ಕಾರ್ಮಿಕ ಕಾನೂನು ಆಡಳಿತವನ್ನು ಸಡಿಲಗೊಳಿಸುತ್ತದೆ
ಕೇಂದ್ರ ಶ್ರಮ ಮತ್ತು ಉದ್ಯೋಗ ಸಚಿವಾಲಯವು ಅಕ್ಟೋಬರ್ 8, 2025 ರಂದು ‘ಶ್ರಮ ಶಕ್ತಿ ನೀತಿ 2025’ ಎಂಬ ಶೀರ್ಷಿಕೆಯ ಕರಡು ನೀತಿಯೊಂದನ್ನು ಬಿಡುಗಡೆ ಮಾಡಿದೆ. ಈ ನೀತಿಯು ತನ್ನ ಉದ್ದೇಶವು ‘ಸಮಾನತೆ, ನ್ಯಾಯ ಮತ್ತು ಗೌರವಯುತ ಸಾಂವಿಧಾನಿಕ ಮೌಲ್ಯಗಳಲ್ಲಿ ಬೇರೂರಿದೆ ಎಂದು ಹೇಳಿಕೊಂಡಿದೆ. ನೀತಿಯು ತನ್ನ ಶಾಸನಾತ್ಮಕ ಮತ್ತು ನೈತಿಕ ಅಧಿಕಾರವನ್ನು ಭಾರತದ ಸಂವಿಧಾನದಿಂದ ಪಡೆಯುತ್ತದೆ, ಮೂಲಭೂತ ಹಕ್ಕುಗಳು ಮತ್ತು ನಾಮ ನಿರ್ದೇಶಕ ತತ್ವಗಳನ್ನು ಆಧಾರವಾಗಿರಿಸಿಕೊಂಡು ನ್ಯಾಯಯುತ, ಒಳಗೊಳ್ಳುವಿಕೆಯ ಮತ್ತು ಸಾಮಾಜಿಕ ಕಲ್ಯಾಣ ಆಧಾರಿತ ಶ್ರಮ ವ್ಯವಸ್ಥೆಗೆ ಅಡಿಗಲ್ಲನ್ನು ಹಾಕುತ್ತದೆ ಎಂದು ಪ್ರತಿಪಾದಿಸಿದೆ.
-ಕೆ.ಎನ್.ಉಮೇಶ್
ಕೇಂದ್ರ ಶ್ರಮ ಮತ್ತು ಉದ್ಯೋಗ ಸಚಿವಾಲಯವು ಅಕ್ಟೋಬರ್ 8, 2025 ರಂದು ‘ಶ್ರಮ ಶಕ್ತಿ ನೀತಿ 2025’ ಎಂಬ ಶೀರ್ಷಿಕೆಯ ಕರಡು ನೀತಿಯೊಂದನ್ನು ಬಿಡುಗಡೆ ಮಾಡಿದೆ. ಈ ನೀತಿಯು ತನ್ನ ಉದ್ದೇಶವು ‘ಸಮಾನತೆ, ನ್ಯಾಯ ಮತ್ತು ಗೌರವಯುತ ಸಾಂವಿಧಾನಿಕ ಮೌಲ್ಯಗಳಲ್ಲಿ ಬೇರೂರಿದೆ ಎಂದು ಹೇಳಿಕೊಂಡಿದೆ. ನೀತಿಯು ತನ್ನ ಶಾಸನಾತ್ಮಕ ಮತ್ತು ನೈತಿಕ ಅಧಿಕಾರವನ್ನು ಭಾರತದ ಸಂವಿಧಾನದಿಂದ ಪಡೆಯುತ್ತದೆ, ಮೂಲಭೂತ ಹಕ್ಕುಗಳು ಮತ್ತು ನಾಮ ನಿರ್ದೇಶಕ ತತ್ವಗಳನ್ನು ಆಧಾರವಾಗಿರಿಸಿಕೊಂಡು ನ್ಯಾಯಯುತ, ಒಳಗೊಳ್ಳುವಿಕೆಯ ಮತ್ತು ಸಾಮಾಜಿಕ ಕಲ್ಯಾಣ ಆಧಾರಿತ ಶ್ರಮ ವ್ಯವಸ್ಥೆಗೆ ಅಡಿಗಲ್ಲನ್ನು ಹಾಕುತ್ತದೆ ಎಂದು ಪ್ರತಿಪಾದಿಸಿದೆ.
