ಬೆಂಗಳೂರು: ಕಾಂಗ್ರೆಸ್ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆ ಜೂ 16 ರಿಂದ ಅರ್ಜಿ ಸೀಕಾರ ಪ್ರಾರಂಭವಾಗ ಬೇಕಾಗಿತ್ತು,ಪ್ರತ್ಯೇಕ ಆ್ಯಪ್ ಸಿದ್ದಪಡಿಸಬೇಕಿದ್ದ ಕಾರಣ ಮುಂದುಡಲಾಗಿತ್ತು. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ದವಾಗಿದ್ದು, ಸಿಎಂ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನದ ನಂತರ ಅರ್ಜಿ ಸ್ವೀಕಾರ ಆರಂಭವಾಗಲಿದ್ದು, ಕುಟುಂಬದ ಯಜನಮಾನಿಗೆ ಮಾಸಿಕ 2000 ರೂ, ನೀಡುವ ʼಗೃಹ ಲಕ್ಷ್ಮೀʼ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಿಸಲು ಸಿದ್ದತೆ ಪೂರ್ಣಗೊಂಡಿದೆ.ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈಗಾಗಲೇ ಗೃಹ ಜ್ಯೋತಿ ಯೋಜನೆಯಡಿ ಆರಂಭವಾಗಿರುವ ಅರ್ಜಿ ಸ್ವೀಕರ ಪ್ರಕ್ರಿಯೆ ಸಮಸ್ಯೆಯನ್ನು ಸೃಷ್ಟಿಸಿದೆ. ಸೇವಾ ಸಿಂಧು ಓವರ್ ಲೋಡ್ ಆಗಿ ಒತ್ತಡವಾಗುತ್ತಿದೆ.ಇದಕ್ಕೆಲ್ಲಾ ಹೊಸ ಆ್ಯಪ್ ಅಲ್ಲಿ ಪರಿಹಾರ ಸಿಗಲಿದ್ದು ಎಂದು ತಿಳಿಸಿದ್ದಾರೆ. ಜೊತೆಗೆ ಬಾಪೂಜಿ ಸೇವಾ ಕೇಂದ್ರ ನಾಡಕಚೇರಿಗಳಲ್ಲೂ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.
ಈಗ ತಯಾರಿಯಾಗಿರುವ ಆ್ಯಪ್‌ನ್ನು ಸಿಎಂ ಸಿದ್ದರಾಮಯ್ಯನವರು ಪರಿಶೀಲಿದ ನಂತರ ಬುಧುವಾರ ಸಂಪುಟ ಸಭೆ ಯೋಜನೆಯ ರೂಪುರೇಷ ಅಂತಿಮಗೊಳಿಸಲಿದೆ.
ಇದನ್ನೂ ಓದಿ:ಕಾಂಗ್ರೆಸ್ 5 ‘ಗ್ಯಾರಂಟಿ’ ಜಾರಿ: ಯೋಜನೆಗಳ ಲಾಭ ಪಡೆಯೋದು ಹೇಗೆ? ಇಲ್ಲಿದೆ ಸಮಗ್ರ ವಿವರ!
ಡಿಸಿಎಂ ಅಧ್ಯಕ್ಷತೆಯಲ್ಲಿ ಸಿದ್ದತಾ ಸಭೆ ನಡೆಸಲಾಯಿತು.ಈ ಸಭೆಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್ , ಪ್ರಿಯಾಂಕ್ ಖರ್ಗೆ, ಅಂಜುಮ್ ಪರ್ವೇಜ್, ಮಂಜುಳಾ, ಐಎಎಸ್ ಅಧಿಕಾರಿಗಳಾದ ಪೊನ್ನುರಾಜ್ ಮತ್ತಿತರರು ಉಪಸ್ಥಿತರಿದ್ದರು.