ಧಾರವಾಡ: ಮಹಿಳಾ ಕಾದಂಬರಿಕಾರರು ‘ಆಧುನಿಕತೆ ಪ್ರವೇಶವಾದರೂ ಸಂಪ್ರದಾಯ ಬಿಡಲಾರದ ಮಾದರಿಯಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಅಧ್ಯಕ್ಷೆ ವಿನಯಾ ಒಕ್ಕುಂದ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಈಚೆಗೆ ನಡೆದ ‘ಲೈಟ್ ಹೌಸ್’ ಕೃತಿ (ಬಸು ಬೇವಿನಗಿಡದ ಅನುವಾದಿಸಿರುವ ವರ್ಜಿನಿಯಾ ವೂಲ್ಪ್ ಅವರ ಪುಸ್ತಕ) ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಇದನ್ನೂ ಓದಿ : ಬೆಂಗಳೂರು | ವಿಧಾನಸೌಧಕ್ಕೆ ಚಿನ್ನ ಬಂದ ಕುರಿತು ತನಿಖೆಗೆ ಸೂಚನೆ: ಗೃಹ ಸಚಿವ ಪರಮೇಶ್ವರ್
ಸಹೃದಯರ ಮನಸ್ಸಿನ ಆಳಕ್ಕೆ ಪಾತ್ರಗಳು ಇಳಿಯುತ್ತವೆ. ಲೈಟ್ ಹೌಸ್ ಕಾದಂಬರಿ, ನೂರು ವರ್ಷಗಳ ಹಿಂದೆ ರಚಿತವಾಗಿದ್ದರೂ ಇವತ್ತಿನ ಕಾಲ ಘಟ್ಟದಲ್ಲೂ ಮುಖಾಮುಖಿಯಾಗಿ ನಿಲ್ಲುತ್ತದೆ. ಸಹೃದಯರ ಮನಸ್ಸಿನ ಆಳಕ್ಕೆ ಪಾತ್ರಗಳು ಇಳಿಯುತ್ತವೆ. ಸಂಪ್ರದಾಯದಿಂದ ಆಧುನೀಕತೆಯ ಕಡೆಗೆ ಚಲಿಸುವ ಮಹಿಳೆಯ ರೂಪಕಗಳು ಅಗಾಧ ಅರ್ಥವನ್ನು ಹೊರಸೂಸುತ್ತವೆ ಎಂದು ಹೇಳಿದರು.
ಪಾತ್ರಗಳೆಲ್ಲವೂ ಸೃಜನಶೀಲವಾಗಿವೆ’ ಹೆಣ್ಣು ಮೀನಿನ ಅತಿಯಾದ ಆಸೆಯಿಂದ ಇಡೀ ಕುಟುಂಬ ನಾಶವಾಗುವ ಸಂದರ್ಭವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ ಎಂದರು.
ಕೃತಿಯ ಕುರಿತು ಪ್ರಾಧ್ಯಾಪಕಿ ಅನಸೂಯ ಕಾಂಬಳೆ ಮಾತನಾಡಿ, ‘ಲೈಟ್ ಹೌಸ್’ ಎಂಬುದು ಬೆಳಕಿನ ಸಂಕೇತ. ಬರುವ ಹಡಗಿಗೆ ದಾರಿ ತೋರಿಸುವಂತೆ, ಒಂದು ಕುಟುಂಬಕ್ಕೆ ಮಹಿಳೆ ಬೆಳಕಾಗಿ ಹೇಗೆ ನಿಲ್ಲುತ್ತಾಳೆ ಎಂಬುದರ ಸಂಕೇತವಾಗಿದೆ. ಆದರೆ ಇದಕ್ಕೆ ಪತಿ ಹೇಗೆ ತಡೆಗೋಡೆಯಾಗಿ ವರ್ತಿಸುತ್ತಾನೆ ಎಂಬ ಚಿತ್ರಣವಿದೆ’ ಎಂದು ವಿಶ್ಲೇಷಿಸಿದರು.
‘ನಿರುದ್ಯೋಗದ ಸಮಸ್ಯೆ, ವರ್ಗ ವೈಷಮ್ಯದ ಚಿತ್ರಣವಿದೆ. ಯುದ್ಧ ಸಂದರ್ಭದಲ್ಲಿ ಯುದ್ಧ ಎನ್ನುವುದು ಅಧಿಕಾರದ ಅಭಿವ್ಯಕ್ತಿಯ ಭಾವವಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಶಿಧರ ತೋಡಕರ ಮಾತನಾಡಿ, ‘ಕಾದಂಬರಿ ಶತಮಾನದ ಹಿಂದೆ ರಚಿತಗೊಂಡಿದ್ದರೂ ಇದರ ವಸ್ತು, ಪಾತ್ರಗಳು ಪ್ರಸ್ತುತ ಕಾಲಕ್ಕೂ ಅನ್ವಯವಾಗುತ್ತವೆ. ಸಂಶೋಧನಾ ವಿದ್ಯಾರ್ಥಿ ತನ್ನ ಸ್ವಾರ್ಥ ಹಾಗೂ ಸಮಯ ಸಾಧನೆಗಾಗಿ ಮಾರ್ಗದರ್ಶನದೊಂದಿಗೆ ವರ್ತಿಸುವ ಬಗೆ, ಆ ಕಾಲಕ್ಕೆ ಮಾತ್ರ ಸೀಮಿತವಾದದ್ದಲ್ಲ. ಇಂದಿಗೂ ಅಂತಹ ಚಿತ್ರಣ ಕಣ್ಮುಂದೆ ನಿಲ್ಲುತ್ತದೆ’ ಎಂದರು.
ಬಸು ಬೇವಿನಗಿಡದ ಅವರು ಅನುವಾದದ ಅನುಭವಗಳನ್ನು ಹಂಚಿಕೊಂಡರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಜಿನದತ್ತ ಹಡಗಲಿ ಇದ್ದರು.
ಇದನ್ನೂ ನೋಡಿ : “ವಿಕಸಿತ ಭಾರತ ಯಾರಿಗೆ? ಬ್ಯಾಂಕಿಂಗ್–ವಿಮಾ ವಲಯದಲ್ಲಿ ಜನಸಾಮಾನ್ಯರ ಹಿತ ಕಣ್ಮರೆಯೇ?” Janashakthi Media
