ಒಂದು ದೊಡ್ಡ ನೋಟಿನ ಸಣ್ಣಕತೆ

ಪ್ರೊ. ಆರ್. ರಾಂಕುಮಾರ್

ಅನು: ಶೃಂಶನಾ, ಮೈಸೂರು

ನೋಟು ರದ್ಧತಿಯ ದುರಂತಹಾಸ್ಯದ ಗಾಥೆಯಲ್ಲಿ ಒಂದು ಕೊಳಕು ಅಧ್ಯಾಯ ಮುಕ್ತಾಯಕಂಡಿದೆ.ಆದರೆ ಅದು ಆಗ ಮತ್ತು ಈಗ ಉಂಟು ಮಾಡಿರುವ ಸಮಸ್ಯೆಗಳ ಕತೆ ಇನ್ನೂ ಮುಗಿದಿಲ್ಲ. ಸಪ್ಟಂಬರ್ 2023ರ ನಂತರ 2000ರೂ. ನೋಟುಗಳ ಸ್ಥಾನಮಾನವೇನು? ಅದು ಇರುವುದಿಲ್ಲವಾದರೆ ಮತ್ತು 500ರೂ. ನೋಟೇ ಗರಿಷ್ಟ ಮುಖ ಬೆಲೆಯ ನೋಟಾಗಿ ಬಿಟ್ಟರೆ ಕರೆನ್ಸಿ ನಿರ್ವಹಣೆಗೆ ಉಂಟಾಗುವ ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ? ಕಪ್ಪುಹಣವನ್ನುಕೊನೆಗೊಳಿಸಲು ನೋಟು ರದ್ಧತಿ ಮಾರ್ಗವಲ್ಲಎಂದು ತಿಳಿದು ಬಂದಿರುವಾಗ 1000ರೂ. ನೋಟು ಮತ್ತೆ ಬರುತ್ತದೆಯೇ? ಅಥವ 5000ರೂ.10000ರೂ. ನೋಟು ಬರಬಹುದೇಅಥವ ಪರ್ಯಾಯವಾಗಿ ಡಿಜಿಟಲ್ ರೂಪಾಯಿ ಬರುತ್ತದೆಯೇ? ಪಿಕ್ಚರ್‌ ಅಭಿ ಬಾಕಿ ಹೈ ಎಂದೇ ಬಹುಶಃ ಇನ್ನೂ ಬಹಳಷ್ಟು ಸಮಯ ಹೇಳುತ್ತಿರಬೇಕಾಗುತ್ತದೆ.

ರೂ.2,000 ಮುಖ ಬೆಲೆಯ ನೋಟನ್ನು ಚಲಾವಣೆಯಿಂದ ಹಿಂಪಡೆಯಲಾಗುತ್ತಿದೆ ಎಂಬ ಮೇ 19,2023ರ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ)ನ ಪ್ರಕಟಣೆಯೊಂದಿಗೆ ನೋಟು ರದ್ಧತಿಯ ದುರಂತ-ಹಾಸ್ಯದ ಗಾಥೆಯಲ್ಲಿಒಂದು ಕೊಳಕು ಅಧ್ಯಾಯ ಮುಕ್ತಾಯಕಂಡಿದೆ.ಚಲಾವಣೆಯಲ್ಲಿ 2,000ರೂ ನೋಟಿನ ಉಪಸ್ಥಿತಿ ಯಾವಾಗಲೂ ಸರದಿ ಸಾಲಿನಲ್ಲಿ ನಿಂತಿರುವ ದೇಶದ ದಿಗಿಲನ್ನು ನೆನಪಿಸುತ್ತಿರುತ್ತಿತ್ತು.ಈ ನೋಟು ಒಂದು ಅಪಹಾಸ್ಯದ ವಸ್ತುವೂ ಆಗಿತ್ತು.ನಿರ್ದಿಷ್ಟವಾಗಿ ಇದರಲ್ಲಿ ಒಂದು ನ್ಯಾನೊ ಚಿಪ್ ಅನ್ನು ಅಳವಡಿಸಲಾಗಿದೆ ಎಂದು ಅದನ್ನು ಚಲಾವಣೆಗೆ ತರುವಾಗ ಮಾಡಿದ ವಿಲಕ್ಷಣದಾವೆಯಿಂದಾಗಿ ತಬ್ಬಿಬ್ಬಾಗಿದ್ದ ಸರ್ಕಾರಕ್ಕೆ 2,000ರೂಪಾಯಿ ನೋಟಿನ ಅಧ್ಯಾಯವನ್ನು  ಮುಚ್ಚಬೇಕಿತ್ತು.ಈ ನೋಟಿನ ತಾಜಾಮುದ್ರಣವನ್ನು 2018-19ರ ನಂತರ ನಿಲ್ಲಿಸಿದ್ದರಿಂದ ಅಂತಿಮವಾಗಿ ಅದರ ವಾಪಸಾತಿ ನಿರೀಕ್ಷಿತವಾಗಿತ್ತು.

‘ಮಾಸ್ಟರ್ಸ್ಟೊಕ್’ನಿಂದಾಗಿ ಕ್ಯೂನಲ್ಲಿ ನಿಂತು ಮಡಿದರು” (ವ್ಯಂಗ್ಯಚಿತ್ರ: ಸಜಿತ್ಕುಮಾರ್, ಡೆಕ್ಕನ್ಹೆರಾಲ್ಡ್)

ಹಲವು ದೋಷಗಳು

2000 ರೂಪಾಯಿ ನೋಟು ಪರಿಕಲ್ಪನೆಯಲ್ಲಿ ತರ್ಕಹೀನವಾಗಿದ್ದ, ಮತ್ತು ಜಾರಿಯಲ್ಲಿ ಅದಕ್ಷವಾಗಿದ್ದ 2016ರ ನೋಟುರದ್ಧತಿಯ ಕೇಂದ್ರಬಿಂದುವಾಗಿ ಹೊಮ್ಮಿತ್ತು. ಅದನ್ನು ದೊಡ್ಡ ಸಂಖ್ಯೆಯಲ್ಲಿ ಮುದ್ರಿಸಬೇಕಿತ್ತು. ಏಕೆಂದರೆ ಹಿಂಪಡೆದ ನೋಟುಗಳನ್ನು ತುಂಬಿಕೊಡುವಷ್ಟು ನೋಟುಗಳು ತನ್ನ ಬಳಿಯಿದೆಯೇ ಎಂದು ಸರಕಾರ ನೋಡಿಕೊಂಡಿರಲಿಲ್ಲ. ನವೆಂಬರ್ 8, 2016 ರಂದು, ಆರ್‌ ಬಿ ಐ ಮತ್ತು ಕರೆನ್ಸಿಚೆಸ್ಟ್ನಲ್ಲಿದ್ದ 2,000 ರೂನೋಟುಗಳ ಒಟ್ಟುದಾಸ್ತಾನು 94,660 ಕೋಟಿ.ರೂ.ಗಳಮೌಲ್ಯದ 47.33 ಕೋಟಿ ನೋಟುಗಳು. ಇದು ಹಿಂಪಡೆದ ‘ನಿರ್ದಿಷ್ಟ ಪಡಿಸಿದ ಬ್ಯಾಂಕ್ನೋಟು’(ಎಸ್‌ಬಿಎನ್)ಗಳಮೌಲ್ಯದ 6% ಮಾತ್ರ ಆಗಿತ್ತು. ಜನರು ಸಾಲುಗಳಲ್ಲಿ ನಿಂತು ಸಾಯುತ್ತಿದ್ದರು, ತ್ವರಿತಮೌಲ್ಯೀಕರಣಕ್ಕೆ ಹೆಚ್ಚು 2000ರೂ. ನೋಟುಗಳು ಬೇಕು ಎಂಬ ಜ್ಞಾನೋದಯವಾಗಿತ್ತು.

ಆದರೆ, ಆರ್‌ಬಿಐ ಹೊಸ 2,000 ರೂಪಾಯಿ ನೋಟುಗಳನ್ನು ಹೊಸ ಆಕಾರದಲ್ಲಿ ಮುದ್ರಿಸಿತು. ಸಾಮಾನ್ಯವಾಗಿ, ಒಂದು ಎಟಿಎಂ ನಲ್ಲಿ ನಾಲ್ಕು ಕ್ಯಾಸೆಟ್‌ಗಳಿರುತ್ತವೆ; ಎರಡು ಕ್ಯಾಸೆಟ್‌ಗಳು 500 ರೂ ನೋಟುಗಳನ್ನು ಹಿಡಿದಿಟ್ಟುಕೊಂಡರೆ, ಇತರ ಎರಡು ಕ್ಯಾಸೆಟ್‌ಗಳುರೂ 1,000 ಮತ್ತು100 ರೂ ನೋಟುಗಳನ್ನು ಹಿಡಿದಿಟ್ಟು ಕೊಳ್ಳುತ್ತಿದ್ದವು.ಹೊಸ 2,000 ರೂ. ಇವುಗಳಲ್ಲಿ ಯಾವುದರಲ್ಲೂ ಹಿಡಿಸುತ್ತಿರಲಿಲ್ಲ.ಹೀಗಾಗಿ ದೇಶದಲ್ಲಿದ್ದ 2.2 ಲಕ್ಷ ಎಟಿಎಂಗಳಲ್ಲಿ ಪ್ರತಿಯೊಂದನ್ನು ‘ರಿಕ್ಯಾಲಿಬ್ರೇಟ್’ ಮಾಡಬೇಕಾಗಿತ್ತು. ಅಂದರೆ ಮರುಹೊಂದಿಸ ಬೇಕಾಗಿತ್ತು. ಇದೊಂದು ಬೃಹತ್ಸ್ವ ರೂಪದ ಸಂಕೀರ್ಣಕಸರತ್ತು ಆಗಿತ್ತು.ಇದಕ್ಕೆ ಎಲ್ಲ ಬ್ಯಾಂಕುಗಳು, ಎಟಿಎಂತ ಯಾರಕರು,ನ್ಯಾಷನಲ್‌ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ,ಮತ್ತು ಸ್ವಿಚ್ ಆಪರೇಟರ್‌ಗಳ ನಡುವೆ ಸಮನ್ವಯದ ಅಗತ್ಯವಿತ್ತು.ಎಂಜಿನಿಯರ್‌ಗಳು ಪ್ರತಿ ಎಟಿಎಂಗೆ ಖುದ್ದಾಗಿ ಭೇಟಿ ನೀಡಿ ಮರು ಹೊಂದಿಸಲು ಎರಡ ರಿಂದ ನಾಲ್ಕು ಗಂಟೆಗಳನ್ನು ವ್ಯಯಿಸಬೇಕಾಗಿತ್ತು.

ಈ ಮರು ಹೊಂದಿಕೆಯ ಬಿಕ್ಕಟ್ಟು ಇನ್ನೊಂದು ತರಾತುರಿಯ ತಾತ್ಕಾಲಿಕ ಕ್ರಮಕ್ಕೆ ಎಡೆ ಮಾಡಿಕೊಟ್ಟಿತು.ಬ್ಯಾಂಕುಗಳು ಲಭ್ಯವಿದ್ದ 100ರೂ.ನೋಟುಗಳಿಂದ ಎಲ್ಲಾಕ್ಯಾಸೆಟ್ಗಳನ್ನು ತುಂಬಿದವು. ಹೀಗೆಮಾಡಿದಾಗ ಒಂದು ಎಟಿಎಂನಲ್ಲಿ 2.1ಲಕ್ಷರೂ. ಮೌಲ್ಯದ ಕರೆನ್ಸಿಯನ್ನು ಇಡಬಹುದಾಗಿತ್ತು.ಪ್ರತಿ ವ್ಯಕ್ತಿದಿನಕ್ಕೆ ಗರಿಷ್ಟ ರೂ.2,000 ಹಿಂಪಡೆಯ ಬಹುದಾಗಿದ್ದು ಒಂದು ಎಟಿಎಂ ಅಬ್ಬಬ್ಬಾ ಎಂದರೆ ದಿನಕ್ಕೆ ಗರಿಷ್ಠ 105 ಜನರ ಅಗತ್ಯಗಳನ್ನು ಮಾತ್ರ ಪೂರೈಸ ಬಹುದಾಗಿತ್ತು.ಆದರೆ ಪ್ರತಿ ಎಟಿಎಂ ಮುಂದೆ ದಿನವೂ ಸಾವಿರಾರು ಮಂದಿ ಸಾಲಿನಲ್ಲಿ ನಿಂತಿರುತ್ತಿದ್ದರು.

100 ರೂಪಾಯಿ ನೋಟುಗಳದಾ ಸ್ತಾನು ಬೇಗ ಖಾಲಿಯಾದಾಗ ಬ್ಯಾಂಕುಗಳು ಆರ್‌ಬಿ ಐ ನಿಂದ ಇನ್ನಷ್ಟು ನೋಟುಗಳನ್ನು ಕೇಳಿದವು. ಬ್ಯಾಂಕುಗಳು ಈಹಿಂದೆ ತನಗೆ ಹಿಂದಿರುಗಿಸಿದ್ದ ಹಳೆಯ ಮಣ್ಣಾದ ನೋಟುಗಳನ್ನು ನೀಡದೆ ಆರ್‌ಬಿಐಗೆ ಬೇರೆ ದಾರಿಯಿರಲಿಲ್ಲ. ಈ ಮಣ್ಣಾದ ನೋಟುಗಳು ಆಗಿಂದಾಗ ಎಟಿಎಂಗಳನ್ನು ಜಾಮ್ಮಾಡುತ್ತಿದ್ದುದು ಗೊಂದಲವನ್ನು ಉಲ್ಬಣಗೊಳಿಸಿತು.

ಇಷ್ಟೇ ಅಲ್ಲ,ಹೊಸ 2,000 ರೂ. ನೋಟುಗಳ ಗುಣ ಮಟ್ಟ ಕೂಡ ಸಮಸ್ಯೆಯಾಗಿತ್ತು. ಅನೇಕ ನೋಟುಗಳ ಮುದ್ರಣ ಕಳಪೆಯಾಗಿತ್ತು. ಕೆಲವು ನೋಟುಗಳಲ್ಲಿ ಮಹಾತ್ಮಾಗಾಂಧಿ ಯವರ ಮುಖದಚಿತ್ರ ವಲ್ಲದೆ ಅದರ ನೆರಳೂ ಇತ್ತು;ಕೆಲವು ನೋಟುಗಳ ಅಂಚುಗಳು ಸಮನಾಗಿರಲಿಲ್ಲ; ಇನ್ನೊಂದಿಷ್ಟು ನೋಟುಗಳು ಬೇರೆಬೇರೆ ಬಣ್ಣ ಮತ್ತು ಆಕಾರಹೊಂದಿದ್ದವು.ಇದನ್ನು ಬಳಸಿಕೊಂಡು ಹಳ್ಳಿಗಳಲ್ಲಿ,ಕ್ರಿಮಿನಲ್‌ಗಳು ರೈತರಿಗೆ ನಕಲಿ 2,000 ರೂ. ನೋಟುಗಳನ್ನು ಕೊಟ್ಟು ಮೋಸ ಮಾಡಿದರು. ಅವು ಮೂಲ ನೋಟಿನ ಹೆಚ್ಚಿನರೆಸಲ್ಯೂಶನ್ ಇದ್ದ ಫೋಟೋಕಾಪಿಗಳಾಗಿದ್ದವು.

ಇಷ್ಟೆಲ್ಲಾ ಆದಮೇಲೆ, ಹಲವರಿಗೆರೂ 2,000 ನೋಟುಗಳನ್ನು ಖರ್ಚು ಮಾಡಲು ಆಗಲಿಲ್ಲ. ಈ ನೋಟಿನ ಬದಲಿಗೆ ಬೇರೆ ಮೌಲ್ಯದ ನೋಟುಗಳನ್ನು ನೀಡಲು ಅಥವ ಈ ನೋಟು ಬಳಸಿಏನಾದರೂ ವ್ಯವಹಾರ ಮಾಡಿದರೆ ಬಾಕಿಚಿಲ್ಲರೆಯನ್ನು ಕೊಡಲು ಹಲವರು ಹಿಂದೇಟು ಹಾಕಿದರು. ಹೀಗಾಗಿ ನೋಟುಗಳ ಕಡಿ ಮೆಲಭ್ಯತೆಯ ಸಮಸ್ಯೆಯು ಈ ರೂ.2000 ನೋಟುಗಳ ಮುದ್ರಣದಿಂದ ಇನ್ನಷ್ಟು ಉಲ್ಬಣಗೊಂಡಿತು.

ಒಂದು ದೊಡ್ಡ ನೋಟಿನ ಅಗತ್ಯತೆ

ಈ ಎಲ್ಲದರ ನಡುವೆ ಜನರನ್ನು ಒಂದು ಮೂಲ ಭೂತ ಪ್ರಶ್ನೆ ಕಾಡುತ್ತಲೇ ಇತ್ತು. ಸರಕಾರ ಹೇಳಿ ಕೊಳ್ಳುವ ಹಾಗೆ ಬಹುಪಾಲು ಕಾನೂನು ಬಾಹಿರವಹಿವಾಟುಗಳು ಹಾಗೂ ಬೃಹತ್ಪ್ರಮಾಣದನಗದು ಸಂಗ್ರಹ 500ರೂ. ಮತ್ತು 1000ರೂ. ನೋಟುಗಳ ಮೂಲ ಕನಡೆಯುತ್ತಿತ್ತು ಎನ್ನುವುದಾದರೆ, ಹೊಸ 2000ರೂ. ನೋಟನ್ನು ಸರಕಾರ ಬಿಡುಗಡೆ ಮಾಡಿದ್ದಾದರೂ ಏಕೆ? ಇದಕ್ಕೆ ನಂಬಲರ್ಹ ವಿವರಣೆಯನ್ನು ಎಂದೂ ಕೊಡಲಿಲ್ಲ. ವಾಸ್ತವವಾಗಿ, ಅಕ್ಟೋಬರ್7, 2014ರಲ್ಲೇ ಆರ್.ಬಿ.ಐ. ಏರುತ್ತಿದ್ದ ಹಣದುಬ್ಬರ ಮತ್ತು ಕರೆನ್ಸಿಪೂರೈಕೆ/ಸಾಗಾಣಿಕೆಯ ಸಮಸ್ಯೆಗಳನ್ನು ನಿಭಾಯಿಸಲು ರೂ.5000 ಮತ್ತು ರೂ.10000 ಮುಖ ಬೆಲೆಯ ನೋಟುಗಳನ್ನು ಬಿಡು ಗಡೆ ಮಾಡುವಂತೆ ಸರಕಾರಕ್ಕೆ ಸಲಹೆ ನೀಡಿತ್ತು.ಆದರೆ,ಸರಕಾರ ಮೇ 18,2016 ರಂದು ಈ ಸಲಹೆಯನ್ನು ನಿರಾಕರಿಸಿ,ಹೊಸ 2,000 ರೂ ನೋಟುಗಳನ್ನು ಹೊರತರುವಂತೆ ಆರ್‌ಬಿಐಗೆ ಸಲಹೆ ನೀಡಿತು.

ಮಾರ್ಚ್ 31, 2018ರ ವೇಳೆಗೆ ಚಲಾವಣೆಯಲ್ಲಿದ್ದ ಎಲ್ಲ ಕರೆನ್ಸಿಗಳ ಪೈಕಿಶೇ. 37.3 ರಷ್ಟಿದ್ದ 2000ರೂ. ನೋಟುಗಳ ಪ್ರಮಾಣ ಮಾರ್ಚ್ 31,2023ರಂದು ಕೇವಲ ಶೇ.10.8ಕ್ಕೆ ಇಳಿಯಿತು. ಹೀಗಾಗಿ,2016ರಲ್ಲಿ ಚಲಾವಣೆಯಲ್ಲಿದ್ದ ಶೇ.86 ಕ್ಕೂ ಅಧಿಕಪ್ರಮಾಣದ ನೋಟುಗಳನ್ನು ಹಿಂಪಡೆದಾಗ ಆದಷ್ಟು ಪ್ರಮಾಣದ ಪರಿಣಾಮವು ಈಗ ಆಗಲಾರದು.

ಆದರೂ,ಕರೆನ್ಸಿ ನಿರ್ವಹಣೆಯಲ್ಲಿ ಮತ್ತೆ-ಮತ್ತೆ ಬದಲಾವಣೆಗಳು ಮತ್ತು ಯು-ಟರ್ನ್‍ (ತಿಪ್ಪರಲಾಗ) ಗಳು ಇಂದು ಭಾರತದ ಹಣ ವ್ಯವಸ್ಥೆಯ ವಿಶ್ವಾಸಾರ್ಹತೆಯ ಗಂಭೀರ ಪ್ರಶ‍್ನೆಯನ್ನು ಎತ್ತಿವೆ ಎಂಬುದನ್ನು ಖಂಡಿತವಾಗಿಯೂ ಅಲ್ಲಗಳೆಯಲು ಸಾಧ್ಯವಿಲ್ಲ.ಸಪ್ಟಂಬರ್ 2023ರ ನಂತರ ರೂ.2000 ನೋಟುಗಳ ಸ್ಥಾನಮಾನದ ಬಗ್ಗೆ ನಿಖರವಾಗಿ ಈ ಗಲೇ ಹೇಳಲಾಗುವದಿಲ್ಲ ಎಂದು ಆರ್‌ಬಿಐಗ ವರ್ನರ್ಹೇಳಿರುವುದು ಈ ಕೆಟ್ಟಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಸುಭದ್ರತೆಯನ್ನು ಬಯಸುತ್ತಿರುವವರು ಭಾರತೀಯ ರೂಪಾಯಿಯಲ್ಲಿ ಆಸ್ತಿಗಳನ್ನು ಇಟ್ಟು ಕೊಳ್ಳುವದನ್ನು ಒಂದು ಬಾಧ್ಯತೆಯಾಗಿ ನೋಡುತ್ತಾರೆ.

ಮುಂದೇನು?

ಯಾವುದೇ ಅರ್ಥವ್ಯವಸ್ಥೆಯಲ್ಲಿ ಗರಿಷ್ಟಮುಖ ಬೆಲೆಯ ನೋಟುಗಳಿಗೆ ಸಂಗ್ರಹ ಮೌಲ್ಯವಿದೆ.ಇದನ್ನು ದೈನಂದಿನ ವಹಿವಾಟಿಗೆ ಬಳಸುವುದು ಬಹಳ ಅಪರೂಪ. ಆದರೆ ತಲಾ ಆದಾಯಗಳು ಮತ್ತು ಹಣದುಬ್ಬರ ಹೆಚ್ಚಿದಂತೆ ಇಂತಹ ನೋಟುಗಳು ಮೌಲ್ಯ ಕಳೆದು ಕೊಂಡು ದೈನಂದಿನ ಬಳಕೆಯ ನೋಟು ಆಗುತ್ತವೆ. ಹಾಗಾದಾಗ ಸಹಜವಾಗಿಯೇ ಮೌಲ್ಯದದಾಸ್ತಾನಾಗಿ ಕಾರ್ಯ ನಿರ್ವಹಿಸಲು ಅರ್ಥವ್ಯವಸ್ಥೆಗೆ ಒಂದು ಹೆಚ್ಚಿನ ಮುಖ ಬೆಲೆಯ ನೋಟಿನ ಆವಶ್ಯಕತೆ ಉಂಟಾಗುತ್ತದೆ. ಅದರಿಂದಾಗಿಯೇ 2014ರಲ್ಲಿ ಆರ್‌ಬಿಐ 5,000 ಮತ್ತು 10,000 ರೂ ನೋಟುಗಳನ್ನು ಬಿಡು ಗಡೆ ಮಡಲು ಅವಕಾಶ ನೀಡುವಂತೆ ಸರಕಾರವನ್ನು ಕೋರಿತ್ತು.

ಈಗ 2000ರೂ. ನೋಟುಗಳನ್ನು ಹಿಂಪಡೆದಿರುವುದರಿಂದ ಸದ್ಯಕ್ಕೆ ಗರಿಷ್ಟ ಮುಖ ಬೆಲೆಯಕರೆನ್ಸಿಯಾಗಿರುವ 500ರೂ. ನೋಟು ಒಂದು ಬೆಳೆಯುತ್ತಿರುವ ಅರ್ಥವ್ಯವಸ್ಥೆಯಲ್ಲಿ ಮೌಲ್ಯದದಾಸ್ತಾನಾಗಿ ಕೆಲಸ ಮಾಡಬಹುದೇ?

ಭಾರತದಲ್ಲಿ ನನಗದು-ಜಿಡಿಪಿ ಅನುಪಾತ 2015-16 ರಲ್ಲಿ ಶೇ. 12 ಶೇಕಡಾ, 2020-21ರಲ್ಲಿಶೇ. 14.5 ಕ್ಕೆಮತ್ತು 2021-22ರಲ್ಲಿಶೇ. 13.3 ಕ್ಕೆಏರಿದೆ. ಆದ್ದರಿಂದ, ಹೆಚ್ಚುನಗದು ಚಲಾವಣೆಯಾಗುತ್ತಿದೆ, ಹಣದುಬ್ಬರದೊಂದಿಗೆ ನೋಟುಗಳ ಮೌಲ್ಯ ಕಡಿಮೆಯಾಗುತ್ತಿದೆ, ಮತ್ತು ನೈಜ ಬಡ್ಡಿದರಗಳು ಕುಸಿಯುತ್ತಿವೆ. ಇಂತಹ ಸನ್ನಿವೇಶದಲ್ಲಿ, ಆರ್‌ಬಿಐಗೆ ರೂ 1,000, ಅಥವಾ ರೂ 5,000 ಅಥವಾ ರೂ. 10,000 ರೂಪಾಯಿ ನೋಟುಗಳನ್ನು ಪರಿಚಯಿಸದೆ ಕರೆನ್ಸಿಪೂರೈಕೆ ವ್ಯವಸ್ಥೆಯನ್ನು ನಿರ್ವಹಿಸುವುದು ಸಾಧ್ಯವೇ? ಈ ನಿರ್ಧಾರವನ್ನು ಕೈಗೊಳ್ಳದೇ ತಪ್ಪಿಸಿಕೊಳ್ಳುವುದು ಕಷ್ಟ ಸಾಧ್ಯವಾಗಬಹುದು.

ಪರ್ಯಾಯವಾಗಿ,ಒಂದು ಡಿಜಿಟಲ್ಕರೆನ್ಸಿ,ಇ-ರೂಪಾಯಿ, ದೊಡ್ಡ ಮುಖ ಬೆಲೆಯ ನೋಟುಗಳಿಗೆ ಒಂದು ಬದಲಿಯಾಗ ಬಲ್ಲುದೇ? ಒಂದು ಸ್ಥಿರ ಮತ್ತು ಸ್ವೀಕಾರಾರ್ಹ ಮೌಲ್ಯದ ದಾಸ್ತಾನು ಆಗಬೇಕಾದರೆ ಡಿಜಿಟಲ್ಕ ರೆನ್ಸಿ ಅನಾಮಧೇಯತೆ, ದೈನಂದಿನ ಬಳಕೆ ಮತ್ತು ವಿನಿಮಯಗೊಳ್ಳುವ ಪ್ರಮುಖ ಗುಣಲಕ್ಷಣಗಳನ್ನು ಹೊಂದಬೇಕು.ಆದರೆ ಇ-ರೂಪಾಯಿಗೆ ವ್ಯವಹಾರಗಳಲ್ಲಿ “ಒಂದು ನಿರ್ದಿಷ್ಟ ಮಟ್ಟ”ದವರೆಗೆ ಮಾತ್ರ ಅನಾಮಧೆಯತೆಯ ಭರವಸೆ ನೀಡಲು ಸಾಧ್ಯ ಎಂದು ಆರ್‌ಬಿಐ ಹೇಳಿದೆ.ಉಳಿದ ಗುಣಲಕ್ಷಣಗಳು ಕೂಡ ಇನ್ನೂ ವಿಕಾಸಗೊಳ್ಳುತ್ತಿವೆ, ಈ ಗಿನ್ನೂಶೈಶ ವಾವಸ್ಥೆಯಲ್ಲಿವೆ. ಡಿಜಿಟಲ್ ಕರೆನ್ಸಿ ಸದ್ಯದಲ್ಲೇ ಒಂದು ಮೌಲ್ಯದ ಹೊಸ ದಾಸ್ತಾನಾಗಿ ಹೊಮ್ಮುವ ಸಾಧ್ಯತೆ ಬಹಳಕಡಿಮೆ.

ಅದುವರೆಗೆ,“ಪಿಕ್ಷರ್ಅಭೀಬಾಕೀಹೈ”(ಆಟ ಇನ್ನೂ ಮುಗಿದಿಲ್ಲ) ಎಂದಷ್ಟೇ ಹೇಳೋಣ

“ಈ ನೋಟಿನಲ್ಲಿ ಚಿಪ್‍ಇದೆ”

ಎಂದು ಭಾವಿಸಿದ್ದರು. ..ಆದರೆ ಚಿಪ್‍ಇರುವುದು.. ..

“ಕಟ್ಟೆಚ್ಚರ, ಭಾಯ್. ಈ ಆಂಕರ್ಕಳೆದ ಆರು ಗಂಟೆಯಿಂದ ವಿಶ್ವ ಗುರು ಎಂದು ಹೇಳಿಲ್ಲ!” (ವ್ಯಂಗ್ಯ ಚಿತ್ರ: ಸತೀಶ ಆಚಾರ್, ಮೊಲಿಟಿಕ್ಸ್‍.ಇನ್)

 

 

 

Donate Janashakthi Media

Leave a Reply

Your email address will not be published. Required fields are marked *