ಶ್ರಮದ ನೈತಿಕ ಮೌಲ್ಯವನ್ನು ನಿಗದಿಮಾಡುವ ಶ್ರಮ ಧರ್ಮದ ನಾಗರಿಕತೆಯ ತತ್ವಶಾಸ್ತ್ರದಲ್ಲಿ ಬೇರೂರಿದೆ, ನ್ಯಾಯೋಚಿತ, ಒಳಗೊಳ್ಳುವಿಕೆಯ ಮತ್ತು ಭವಿಷ್ಯಕ್ಕೆ ಸಿದ್ಧವಾದ ಶ್ರಮ ಪರಿಸರ ವ್ಯವಸ್ಥೆಗೆ ನವೀನ ದೃಷ್ಟಿಕೋನದಿಂದ ಕೂಡಿದೆ ಎಂದು ನೀತಿಯು ಹೇಳಿಕೊಂಡಿದೆ.
ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ವಂಚಕರ ಜಾಲದಲ್ಲಿ ಸಿಲುಕಿಕೊಂಡಿದ್ದ 125 ಮಂದಿ ಭಾರತೀಯರ ರಕ್ಷಣೆ
ಕರಡು ನೀತಿಯ ಮುಖ್ಯ ಅಂಶಗಳು ಅದರ ಉದ್ದೇಶ ಮತ್ತು ಆಶಯಕ್ಕೆ ವಿರುದ್ಧವಾಗಿದೆ, ಏಕೆಂದರೆ ಇದು ಮನು ಸ್ಮೃತಿ ಮತ್ತು ಇತರೆ ಹಳೆಯ ಶಾಸ್ತ್ರಗಳ ಆಧಾರಿತ ಶ್ರಮ ಧರ್ಮದಿಂದ ಸ್ಫೂರ್ತಿ ಪಡೆದು, ಭಾರತದ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿರುವ ಕಾಮಿ೯ಕ ಸಂಹಿತೆಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತದೆ.
ನ್ಯಾಯಮೂರ್ತಿ ಶ್ರೀ. ಗಜೇಂದ್ರಗಡಕರ್ ಅವರ ಅಧ್ಯಕ್ಷತೆಯ ಮೊದಲ ರಾಷ್ಟ್ರೀಯ ಕಾಮಿ೯ಕರ ಆಯೋಗವು 1969 ರಲ್ಲಿ ಆಗಿನ ಕೇಂದ್ರ ಸರ್ಕಾರದ ಉಲ್ಲೇಖದ ಮೇರೆಗೆ, ಸಂವಿಧಾನದ ನಾಮ ನಿರ್ದೇಶಕ ತತ್ವಗಳನ್ನು ಜಾರಿಗೊಳಿಸಲು ಶಾಸನಬದ್ಧ ಕ್ರಮಗಳನ್ನು ಶಿಫಾರಸು ಮಾಡಿತ್ತು. ಆದರೆ ಈ ನೀತಿಯು ಅದಕ್ಕೆ ಸಂಪೂರ್ಣವಾಗಿ ವಿರುದ್ಧವಾದ ದಿಕ್ಕನ್ನು ಅವಲಂಬಿಸಿದೆ. ಆದರೂ ಕರಡು ನೀತಿಯು ಸಂವಿಧಾನದ ನಾಮ ನಿರ್ದೇಶಕ ತತ್ವಗಳ ಆಧಾರಿತವಾಗಿದೆ ಎಂದು ಪ್ರತಿಪಾದಿಸಿಕೊಂಡಿದೆ. ಇಡೀ ಪ್ರಕ್ರಿಯೆಯು ಒಳಗೊಳ್ಳುವಿಕೆ ಮತ್ತು ನ್ಯಾಯಯುತ ಆಧಾರಿತವಾಗಿದೆ ಎಂಬುದು ಸಂಪೂರ್ಣ ಸುಳ್ಳು ಮತ್ತು ವಂಚನೆಯಾಗಿದೆ.
