ನಡೆದುಕೊಂಡು ಆಸ್ಪತ್ರೆಗೆ ಬಂದ ಕೆಲವೇ ನಿಮಿಷಗಳಲ್ಲಿ ವ್ಯಕ್ತಿಯ ಮೆದುಳು ನಿಷ್ಕ್ರಿಯ

Please follow and like us:
ದೇವನಹಳ್ಳಿ: ಜುಲೈ 2ರಂದು ಆಸ್ವತ್ರೆಗೆ ನಡೆದುಕೊಂಡು ಬಂದ ವ್ಯಕ್ತಿಯ ಮೆದುಳು ಕೆಲವೆ ನಿಮಿಷಗಳಲ್ಲಿ ನಿಷ್ಕ್ರಿಯವಾಗಿರುವಂತಹ ಅಚ್ಚರಿ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.

ಹೊಸಕೋಟೆಯ ನಿವಾಸಿ ಕೋನಪ್ಪ (52) ಬ್ರೈನ್ ಡೆಡ್ ಆದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇತ್ತ ಬ್ರೈನ್ ಡೆಡ್​​ ವಿಷಯ ತಿಳಿದ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ನಡೆದದ್ದೇನು?

ಬೆಳಗ್ಗೆಯಿಂದ ಕೂಡ ಲವಲವಿಕೆಯಿಂದಲ್ಲೇ ಇದ್ದ ಕೋನಪ್ಪ, ಏಕಾಏಕಿ ಎದೆ ನೋವು ಅಂತ ನಡೆದುಕೊಂಡು ಸಿಲಿಕಾನ್ ಸಿಟಿ ಆಸ್ಪತ್ರೆಗೆ ಬಂದಿದ್ದಾರೆ. ಈ‌ ವೇಳೆ ವೈದ್ಯರು ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಂತೆ ಕಾರ್ಡಿಯಾಕ್ ಅರೆಸ್ಟ್​​ನಿಂದ ಕುಸಿದು ಬಿದಿದ್ದಾರೆ. ತಕ್ಷಣ ಮತ್ತೊಂದು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲು ಮುಂದಾಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಮೆದುಳು ನಿಷ್ಕ್ರಿಯಗೊಂಡಿದೆ.

ಇದನ್ನೂ ಓದಿ: 900 ಅಡಿ ಎತ್ತರದಿಂದ ಬಿದ್ದ ಏರ್ ಇಂಡಿಯಾ ವಿಮಾನ; ಅಪಘಾತದಿಂದ ಪಾರು

ಇನ್ನು ಈ ಬಗ್ಗೆ ವೈದ್ಯರು ಹೇಳಿದೆನೆಂದರೆ ಇತ್ತೀಚೆಗೆ ಕಾರ್ಡಿಯಾಕ್ ಅರೆಸ್ಟ್​ನಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿವೆ ಎನ್ನುತಾರೆ. ಕೋನಪ್ಪ ಆಸ್ಪತ್ರೆಗೆ ನಡೆದುಕೊಂಡು ಬರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಟಿವಿ9 ಗೆ ಲಭ್ಯವಾಗಿದೆ. ಕೆಲವೇ ನಿಮಿಷಗಳಲ್ಲಿ ಆದ ಬ್ರೈನ್ ಡೆಡ್​​ನಿಂದ ಸದ್ಯ ಕೋನಪ್ಪ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಬ್ರೈನ್ ಡೆಡ್​​ ಎಂದರೇನು?

ಬ್ರೈನ್ ಡೆಡ್​ ಎಂದರೆ ಮೆದುಳು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದರ್ಥ. ಮೆದುಳಿನಲ್ಲಿ ಉಂಟಾದ ಗಂಭೀರ ಗಾಯ, ಆಮ್ಲಜನಕದ ಕೊರತೆ ಮತ್ತು ಅತಿಯಾದ ರಕ್ತದ ಹರಿವಿನಂತಹ ಪ್ರಮುಖ ಅಂಶಗಳು ಈ ಸ್ಥಿತಿಗೆ ಕಾರಣವಾಗುತ್ತದೆ.

ವ್ಯಕ್ತಿ ಮೆದುಳು ನಿಷ್ಕ್ರಿಯಗೊಂಡಾಗ ಮೆದುಳು ಹೊರತುಪಡಿಸಿ ಇಡೀ ದೇಹ ಕೆಲಸ ಮಾಡುತ್ತೆ. ಒಂದು ರೀತಿಯಲ್ಲಿ ಮನುಷ್ಯ ಬದುಕಿದ್ದು ಸತ್ತ ಸ್ಥಿತಿ. ರೋಗಿಯು ಉಸಿರಾಡದ ಕಾರಣ, ಕೃತಕ ಉಸಿರಾಟ ಅಂದರೆ ವೆಂಟಿಲೇಟರ್​​ನಲ್ಲಿ ಇರಿಸಲಾಗುತ್ತದೆ.

ಇದನ್ನೂ ನೋಡಿ: ಒತ್ತಡ ನಿವಾರಿಸಿ, ಹೃದಯದ ಆರೋಗ್ಯ ಹೆಚ್ಚಿಸಿ – ಡಾ ಭಾನು ಪ್ರಕಾಶ್‌ | Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *