ನವದೆಹಲಿ : ಅಲ್ಲಿ ಭದ್ರತಾಪಡೆಯ ಪೊಲೀಸರು ಮಾವೋವಾದಿಗಳ ಮೇಲೆ ಗುಂಡು ಹಾರಿಸಿ ಎನ್‌ಕೌಂಟರ್ ಮಾಡಿದ್ದರು. ಆದರೆ, ಅದು ನಿಜವಾದ ಎನ್‌ಕೌಂಟರ್ ಆಗಿರಲಿಲ್ಲ. ಮಾವೋವಾದಿಗಳ ಹೆಸರಿನಲ್ಲಿ ಪೊಲೀಸರು ಮಾಡಿದ್ದು ನಕಲಿ ಎನ್‌ಕೌಂಟರ್. ಬಲಿಯಾಗಿದ್ದು ಸೊಪ್ಪು ಕೀಳಲು ಹೋಗಿದ್ದ ಗ್ರಾಮಸ್ಥರು.
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳಿಂದ 12 ಮಾವೋವಾದಿಗಳನ್ನು ಹತ್ಯೆಗೈದ ಎರಡು ದಿನಗಳ ಬಳಿಕ ಮೇ 12 ರ ಭಾನುವಾರದಂದು ಪೊಲೀಸರು ತಪ್ಪಾಗಿ ಭಾವಿಸಿದ್ದರ ಪರಿಣಾಮ ಒಂದಿಷ್ಟು ಜನರನ್ನು ನಕ್ಸಲೀಯರೆಂದು ಕೊಲ್ಲಲ್ಪಟ್ಟಿದೆ.ಆದರೆ, ಹೀಗೆ ಪೊಲೀಸರ ಗುಂಡೇಟಿಗೆ ನಕ್ಸಲೀಯರ ಹೆಸರಿಗೆ ಬಲಿಯಾದವರು ಗ್ರಾಮಸ್ಥರು ಮತ್ತು ಸಾಮಾಜಿಕ ಕಾರ್ಯಕರ್ತರು.
ಹೀಗೆ ಅನ್ಯಾಯವಾಗಿ ಪೊಲೀಸರಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ಛತ್ತೀಸಗಢದ ಬಿಜಾಪುರ ಜಿಲ್ಲಾಧಿಕಾರಿ ಕಚೇರಿ ಹೊರಗೆ ಜಮಾಯಿಸಿ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿ ಅಳಲನ್ನು ವ್ಯಕ್ತಪಡಿಸಿದರು. ತಮ್ಮ ಕುಟುಂಬವನ್ನು ʼನಕಲಿ ಎನ್‌ಕೌಂಟರ್ʼ ಹೆಸರಿನಲ್ಲಿ ಕೊಂದಿದ್ದಾರೆ ಎಂದು ಕೂಗಿದರು. ಆದರೆ, ಈ ಆರೋಪಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ಮಾವೋವಾದಿಗಳು ಮಾತ್ರ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪ್ಟಿದ್ದಾರೆ. ಅವರು ಕಾಡಿನಲ್ಲಿ ಪೊಲೀಸರನ್ನು ನೋಡಿದ ನಂತರ ಸ್ಥಳೀಯ ಜನರಂತೆ ಧರಿಸಿದ್ದರು ಎಂದು ಪೊಲೀಸರು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟನೆ ನೀಡಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನು ಓದಿ : ಪ್ರಧಾನಿ ಮೋದಿ – ರಾಹುಲ್ ಬಹಿರಂಗ ಚರ್ಚೆ : ಆಹ್ವಾನ ಒಪ್ಪಿಕೊಂಡ ಕಾಂಗ್ರೆಸ್
ಗ್ರಾಮಸ್ಥರ ಆರೋಪ ಏನು?:-
ಭದ್ರತಾ ಪಡೆಗಳು ತಮ್ಮಪ್ರದೇಶದ ನಿವಾಸಿಗಳನ್ನು ಕೊಂದಿದ್ದು, ಎನ್‌ಕೌಂಟರ್ ನಕಲಿ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಎನ್‌ಕೌಂಟರ್‌ಗೆ ಸಾಕ್ಷಿಯಾದ ಪೇಡಿಯಾ ಗ್ರಾಮದ ನಿವಾಸಿ ಗುರುನಂದ, ಕೆಲವು ಗ್ರಾಮಸ್ಥರು ಕಾಡಿನಿಂದ ಟೆಂಡು ಎಲೆಗಳನ್ನು ಕೀಳಲು ಹೋಗಿದ್ದರು. ನಂತರ ಭದ್ರತಾ ಪಡೆಗಳು ಅವರ ಕಡೆಗೆ ತೆರಳಿದರು ಎಂದಿದ್ದಾರೆ, ಭದ್ರತಾಪಡೆಗಳನ್ನು ಕಂಡ ಗ್ರಾಮಸ್ಥರು ಓಡಲಾರಂಭಿಸಿದರು. ಗ್ರಾಮಸ್ಥರು ಹೆದರಿ ಓಡುತ್ತಿದ್ದಾಗ ಭದ್ರತಾ ಪಡೆಯ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಗುರುನಂದ ಆರೋಪಿಸಿದ್ದಾರೆ.