ಉದ್ಯೋಗಿಗಳ ಸಂಖ್ಯೆಯ ಮಿತಿಗಳು ಮತ್ತು ಹೊರಗುಳಿಸುವಿಕೆ
ನೀತಿಯು ಒಳಗೊಳ್ಳುವಿಕೆಯ ಬಗ್ಗೆ ಮಾತನಾಡುತ್ತದೆ ಆದರೂ, ಕಾರ್ಮಿಕ ಸಂಹಿತೆಗಳಲ್ಲಿ ಅದರ ಅನ್ವಯಕ್ಕೆ ಉದ್ಯೋಗಿಗಳ ಸಂಖ್ಯೆಯ ಮಿತಿ ಹೆಚ್ಚಿಸಿದಿದ್ದರಿಂದ, ಬೃಹತ್ ಸಂಖ್ಯೆಯ ಕಾರ್ಮಿಕರು ಪ್ರಸ್ತುತ ಕಾರ್ಮಿಕ ಕಾನೂನುಗಳ ವ್ಯಾಪ್ತಿಯಿಂದ ಹೊರಗುಳಿಯುತ್ತಿದ್ದಾರೆ ಎಂಬುದು ವಾಸ್ತವ. ಈ ನೀತಿಯ ಮೂಲಕ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿರುವ ಕಾರ್ಮಿಕ ಸಂಹಿತೆಗಳು ಕಾರ್ಖಾನೆಗಳ ಕಾಯ್ದೆ, ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿಷೇಧ) ಕಾಯ್ದೆ ಮತ್ತು ಕೈಗಾರಿಕಾ ವಿವಾದಗಳ ಕಾಯ್ದೆಯ ಅನ್ವಯಕ್ಕಿರುವ ಕಾರ್ಮಿಕರ ಸಂಖ್ಯೆಯ ಮಿತಿಯ ಸಂಖ್ಯೆಗಳನ್ನು ಹೆಚ್ಚಿಸಿವೆ. ಇದರಿಂದಾಗಿ ಹಲವಾರು ಕೋಟಿ ಕಾರ್ಮಿಕರನ್ನು ನೇಮಿಸಿಕೊಂಡಿರುವ ಬೃಹತ್ ಸಂಖ್ಯೆಯ ಸಂಸ್ಥೆಗಳು ಈ ಕಾನೂನುಗಳ ವ್ಯಾಪ್ತಿಯಿಂದ ಹೊರಗುಳಿಯುತ್ತವೆ.
ಟ್ರೇಡ್ ಯೂನಿಯನ್‌ಗಳ ಒತ್ತಡದ ಹೊರತಾಗಿಯೂ, ಸಂಹಿತೆಗಳ ವ್ಯಾಪ್ತಿಯನ್ನು ವಿಸ್ತರಿಸಲು ಕಾರ್ಮಿಕರ ಸಂಖ್ಯೆಯ ಮಿತಿಯ ಮಟ್ಟಗಳನ್ನು ಕಡಿಮೆ ಮಾಡಿಲ್ಲ. ಈ ಪರಿಸ್ಥಿತಿಯಲ್ಲಿ, ಒಳಗೊಳ್ಳುವಿಕೆಯ ಹೇಳಿಕೆಯು ದುಡಿಯುವ ಜನರ ಮೇಲಿನ ಒಂದು ಅಪಹಾಸ್ಯ ಮತ್ತು ವಂಚನೆ ಮಾತ್ರವಾಗಿದೆ. ಭವಿಷ್ಯ ನಿಧಿ ಕಾಯ್ದೆಯ ಅನ್ವಯಕ್ಕೆ ಕಾಖಾ೯ನೆ/ಸಂಸ್ಥೆಯ ಕಾಮಿ೯ಕರ ಸಂಖ್ಯೆಯ ಮಿತಿಯ ಮಟ್ಟ 20 ಆಗಿದ್ದು ESI ಯಲ್ಲಿ 10 ಅದಾಗ್ಯೂ EPF ನಲ್ಲಿರುವ ಚಂದಾದಾರರ ಸಂಖ್ಯೆ ESI ಗಿಂತ ಹೆಚ್ಚಿದೆ. ಈ ವಿದ್ಯಮಾನವು ಈ ಸಾಮಾಜಿಕ ಭದ್ರತಾ ಸಂಬಂಧಿತ ಶಾಸನಗಳ ಅನುಸರಣೆಯಿಲ್ಲಿರುವ ಲೋಪದ ಮಟ್ಟವನ್ನು ಬಹಿರಂಗಪಡಿಸುತ್ತದೆ. ಆದ್ದರಿಂದ, ಯಾವುದೇ ಬಜೆಟ್ ಬೆಂಬಲ ಇಲ್ಲದೆ ಕೇವಲ ಡಿಜಿಟಲೀಕರಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಪೋಟ೯ಲೈಷೇನ್ ಮೂಲಕ ಸಾಮಾಜಿಕ ಸುರಕ್ಷತೆಯ ಸಾರ್ವತ್ರಿಕರಣದ ಆಶಯ
ನಿರಥ೯ಕ.
ಅನುಸರಣೆಯನ್ನು ಖಾತ್ರಿಗೊಳಿಸುವ ಬದಲು ವಂಚನೆಗೆ ಅನುವುಗೊಳಿಸುವಿಕೆ
ನೀತಿಯು, ಶ್ರಮ ಮತ್ತು ಉದ್ಯೋಗ ಸಚಿವಾಲಯವನ್ನು ಕಾನೂನುಬದ್ಧ ತಪಾಸಣೆಗಳ ಮೂಲಕ ಅನುಸರಣೆ ಮತ್ತು ಜಾರಿಯನ್ನು ಖಚಿತಪಡಿಸುವ ನಿಯಂತ್ರಕನಾಗಿರುವ ತನ್ನ ಜವಾಬ್ದಾರಿಯುತ ಪಾತ್ರವನ್ನು ನಿರ್ಲಕ್ಷಿಸಿ, ಕೇವಲ ಉದ್ಯೋಗ ಸೌಲಭ್ಯ ಒದಗಿಸುವವನಾಗಿ ತನ್ನ “ಪುನರ್ಸ್ಥಾನ ನಿರ್ದೇಶನ”ವನ್ನು ನಾಚಿಕೆಯಿಲ್ಲದೆ ಪ್ರತಿಪಾದಿಸಿದೆ. ಕಾಮಿ೯ಕ ಸಂಹಿತೆಗಳೊಂದಿಗೆ ಹೊಂದಿಕೊಂಡಿರುವ ಈ ನೀತಿಯು, ಸ್ವ-ಪ್ರಮಾಣೀಕರಣದ ಮೂಲಕ ಸ್ವ-ಶಾಸನ ಮತ್ತು ಜನ್ ವಿಶ್ವಾಸ್ ಕಾಯ್ದೆ ಮತ್ತು ಶ್ರಮ ಸುವಿಧಾ ಸಮಾಧಾನ ಪೋರ್ಟಲ್ ಮೂಲಕ ತಂದಿರುವ ಮತ್ತು ಕೇಂದ್ರೀಕೃತವಾಗಿ ನಿರ್ದೇಶಿತ ತಪಾಸಣೆಯ ಮೂಲಕ ಮಾಲಿಕರ ಅಪರಾಧಗಳನ್ನು ಅಪರಾಧರಹಿತಗೊಳಿಸುವುದನ್ನು ಮುಂದುವರೆಸುತ್ತ, ಶ್ರಮ ಕಾನೂನು ಆಡಳಿತದ ರಕ್ಷಕನಾಗಿರುವ ಸಚಿವಾಲಯದ ಹೊಣೆಗಾರಿಕೆಯಿಂದ ಅಧಿಕಾರ ವನ್ನು ಕಿತ್ತುಹಾಕುತ್ತದೆ.
ರಕ್ಷಕನ ಪಾತ್ರವನ್ನು ತ್ಯಜಿಸುವಿಕೆ
ಶ್ರಮ ಮತ್ತು ಉದ್ಯೋಗ ಸಚಿವಾಲಯವನ್ನು ಪುನರ್ರಚಿಸುವುದನ್ನು ಪ್ರಸ್ತಾಪಿಸಿ, ಅದನ್ನು ಶ್ರಮ ಶಾಸನಗಳ ರಕ್ಷಕನಾಗಿರುವ ಬದಲು ಕೇವಲ ಉದ್ಯೋಗ ಸೌಲಭ್ಯ ಒದಗಿಸುವವನಾಗಿ ಮಾಡಲಾಗುವುದು ಎಂದು ವಿವರಿಸಲಾಗಿದೆ. ಜಾರಿಯನ್ನು ಖಾತ್ರಿಗೊಳಿಸುವ, ದೇಶದ ಸಂಬಂಧಿತ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸುವ ಮತ್ತು ಕೈಗಾರಿಕಾ ಸಂಬಂಧಗಳನ್ನು ನಿಯಂತ್ರಿಸುವ ಪಾತ್ರವನ್ನು ಇದು ನಿರ್ಲಕ್ಷಿಸುತ್ತದೆ. ಒಂದು ರೀತಿಯಲ್ಲಿ, ಜಾರಿ, ನಿಯಂತ್ರಣ, ತಪಾಸಣೆ ಮತ್ತು ರಾಜಿ ಸಂಧಾನದ/ನ್ಯಾಯನಿರ್ಣಯದ ಕಾರ್ಮಿಕ ಕಾನೂನು ವಲಯದಲ್ಲಿ ಕಾರ್ಮಿಕ ಸಚಿವಾಲಯದ ಪಾತ್ರವನ್ನು ಈ ನೀತಿಯ ಮೂಲಕ ಅಂತ್ಯಗೊಳಿಸಲು ಮತ್ತು ಜವಾಬ್ದಾರಿಯಿಲ್ಲದ ಕೇವಲ ಉದ್ಯೋಗ ಸೌಲಭ್ಯ ಒದಗಿಸುವವನಾಗಿ ಕಾರ್ಮಿಕ ಇಲಾಖೆಯನ್ನು ಸೀಮಿತಗೊಳಿಸಲು ಯತ್ನಿಸಲಾಗಿದೆ. ವಾಸ್ತವವಾಗಿ, ಈ ನೀತಿಯು ಮಾಲಿಕ ವರ್ಗಕ್ಕೆ ಕಾರ್ಮಿಕ ಕಾನೂನುಗಳನ್ನು, ಸಂಪೂರ್ಣವಾಗಿ ಮತ್ತು ದುರ್ಬಲಗೊಳಿಸಲಾದ ಶ್ರಮ ಸಂಹಿತೆಗಳನ್ನು ಸಹಾ ಶಾಶ್ವತವಾಗಿ, ದಂಡರಹಿತವಾಗಿ ಉಲ್ಲಂಘಿಸಲು ಅನುಮತಿ ನೀಡಲು ಯತ್ನಿಸುತ್ತದೆ.
ಫೆಸಿಲಿಟೇಟ್ ಗೊಳಿಸಲು ಉದ್ಯೋಗಗಳು ಎಲ್ಲಿವೆ?
ಉದ್ಯೋಗಗಳ ಫಸಿಲಿಟೇಟರ್ ಆಗಿ ಕಾರ್ಮಿಕ ಇಲಾಖೆ ಕಾಯ೯ನಿವ೯ಹಿಸ ಬೇಕಾದರೂ ಸಹಾ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ. 2024-25 ರ ರಾಷ್ಟ್ರದ ಆರ್ಥಿಕ ಸಮೀಕ್ಷೆಯು ಮುಂದಿನ ದಶಕದಲ್ಲಿ ಪ್ರತಿ ವರ್ಷ ಸರಾಸರಿ 85 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ ಎಂದು ಬಹಿರಂಗಪಡಿಸಿದೆ. ಆದರೆ, ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಧನ ಮತ್ತು ಬಂಡವಾಳ ಹೂಡಿಕೆ ವೆಚ್ಚದ ಪ್ರೋತ್ಸಾಹ ಧನ ಹೆಸರಿನಲ್ಲಿ ಸರ್ಕಾರದ ನೀತಿಗಳು ಮತ್ತು ನೀಡಲಾಗುವ ಪ್ರೋತ್ಸಾಹಗಳು ನಿರೀಕ್ಷಿತ ಉದ್ಯೋಗಗಳನ್ನು ಸೃಷ್ಟಿಸಲು ವಿಫಲವಾಗಿವೆ. ಉದ್ಯೋಗ ಸಂಬಂದಿತ ಪ್ರೋತ್ಸಾಹ ಧನವು ಔಪಚಾರಿಕ ಕ್ಷೇತ್ರಗಳಲ್ಲಿನ ಉದ್ಯೋಗಗಳನ್ನು ಕೂಡ ಕ್ರಮೇಣ ಪ್ರಶಿಕ್ಷಣಾರ್ಥಿಗಳು, ಇಂಟರ್ನ್ಗಳು ಮತ್ತು ತರಬೇತಿದಾರರನ್ನಾಗಿಸುವ ಮೂಲಕ ಅನೌಪಚಾರಿಕಗೊಳಿಸುವ, ಬಹುತೇಕ ಎಲ್ಲಾ ಶ್ರಮ ಕಾನೂನುಗಳ ವ್ಯಾಪ್ತಿ ಮತ್ತು ಸಂರಕ್ಷಣೆಯಿಂದ ಹೊರಗುಳಿಸುವ, ಕುಖ್ಯಾತ ಸಾಧನವಾಗಿದೆ.
ಕಡಿಮೆಯಾಗುತ್ತಿರುವ ವೇತನ ಪಾಲು – ಹೆಚ್ಚುತ್ತಿರುವ ಲಾಭದ ಪಾಲು
ವಾರ್ಷಿಕ ಕೈಗಾರಿಕಾ ಸಮೀಕ್ಷೆಯು ನಿವ್ವಳ ಮೌಲ್ಯ ಸೇರ್ಪಡೆಯಲ್ಲಿ ವೇತನದ ಪಾಲು 1981-82 ರಲ್ಲಿ ಶೇಕಡ 30.27 ರಿಂದ 2023-24 ರಲ್ಲಿ ಶೇಕಡ 17.97 ಕ್ಕೆ ಇಳಿದಿರುವ ಕಠೋರ ವಾಸ್ತವತೆಯನ್ನು ಬಹಿರಂಗಪಡಿಸಿದೆ.
ಅದೇ ಅವಧಿಯಲ್ಲಿ ಮಾಲಿಕರ ಲಾಭದ ಪಾಲು ಶೇಕಡ 23.39 ರಿಂದ ಶೇಕಡ 51.01 ಕ್ಕೆ ಹೆಚ್ಚಾಗಿದೆ. ಇದು ದೇಶೀಯ ಬೇಡಿಕೆಯನ್ನು ಕುಗ್ಗಿಸುತ್ತಿದೆ. ಈ ಬೇಡಿಕೆಯ ನಿರ್ಬಂಧವು, ಉನ್ನತ ಹಂತದ ದೊಡ್ಡ ಕಂಪನಿಗಳ ಕೈಯಲ್ಲಿ ರೂ. 10 ಲಕ್ಷ ಕೋಟಿಗಳಷ್ಟು ಬೃಹತ್ ನಗದು ಉಳಿತಾಯ ಇದ್ದರೂ ಸಹ, ಮಾಲಿಕರಿಂದ ಹೂಡಿಕೆಯನ್ನು ನಿರ್ಬಂಧಿಸುತ್ತಿದೆ. ಇದರಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿ ಯೋಗ್ಯವಾದ ಔಪಚಾರಿಕ ಉದ್ಯೋಗಗಳ ಸೃಷ್ಟಿ ಹಿಂದೆ ಬೀಳುತ್ತಿದೆ.
ಆದ್ದರಿಂದ, ಸರ್ಕಾರವು ಉದ್ಯೋಗ ಸೌಲಭ್ಯ ಒದಗಿಸುವವನ ಪಾತ್ರವನ್ನು ನಿವ೯ಹಿಸಲಾಗುವುದು ಎಂಬ ಪ್ರತಿಪಾದನೆಯು ಕೇವಲ ಸಕಾ೯ರದ ಪ್ರಿಯ ಮಾಧ್ಯಮಗಳ ಹೊಗಳಿಕೆ ಹೊರತುಪಡಿಸಿ ಎಲ್ಲಿಯೂ ನಿಲ್ಲುವುದಿಲ್ಲ; ನಿಜವಾಗಿ ಏನನ್ನು ಸುಲಭಗೊಳಿಸಲು ಯತ್ನಿಸಲಾಗುತ್ತಿದೆಯೆಂದರೆ, ಕಾರ್ಮಿಕರ ಎಲ್ಲಾ ಮೂಲಭೂತ ಹಕ್ಕುಗಳು ಮತ್ತು ರಕ್ಷಣೆಗಳನ್ನು ಕಸಿದುಕೊಳ್ಳುವ ಅನುಮಾನಾಸ್ಪದ ಯೋಜನೆಯಾಗಿದೆ, ಅವರನ್ನು ಸಂಪೂರ್ಣವಾಗಿ ದುರ್ಬಲ ಕೆಲಸದ ಪರಿಸ್ಥಿತಿಗಳಿಗೆ ತಳ್ಳುವುದು ಮತ್ತು ಮಾಲಿಕ ವರ್ಗಕ್ಕೆ ಸಂಪೂರ್ಣ ಲಾಭದಾಯಕವಾಗಿಸುವುದೆ ಇದರ ಉದ್ದೇಶವಾಗಿದೆ.
ಹೆಚ್ಚುತ್ತಿರುವ ಅನುಸರಣೆಯಿಲ್ಲದಿರುವಿಕೆ & ಉಲ್ಲಂಘನೆಗಳು
ಅಧಿಕೃತ ಅಂಕಿಅಂಶಗಳ ಪ್ರಕಾರ,ಕಾಮಿ೯ಕ ಕಾನೂನುಗಳ ಅಡಿಯಲ್ಲಿ ನಡೆಸಲಾದ ತಪಾಸಣೆಗಳು 2014ರಲ್ಲಿ 45,920 ರಿಂದ 2022ರಲ್ಲಿ 35,125 ಕ್ಕೆ ಇಳಿದಿದೆ, ಆದರೆ ಉಲ್ಲಂಘನೆಗಳ ಶೇಕಡಾವಾರು 54 ರಿಂದ 57.2 ಕ್ಕೆ ಹೆಚ್ಚಾಗಿದೆ. 2022ರಲ್ಲಿ, ಕನಿಷ್ಠ ವೇತನ ಕಾಯ್ದೆಯ ಉಲ್ಲಂಘನೆಯು ಶೇಕಡ 58 ತಪಾಸಣೆಗಳಲ್ಲಿ ವರದಿಯಾಗಿದೆ ಮತ್ತು ಸುಮಾರು 4.5 ಕೋಟಿ ಕಾರ್ಮಿಕರು ಪೀಡಿತರಾಗಿದ್ದಾರೆ. 2018-22ರ ಅವಧಿಯಲ್ಲಿ 1250 ಕಾರ್ಮಿಕರ ಪ್ರತಿಭಟನೆಗಳನ್ನು ಬಲವಂತವಾಗಿ ಅನುಮತಿಸಲಾಗಿಲ್ಲ ಮತ್ತು 2020-23 ರ ಅವಧಿಯಲ್ಲಿ 350 ಕಾರ್ಮಿಕ ನಾಯಕರನ್ನು ಬಂಧಿಸಲಾಗಿದೆ.

