ಭೋಪಾಲ್: ಎಲ್‌ಪಿಜಿ (LPG) ಸಾಗಿಸುತ್ತಿದ್ದ ರೈಲಿನ (Goods Train) 2 ಬೋಗಿಗಳು ಹಳಿ ತಪ್ಪಿರುವ ಘಟನೆ ಮಂಗಳವಾರ ತಡರಾತ್ರಿ ಮಧ್ಯಪ್ರದೇಶದ ಜಬಲ್ ಪುರದ ಶಹಪುರದ ಭಿತೋನಿಯಲ್ಲಿ ನಡೆದಿದೆ. ಆದರೆ, ಇದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇನ್ ಲೈನ್ ನಲ್ಲಿ ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಬುಧವಾರ ಬೆಳಿಗ್ಗೆ ಹಳಿ ದುರಸ್ತಿ ಕಾರ್ಯ ನಡೆದಿದೆ” ಎಂದು ರೈಲು ಅಧಿಕಾರಿಗಳು ಮಾಹಿತಿ ನೀಡಿದರು.
ಕೆಲ ದಿನಗಳ ಹಿಂದೆ ಒಡಿಶಾದಲ್ಲಿ ರೈಲು ದುರಂತ ಸಂಭವಿಸಿತು. ಒಡಿಶಾದಲ್ಲೇ ಮತ್ತೊಂದು ರೈಲು ಹಳಿ ತಪ್ಪಿತು. ಈಗ ಮಧ್ಯಪ್ರದೇಶದಲ್ಲೂ ಗೂಡ್ಸ್ ರೈಲೊಂದು ಹಳಿ ತಪ್ಪಿರುವ ಘಟನೆ ನಡೆದಿದೆ. ಒಡಿಶಾದ ಬಾಲಾಸೋರ್ ಜಿಲ್ಲೆ ಬಹನಗ ರೈಲು ನಿಲ್ದಾಣದ ಬಳಿ ಜೂನ್ 2 ರಂದು ಸಂಭವಿಸಿದ ತ್ರಿವಳಿ ರೈಲು ದುರಂತದಲ್ಲಿ 275ಕ್ಕೂ ಅಧಿಕ ಮಂದಿ ಮೃತಪಟ್ಟು, 1000ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು, ಈ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಮತ್ತೊಂದು ರೈಲು (ಗೂಡ್ಸ್ ರೈಲು) ಹಳಿ ತಪ್ಪಿದೆ. ಅದರಲ್ಲೂ ಎಲ್‌ಪಿಜಿ ಸಾಗಿಸುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ.
ಇದನ್ನೂ ಓದಿ:ಒಡಿಶಾದಲ್ಲಾದ ಭೀಕರ ರೈಲು ದುರಂತಕ್ಕೆ ಕಾರಣವೇನು ಗೊತ್ತಾ ? ಇಲ್ಲಿದೆ ಪ್ರಾಥಮಿಕ ವರದಿ ಮಾಹಿತಿ
ಜಬಲ್ಪುರ ಜಿಲ್ಲೆ ಶಾಹಪುರ ಭಿತೋನಿಯಲ್ಲಿ ಎಲ್‌ಪಿಜಿಯನ್ನು ಅನ್‌ಲೋಡ್ ಮಾಡಲು ರೈಲನ್ನು ಸರಿಯಾದ ಜಾಗದಲ್ಲಿ ನಿಲ್ಲಿಸುವಾಗ ಹಳಿ ತಪ್ಪಿದೆ. ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಅವಘಡ ಸಂಭವಿಸಿದ್ದು. ಕೂಡಲೇ ಅಲ್ಲಿನ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ, ಹಳಿ ತಪ್ಪಿದ ರೈಲಿನ ಎರಡು ಬೋಗಿಗಳನ್ನು ಕೂಡಲೇ ಮತ್ತೆ ಹಳಿಗೆ ತರಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ಶಾಹಪುರ ಭಿತೋನಿಯಲ್ಲಿ ಮಂಗಳವಾರ ತಡರಾತ್ರಿ ಎಲ್ ಪಿಜಿ ಸಾಗಿಸುತ್ತಿದ್ದ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಆದರೆ, ಇದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇನ್ ಲೈನ್ ನಲ್ಲಿ ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ.
ಕೆಲ ದಿನಗಳ ಹಿಂದಷ್ಟೇ ಬಿಹಾರದಲ್ಲೂ ಗೂಡ್ಸ್ ರೈಲು ಹಳಿ ತಪ್ಪಿತ್ತು. ಒಡಿಶಾದ ಬಾರ್‌ಗಢ ಜಿಲ್ಲೆಯಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿತ್ತು. ರೈಲಿನ ಹಲವು ಬೋಗಿಗಳು ಹಳಿ ತಪ್ಪಿದ್ದು, ಯಾವುದೇ ಸಾವು-ನೋವು ಸಂಭವಿಸಿರುವುದಿಲ್ಲ. ಗೂಡ್ಸ್ ರೈಲಾದ ಕಾರಣ ಹಾಗೂ ಭೀಕರ ಅಪಘಾತವಲ್ಲದ ಕಾರಣ ಸಾವು ಸಂಭವಿಸಿಲ್ಲ ಎಂದು ಮಾಹಿತಿ ತಿಳಿದುಬಂದಿದೆ. ರೈಲಿನ ಐದು ಬೋಗಿಗಳು ಹಳಿ ತಪ್ಪಿದ್ದವು. ಒಡಿಶಾ ರೈಲು ದುರಂತವೇ ದೇಶಾದ್ಯಂತ ಸುದ್ದಿಯಾಗಿತ್ತು. ನೂರಾರು ಜನ ಮೃತರಾದ ಕಾರಣ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜಿನಾಮೆ ನೀಡಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿಬಂದಿದ್ದವು. ಮೋದಿ ಅವರ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರೈಲು ಅಪಘಾತ ಸಂಭವಿಸಿದ 24 ಗಂಟೆಗಳಲ್ಲೇ ಹಳಿ ದುರಸ್ತಿ ಕಾರ್ಯ ಮುಗಿದಿದೆ, ಈಗಾಗಲೇ ಎಂದಿನಂತೆ ರೈಲು ಸಂಚಾರ ಸಾಮಾನ್ಯವಾಗಿದೆ. ಆದರೆ, ಹೀಗೆ ಸಾಲು ಸಾಲು ರೈಲುಗಳು ಹಳಿ ತಪ್ಪುತ್ತಿರುವುದು ಜನರಲ್ಲಿ ಆತಂಕ ಹೆಚ್ಚಾಗಿದೆ.