ಕೊರ್ಚುಲಿ ಗ್ರಾಮದ ಮತ್ತೋರ್ವ ಗ್ರಾಮಸ್ಥ ರಾಜು ಮಾತನಾಡಿ, ಸಂಬಂಧಿಕರ ಶವ ಪಡೆಯಲು ಬಂದಿದ್ದೇವೆ. ರಾಜು, ‘ಹತ್ಯೆಯಾದ ಲಾಲು ಕುಂಜಂ ಮಾವೋವಾದಿ ಅಲ್ಲ,ಆತ ರೈತ. ಪೊಲೀಸರನ್ನು ನೋಡಿ ಓಡಿ ಹೋಗುತ್ತಿದ್ದ ಆತನ ಮೇಲೆ ಗುಂಡು ಹಾರಿಸಿದ್ದಾರೆ.
ಟೆಂಡು ಎಲೆಗಳನ್ನು ಕೀಳಲು ಕಾಡಿಗೆ ಹೋಗಿದ್ದ ತನ್ನ ಸಹೋದರ ಮೋಟೋ ಆಳ್ವಂ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೀಡಿಯಾ ಗ್ರಾಮದ ರಾಕೇಶ್ ಆಳ್ವಂ ದೂರಿದ್ದಾರೆ.
ಬಿಜಾಪುರ ಪೊಲೀಸರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ರಾಕೇಶ್ ಆಳ್ವಂ, ಮೃತರನ್ನು ಗುರುತಿಸಿ ಎಲ್ಲರೂ ಇಟಾವರ್ ಮತ್ತು ಪೇಡಿಯಾ ಗ್ರಾಮದ ನಿವಾಸಿಗಳು ಎಂದಿದ್ದಾರೆ.
ಈ ಬಗ್ಗೆ ಪೊಲೀಸರು ಏನೆನ್ನುತ್ತಾರೆ?:-
ಮೇ 10 ರ ಶುಕ್ರವಾರ ಮಾವೋವಾದಿ ಸಂಘಟನೆಯ ಆರ್ಮಿ ಕಂಪೆನಿ ಸಂಖ್ಯೆ 2ರ ಸದಸ್ಯರಾದ ಬುಧು ಓಯಂ ಮತ್ತು ಕಲ್ಲು ಪುಣೆಂ ಸೇರಿದಂತೆ 12 ಮಾವೋವಾದಿಗಳನ್ನು ಕೊಂದಿರುವುದಾಗಿ ಭದ್ರತಾ ಪಡೆಗಳು ಹೇಳಿಕೊಂಡಿವೆ. ಬುಧು ಓಯಂ ಮತ್ತು ಕಲ್ಲುಂ ಪುಣೆಂ ಮೇಲೆ ತಲಾ 8 ಲಕ್ಷ ರೂಪಾಯಿ ಘೋಷಣೆಯಾಗಿತ್ತು.
ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಇತರರಲ್ಲಿ ಮಾವೋವಾದಿಗಳ ಗಂಗಾಳೂರು ಪ್ರದೇಶ ಸಮಿತಿಯ ಸದಸ್ಯ ಲಾಖೆ ಕುಂಜಮ್ ಮತ್ತು ಆರ್ಮಿ ಪ್ಲಟೂನ್ ನಂ. 12 ರ ಸದಸ್ಯ ಭೀಮಾ ಕರಮ್ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರ ತಲೆಯ ಮೇಲೂ 5 ಲಕ್ಷ ರೂಪಾಯಿ ಬಹುಮಾನ ಇತ್ತು ಎಂದು ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ಹೇಳಿದ್ದಾರೆ.
ಪ್ಲಟೂನ್ ಕಮಾಂಡರ್ ಸನ್ನು ಲಕೋಮ್ ಮತ್ತು ಜನತಾ ಸರ್ಕಾರ್ ಉಪಾಧ್ಯಕ್ಷ ಅವಲಂ. ಸಾಮಾಜಿಕ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ.
ಇದೇ ವೇಳೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾಮಾಜಿಕ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಬಸ್ತಾರ್ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಬುಡಕಟ್ಟು ಕಾರ್ಯಕರ್ತೆ ಸೋನಿ ಸೋರಿ ಪ್ರಕಾರ, ‘ಪೊಲೀಸರು ಅಮಾಯಕ ಗ್ರಾಮಸ್ಥರನ್ನು ಕೊಂದಿದ್ದಾರೆ. ಎನ್‌ಕೌಂಟರ್ ಸಂಪೂರ್ಣ ನಕಲಿ.
ಸತ್ತವರಲ್ಲಿ ಕಾಡಿನಲ್ಲಿ ಟೆಂಡು ಎಲೆಗಳನ್ನು ಕೀಳುತ್ತಿದ್ದ ಗ್ರಾಮಸ್ಥರೂ ಸೇರಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಓಡಲು ಆರಂಭಿಸಿದ ಸೈನಿಕರು ಗುಂಡು ಹಾರಿಸಿದರು. ನಾನು ಸತ್ತವರ ಕೆಲವು ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೇನೆ, ಕೆಲವು ಗ್ರಾಮಸ್ಥರನ್ನು ಅವರ ಮನೆಗಳಿಂದ ಕರೆದೊಯ್ದು ಕಾಡಿನಲ್ಲಿ ಕೊಲ್ಲಲಾಗಿದೆ ಎಂದರು.
‘ಪೊಲೀಸರು ಅಮಾಯಕ ಗ್ರಾಮಸ್ಥರನ್ನು ಕೊಂದಿರುವುದರಿಂದ ನಾವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ’ ಎಂದು ಸೋರಿ ಹೇಳಿದರು. ಮತ್ತೊಂದೆಡೆ, ಹತ್ಯೆಯಾದವರು ಮಾವೋವಾದಿಗಳು ಎಂಬ ತಮ್ಮ ನಿಲುವುನ್ನು ಪೊಲೀಸರು ದೃಢಪಡಿಸಿದ್ದಾರೆ.
ದಕ್ಷಿಣ ಬಸ್ತಾರ್ ಪ್ರದೇಶದ ಪೊಲೀಸ್ ಉಪ ಮಹಾನಿರೀಕ್ಷಕ ಕಮ್ಲೋಚನ್ ಕಶ್ಯಪ್, ‘ ತಮ್ಮ ಬಟ್ಟೆಗಳನ್ನು ಬದಲಾಯಿಸಿಕೊಂಡು ಗ್ರಾಮಸ್ಥರೊಂದಿಗೆ ಬೆರೆಯುತ್ತಿದ್ದರು. ಸತ್ತವರೆಲ್ಲರೂ ಮಾವೋವಾದಿಗಳು, ಗ್ರಾಮಸ್ಥರಲ್ಲ. ಗ್ರಾಮಸ್ಥರು ತಮ್ಮ ಮಾವೋವಾದಿಗಳ ಮೃತದೇಹಗಳನ್ನು ಸಂಗ್ರಹಿಸಲು ಬಂದಿದ್ದರು ಎಂದಿದ್ದಾರೆ.
ಇದನ್ನು ನೋಡಿ : ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ ಎಂದ ಬಿಜೆಪಿ, ಇದು ಬಿಜೆಪಿ – ಜೆಡಿಎಸ್ ಷಡ್ಯಂತ್ರ ಎಂದ ಡಿಕೆಶಿ