ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನ ಕಸದ ಡಬ್ಬಿಯಲ್ಲಿ ನವಜಾತ ಗಂಡು ಶಿಶು ಪತ್ತೆ

ಬೆಂಗಳೂರು: ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನ ಕಸದ ಡಬ್ಬಿಯಲ್ಲಿ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದೆ.

ಭುವನೇಶ್ವರದಿಂದ ಬೆಂಗಳೂರಿಗೆ ಆಗಮಿಸಿದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ವಚ್ಛತೆ ಮಾಡುವ ವೇಳೆ ರೈಲಿನ ಡಸ್ಟ್ ಬಿನ್ ನಲ್ಲಿ ಶಿಶು ಪತ್ತೆಯಾಗಿದೆ. ಬಟ್ಟೆಯಲ್ಲಿ ಮಗುವನ್ನು ಸುತ್ತಿ ದುರುಳರು ಕಸದ ಡಬ್ಬಿಗೆ ಹಾಕಿದ್ದಾರೆ.

ಇದನ್ನೂ ಓದಿ: ಉಡುಪಿ: ನಜ್ಜುಗುಜ್ಜಾದ ಹೊಸ ಫಾರ್ಚೂನ‌ರ್ ಕಾರು

ರೈಲಿನಲ್ಲಿಯೇ ಮಹಿಳೆ ಹೆರಿಗೆಯಾಗಿದ್ದು, ಬಳಿಕ ಮಗುವನ್ನು ಡಸ್ಟ್ ಬಿನ್ ಗೆ ಎಸೆದು ಹೋಗಿರುವ ಸಾದ್ಯತೆ ಇದೆ ಎಂದು ಶಂಕಿಸಲಾಗಿದೆ. ಸ್ನವಜಾತ ಶಿಶು ಸಾವನ್ನಪ್ಪಿದ್ದು, ರೈಲ್ವೆ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ರೈಲು ಡಿಕ್ಕಿ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದ ಮುತ್ಸಂದ್ರ ಬಳಿ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ಹೊರವಲಯದ ಮುತ್ಸಂದ್ರ ರೈಲ್ವೆ ಹಳಿ ಮೇಲೆ ಮಾರಪ್ಪ (45) ಎಂಬುವವರ ಮೃತ ದೇಹ ಪತ್ತೆಯಾಗಿದೆ.

ಮಾರಪ್ಪ ನಗರದ ಬಸವ ಭವನ ಬಳಿ ಮೀನಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಮುಂಜಾನೆ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ರೈಲು ಡಿಕ್ಕಿ ಹೊಡೆದು ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ರೈಲ್ವೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ಆದಿಕವಿ ಪಂಪನ ಕುರಿತು ಕಮಲಾ ಹಂಪನಾ ಮಾತುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *