ತೆಲಂಗಾಣ: ಕಾಲೇಜು, ಹಾಸ್ಟೆಲ್ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಅಳವಡಿಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಹೈದರಾಬಾದ್ ನ ತೆಲಂಗಾಣದ ಮೇಡ್‌ಚಲ್‌ದಲ್ಲಿ ಇರುವ ಸಿಎಂಆರ್ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್‌ನ ಶೌಚಾಲಯಗಳಲ್ಲಿ ಗೌಪ್ಯವಾಗಿ ವಿಡಿಯೊ ಚಿತ್ರೀಕರಿಸಲಾಗುತ್ತಿದೆ, ಅದನ್ನು ತಡೆಯಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯರು ಗುರುವಾರ ಪ್ರತಿಭಟನೆ ನಡೆಸಿದರು. ಹೈದರಾಬಾದ್
ಹಾಸ್ಟಲ್ ಬಾತ್‌ರೂಮ್‌ನಲ್ಲಿ ಅಡುಗೆ ಸಿಬ್ಬಂದಿಯ ಹಿಡನ್ ಕ್ಯಾಮರಾ ಇಟ್ಟಿರಬಹುದೆಂದು ಹಲವರು ಆರೋಪಿಸಿದ್ದಾರೆ. ತೀವ್ರ ಮಟ್ಟದ ಪ್ರತಿಭಟನೆ ನಡೆದಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ಮೇಡ್ಚಿಲ್ ಮೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಜೊತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದ್ದಾರೆ.
31ರಂದು ಹೊಸ ವರ್ಷದ ಸಂಭ್ರಮದ ಅಂಗವಾಗಿ ಹಾಸ್ಟೆಲ್‌ನಲ್ಲಿ ಡಿಜೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ನಂತರ, ಎಲ್ಲಾ ಹುಡುಗಿಯರು ಹಾಸ್ಟೆಲ್‌ಗೆ ಹೋದಾಗ, ಅಲ್ಲಿ ಕ್ಯಾಮೆರಾ ಇರುವುದನ್ನು ಅವರು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಬಾತ್ ರೂಂನ ವೆಂಟಿಲೇಟರ್‌ನಲ್ಲಿ ಕೈಗಳ ಗುರುತು, ಕನ್ನಡಿಯ ಮೇಲೆ ಹೊರಗಿನಿಂದ ಕ್ಯಾಮೆರಾ ಇಟ್ಟಿರುವ ಗುರುತುಗಳು ಪತ್ತೆಯಾಗಿವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ಜೊತೆಗೆ ಕಳೆದ ಮೂರು ತಿಂಗಳಿನಿಂದ ಸುಮಾರು 300 ರೆಕಾರ್ಡಿಂಗ್‌ಗಳನ್ನು ಸೆರೆ ಹಿಡಿಯಲಾಗಿದೆ, ಇದೆಲ್ಲಾ ಅಡುಗೆ ಸಿಬ್ಬಂದಿಯೇ ಮಾಡಿರಬೇಕು ಎಂಬ ಸಂಶಯವಿದೆ ಎಂದು ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ.
ಸದ್ಯ ವಿದ್ಯಾರ್ಥಿನಿಯರ ದೂರು ಸ್ವೀಕರಿಸಿದ ಪೊಲೀಸರು ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರಿಂದ 12 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಳೆಯೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇದನ್ನೂ ನೋಡಿ: ಸೈಬರ್ ಕಳ್ಳರ ಬಗ್ಗೆ ಎಚ್ಚರವಿರಲಿ Janashakthi Media #Cybercrime #Cyberfraud #CyberPolice