಲಿ ಕಳೆದ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದ ಸ್ಮೃತಿ ಇರಾನಿ ಮತ್ತೆ ಕಣಕ್ಕಿಳಿದಿದ್ದಾರೆ. ಆದರೆ ಇದೀಗ ಬಿಜೆಪಿ ನಾಯಕಿ ಸ್ಮೃತಿ ಇರಾನಿಗೆ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಕಿಶೋರ್ ಲಾಲ್ ಮುನ್ನಡೆಯನ್ನು ಸಾಧಿಸಿದ್ದಾರೆ.
ಇದನ್ನೂ ಓದಿ: ಕುಸಿತ ಕಂಡ ಷೇರುಮಾರುಕಟ್ಟೆ
ಸದ್ಯಕ್ಕೆ ಸ್ಮೃತಿ ಇರಾನಿ 37640 ಮತಗಳಿಂದ ಹಿನ್ನಡೆಯನ್ನು ಸಾಧಿಸಿದ್ದಾರೆ. ಈ ವರೆಗೆ ಕಾಂಗ್ರೆಸ್ ಅಭ್ಯರ್ಥಿ ಕಿಶೋರ್ ಲಾಲ್ 1,22,767 ಮತಗಳನ್ನು ಪಡೆದಿದ್ದರೇ, ಸ್ಮೃತಿ ಇರಾನಿ 85,127 ಮತಗಳನ್ನು ಪಡೆದಿದ್ದಾರೆ.
ಇದನ್ನೂ ನೋಡಿ: ದೇವೇಗೌಡ್ರೆ ಇನ್ನಾದ್ರೂ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ ; ಸಿದ್ದನಗೌಡ ಪಾಟೀಲ Janashakthi Media