ಬೆಂಗಳೂರು: ಕಳೆದ ತಿಂಗಳ 31 ನೇ ತಾರೀಖಿನಂದು ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾರದ್ದೊ ಜಗಳಕ್ಕೆ ಇನ್ಯಾರೋ ಕೊಲೆಯಾಗಿದ್ದ. ಯಾರನ್ನೋ ಗುರಿಯಾಗಿಸಿ ಅಮಾಯಕನ ಹತ್ಯೆ ಮಾಡಿದ್ದ ಕೇಸ್ನಲ್ಲಿ ರೌಡಿ ಶೀಟರ್ ಸೇರಿ 6 ಜನರ ಬಂಧನವಾಗಿದೆ.
ರೌಡಿ ಶೀಟರ್ ಶಿವಪ್ರಸಾದ್, ಭರತ್, ಪ್ರಜ್ವಲ್, ಅಭಿಷೇಕ್, ಗಣೇಶ್, ಜಯಂತ್ ಗೌಡ ರನ್ನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ :-ವಿ.ವಿ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ – ಲಿಂಗಯ್ಯ ಬಿ. ಹಿರೇಮಠ
ಹನುಮಂತನಗರ ಠಾಣೆ ರೌಡಿಶೀಟರ್ ಆಗಿರುವ ಶಿವಪ್ರಸಾದ್ ಶುಕ್ರವಾರ ಮಧ್ಯರಾತ್ರಿ ಕಾಂತ ಎಂಬಾತನೊಂದಿಗೆ ಕಿರಿಕ್ ಮಾಡಿಕೊಂಡಿದ್ದ. ಟೀ ಅಂಗಡಿಯ ಮುಂದೆ ನಡೆದ ಗಲಾಟೆಯಲ್ಲಿ ಶಿವಪ್ರಕಾಶ್ಗೆ ಕಾಂತ ಹೊಡೆದಿದ್ದ. ಇದೇ ಕೋಪಕ್ಕೆ ಸೋಮವಾರ ರಾತ್ರಿ ಕಾಂತನನ್ನ ಹುಡುಕಿಕೊಂಡು ಶಿವಪ್ರಸಾದ್ ತನ್ನ ಸಹಚರರ ಜೊತೆ ಹುಡುಕಿಕೊಂಡು ಬಂದಿದ್ದ. ಈ ವೇಳೆ ಆಟೋದಲ್ಲಿ ಮಲಗಿದ್ದ ನಿಖಿಲ್ ನನ್ನ ಕಾಂತ ಅಂತಾ ತಿಳಿದು ಮಚ್ಚು ಲಾಂಗ್ ನಿಂದ ಆರು ಜನ ಆರೋಪಿಗಳು ಹಲ್ಲೆ ನಡೆಸಿದರು.
ಇದನ್ನು ಓದಿ :-ಬಿಸಿಲಿನ ತಾಪ ಹೆಚ್ಚಳ – ಸರಕಾರಿ ಕಚೇರಿ ಸಮಯದಲ್ಲಿ ಬದಲಾವಣೆ
ಆದ್ರೆ ನಿಖಿಲ್ ಮುಖ ನೋಡಿದಾಗ ಈತ ಕಾಂತ ಅಲ್ಲ ಅಂತ ಗೊತ್ತಾಗಿದೆ. ತಕ್ಷಣ ಆರೋಪಿಗಳೆ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ, ಆದರೆ ತೀವ್ರ ರಕ್ತಸ್ತ್ರಾವವಾಗಿ ನಿಖಿಲ್ ಪ್ರಾಣಬಿಟ್ಟಿದ್ದ. ನಿಖಿಲ್ ಸತ್ತಿರೋದನ್ನ ನೋಡಿ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬನಶಂಕರಿ ಪೊಲೀಸರು ಸದ್ಯ ಆರೋಪಿಗಳನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.