ಕಾರವಾರ: ನಿನ್ನೆ ಕಾರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ, ಅಕ್ರಮ ಮರಳು ಸಾಗಾಟ ಮಾಡುವವರಿಗೆ ದಂಡ ಹಾಕಿದ ಅಧಿಕಾರಿಗೆ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಕ್ಲಾಸ್ ತೆಗದುಕೊಂಡ ಕಾರಣ ಶಾಸಕರ ಮಾತಿಗೆ ತುಂಬಿದ ಸಭೆಯಲ್ಲಿ ಮಹಿಳಾ ಅಧಿಕಾರಿ ಡಿಡಿ ಆಶಾ ಖಡಕ್ ತಿರುಗೇಟು ಕೊಟ್ಟಿರುವಂತಹ ಘಟನೆ ಕೆಡಿಪಿ ಸಭೆಯಲ್ಲಿ ನಡೆದಿದೆ.
ಶಾಸಕ ಮತ್ತು ಮಹಿಳಾ ಅಧಿಕಾರಿ ಮಧ್ಯೆ ಮಾತಿನ ಚಕಮಕಿ
ಅಕ್ರಮ ಮರಳು ಸಾಗಾಟ ಮಾಡಿದವರಿಗೆ ದಂಡ ವಿಧಿಸಿ ಹಿನ್ನಲೆ ಶಾಸಕ ಭೀಮಣ್ಣ ನಾಯ್ಕ್ ಮತ್ತು ಕಾರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಆಶಾ ನಡುವೆ ಮಾತಿನ ಚಕಮಕಿ ನಡೆದಿದೆ. ನಿಯಮದ ಪ್ರಕಾರ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ: ಕಬ್ಬಿಣ, ಸಿಮೆಂಟ್ ಮತ್ತು ಇಟ್ಟಿಗೆಗಳ ಬೆಲೆಗಳ ಏರಿಕೆ; ಟನ್ಗೆ ರೀಬಾರ್ ಬೆಲೆ 1,500 ರಿಂದ 2,000 ರೂ. ಹೆಚ್ಚಳ
ಇದಕ್ಕೆ ಉತ್ತರಿಸಿದ ಡಿಡಿ ಆಶಾ, ಜಿಲ್ಲೆಯ ಮರಳುಗಾರಿಕೆ ಪ್ರಕರಣ ಸದ್ಯಕ್ಕೆ ಕೋರ್ಟ್ನಲ್ಲಿದೆ. ಇನ್ನೂ ಮಾರ್ನಾಲ್ಕು ತಿಂಗಳಲ್ಲಿ ಕೋರ್ಟ್ ಆದೇಶ ಬರಬಹುದು. ಜಿಲ್ಲೆಯಲ್ಲಿ ಮರಳುಗಾರಿಕೆ ಸದ್ಯಕ್ಕೆ ನಿಷೇಧ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಧಿಕಾರಿ ಆಶಾ ಮಾತಿಗೆ ಭಿಮಣ್ಣಾ ನಾಯ್ಕ್ಗೆ ಕೋಪ
ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮರಳು ಸಾಗಾಟ ಕಂಡು ಬಂದರೆ ದಂಡ ವಿಧಿಸುವುದು ನಿಯಮ. ನಿಯಮದ ಪ್ರಕಾರ ದಂಡ ತೆಗೆದುಕೊಳ್ಳುವಂತೆ ನಮ್ಮ ಸಿಬ್ಬಂದಿಗೆ ಸೂಚಿಸಿದ್ದೇನೆ. ನಾನು ಒಬ್ಬಳೇ ಮಾಡುತ್ತಿಲ್ಲ. ಪೊಲೀಸ್ ಇಲಾಖೆ ಕೂಡ ಮಾಡುತ್ತಿದ್ದಾರೆ. ಅವರಿಗೂ ಬೇಕಾದರೆ ಕರೆದು ಕೇಳಿ ನಾನು ನಿಯಮದ ಪ್ರಕಾರ ಕೆಲಸ ಮಾಡುತ್ತಿದ್ದೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಅಧಿಕಾರಿ ಆಶಾ ಮಾತಿಗೆ ಕೋಪಗೊಂಡ ಶಾಸಕ ಭೀಮಣ್ಣ ನಾಯ್ಕ್, ಆಯ್ತು ನಿಯಮದ ಪ್ರಕಾರ ಎಷ್ಟು ದಿನ ಜಿಲ್ಲೆಯಲ್ಲಿ ಕೆಲಸ ಮಾಡುತ್ತೀರಾ ನೊಡುತ್ತೇನೆ ಎಂದಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಮಂಕಾಳು ವೈದ್ಯ ಆ ಮೇಲೆ ಕೂತು ಮಾತನಾಡೋಣ ಸದ್ಯಕ್ಕೆ ಇಲ್ಲಿಗೆ ನಿಲ್ಲಿಸಿ ಎಂದಿದ್ದಾರೆ.
ಇದನ್ನೂ ನೋಡಿ: ಸೌಹಾರ್ದ ಕರ್ನಾಟಕ | ಶ್ರೇಣಿಕೃತ ಸಮಾಜದ ಆಯಾಮಗಳು – ಜಿ.ಎನ್. ನಾಗರಾಜJanashakthi Media