ಶ್ರೀನಿವಾಸಪುರ : ಶಾಲೆಯನ್ನೇ ಮನೆಯಾಗಿಸಿಕೊಂಡ ಖಾಸಗಿ ವ್ಯಕ್ತಿ

ಶ್ರೀನಿವಾಸಪುರ: ಮಕ್ಕಳ ಕಲಿಕೆಯ ತಾಣವಾಗಬೇಕಿದ್ದ ಸರ್ಕಾರಿ ಶಾಲೆಯೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನೆಯಾಗಿ ಪರಿವರ್ತನೆ ಆಗಿರುವ ಘಟನೆ ಶ್ರೀನಿವಾಸಪುರದ ಗಾಂಧಿನಗರ ಗ್ರಾಮದಲ್ಲಿ ನಡೆದಿದೆ.

ಐದು ವರ್ಷಗಳಿಂದ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಗಾಂಧಿನಗರ ಸರ್ಕಾರಿ ಶಾಲೆ ಮುಚ್ಚಿದ್ದು, ಗೌನಿಪಲ್ಲಿ ಕುಮಾರ್ ಎಂಬುವರು ಕುಟುಂಬ ಸಮೇತ ಈ ಶಾಲೆಯಲ್ಲಿ ವಾಸ ಮಾಡುತ್ತಿರುವುದು ಗೊತ್ತಾಗಿದೆ. ಈ ಸಂಬಂಧ ಗ್ರಾಮಸ್ಥರು ಹಲವಾರು ಬಾರಿ ಶಾಲೆ ತೆರವು ಮಾಡುವಂತೆ ಹೇಳಿದರೂ ಖಾಲಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಮನೆ

‘ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆ ಬರೆದು ಕೊಟ್ಟಿದ್ದಾರೆ ಎಂಬುದಾಗಿ ಪತ್ರ ತೋರಿಸಿ ಗ್ರಾಮಸ್ಥರನ್ನು ಕುಮಾರ್ ಎಂಬಾತ ಬೆದರಿಸುತ್ತಾನೆ’ ಎಂದು ಗ್ರಾಮಸ್ಥರಾದ ವೆಂಕಟೇಶಮ್ಮ, ನಾಗಮ್ಮ, ಸರಸ್ವತಮ್ಮ ಶ್ರೀನಿವಾಸ್‌, ತಿಪ್ಪಣ್ಣ, ನಾರಾಯಣಸ್ವಾಮಿ, ವೆಂಕಟರಮಣ ಅವರು ದೂರಿದ್ದಾರೆ. ಮನೆ

‘ಶಾಸಕರ ಗಮನಕ್ಕೆ ತಂದಿದ್ದು, ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದ್ದಾರೆ. ಆದರೆ, ಶಿಕ್ಷಣಾಧಿಕಾರಿಯು ಸ್ಥಳಕ್ಕೆ ಭೇಟಿ ನೀಡಿ ನೋಟಿಸ್‌ ಕೂಡ ನೀಡಿಲ್ಲ. ಹೀಗಾಗಿ, ಆತ ಇನ್ನೂ ಶಾಲೆಯಿಂದ ಹೋಗಿಲ್ಲ. ಗ್ರಾಮದಿಂದ ಸುಮಾರು 20ಕ್ಕೂ ಅಧಿಕ ಮಕ್ಕಳು ಗೌನಿಪಲ್ಲಿ ಹಾಗೂ ಅವಗಾನಪಲ್ಲಿ ಶಾಲೆಗೆ ಪ್ರತಿದಿನ ಹೋಗುತ್ತಿದ್ದಾರೆ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ.

ಈ ವಿಚಾರ ಮಾಧ್ಯಮದಲ್ಲಿ ಪ್ರಸಾರಗೊಂಡ ನಂತರ, ಘಟನಾ ಸ್ಥಳಕ್ಕೆ ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.  ‘ಸರ್ಕಾರಿ ಶಾಲೆಯಲ್ಲಿ ಕುಟುಂಬ ಸಮೇತ ವಾಸ ಮಾಡುತ್ತಿರುವ ಕುಮಾರ್ ಎಂಬಾತನ ಕುಟುಂಬವನ್ನು ತಕ್ಷಣ ತೆರವುಗೊಳಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಮನೆ

ಇದನ್ನೂ ಓದಿ: ಸಾಗರದಲ್ಲಿ ‘ಶಾಲಾ ಮುಖ್ಯಸ್ಥ’ನಿಂದಲೇ ಲೈಂಗಿಕ ಕಿರುಕುಳ: ‘ವನಶ್ರೀ ಮಂಜಪ್ಪ’ ವಿರುದ್ಧ ಪೋಕ್ಸೋ ಕೇಸ್ ದಾಖಲು

ಕ್ಷೇತ್ರ ಶಿಕ್ಷಣಾಧಿಕಾರಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ಜಾಗ ಖಾಲಿ ಮಾಡಲು ಸೂಚಿಸಲಾಗಿದೆ ಈ ಸಂಬಂಧ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಪೊಲೀಸರ ಸಹಕಾರದೊಂದಿಗೆ ಗಾಂಧಿನಗರ ಗ್ರಾಮದ ಶಾಲೆಗೆ ಭೇಟಿ ನೀಡಿದ್ದು ಸರ್ಕಾರಿ ಶಾಲೆಯನ್ನು ವಾಸಕ್ಕೆ ಬಳಸಿಕೊಂಡುತ್ತಿರುವ ಕುಮಾರ್ ಎಂಬುವವರ ಮೇಲೆ ಕ್ರಮ ಜರುಗಿಸುತ್ತೇವೆ. ಹಾಗೂ ಜಾಗವನ್ನು ಖಾಲಿಮಾಡಿ, ಮಕ್ಕಳ ಕಲಿಕೆಗೆ ಅವಕಾಶ ನೀಡುವಂತೆ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಅನ್ನದಲ್ಲಿ ಹುಳು, ಕೊಳೆತ ತರಕಾರಿ ಇದನ್ನೆ ತಿನ್ರಿ ಅಂತಾರೆ ವಾರ್ಡ್‌ನ – ವಿದ್ಯಾರ್ಥಿಗಳ ಪ್ರತಿಭಟನೆJanashakthi Media

Donate Janashakthi Media

Leave a Reply

Your email address will not be published. Required fields are marked *