5250 ಕಂಪನಿಗಳು ಕಾರ್ಮಿಕರನ್ನು ವ್ಯಾಪಕವಾಗಿ ಕೆಲಸದಿಂದ ತೆಗೆದುಹಾಕಿವೆ ಮತ್ತು ಇದರ ಪರಿಣಾಮವಾಗಿ 15 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ; ಮತ್ತು ಐಟಿ/ಐಟೆಎಸ್ ನಲ್ಲಿ 2.5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು 2018-22 ರ ಅವಧಿಯಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ. ಶೇಕಡ 85 ಆಹಾರ ವಿತರಣಾ ಕಾರ್ಮಿಕರು ಕನಿಷ್ಠ ವೇತನಕ್ಕಿಂತ ಕಡಿಮೆ ಗಳಿಸುತ್ತಿದ್ದಾರೆ ಮತ್ತು ಶೇಕಡ 70 ಕ್ಯಾಬ್ ಚಾಲಕರು ಸಾಮಾಜಿಕ ಭದ್ರತೆಯಿಲ್ಲದೆ, ಯಾವುದೇ ಹೆಚ್ಚುವರಿ ಸಮಯದ ಕೆಲಸಕ್ಕೆ ದುಪ್ಪಟ್ಟು ವೇತನ ವಿಲ್ಲದೆ ದಿನಕ್ಕೆ 12 ರಿಂದ 14 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಶೇಕಡ 65 ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ಸೌಲಭ್ಯ ನಿರಾಕರಿಸಲಾಗಿದೆ, ಶೇಕಡ 70 ರಷ್ಟು ಉದ್ಯೋಗಿಗಳಿಗೆ ಸಮಾನ ವೇತನ ನಿರಾಕರಿಸಲಾಗಿದೆ, ಮತ್ತು ಶೇಕಡ 40 ಮಹಿಳಾ ಕಾರ್ಮಿಕರು ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದ ವರದಿ ಮಾಡಿದ್ದಾರೆ.
ಕೇವಲ 2023ರಲ್ಲಿ ಮಾತ್ರ, EPF ಅಡಿಯಲ್ಲಿ 35,೦೦೦ ಕ್ಕೂ ಹೆಚ್ಚು ಉಲ್ಲಂಘನೆಗಳು ರೂ.25೦೦ ಕೋಟಿಗೂ ಹೆಚ್ಚು ಬಾಕಿಯೊಂದಿಗೆ ವರದಿಯಾಗಿವೆ. ಈ ಉಲ್ಲಂಘನೆಯಲ್ಲಿ ಶೇಕಡ 70 ರಷ್ಟು ಬಟ್ಟೆ ಮತ್ತು ನಿರ್ಮಾಣ ಕೈಗಾರಿಕೆಯಲ್ಲಿ ವರದಿಯಾಗಿದೆ. 10 ಅಥವಾ ಹೆಚ್ಚು ಕಾರ್ಮಿಕರ ವ್ಯಾಪ್ತಿ ಮಿತಿ ಕಾರಣದಿಂದಾಗಿ ಶೇಕಡ 85 ರಷ್ಟು ಅಸಂಘಟಿತ ಕ್ಷೇತ್ರದ ಕಾರ್ಮಿಕರು ಗ್ರಾಚುಯಿಟಿಗೆ ಅರ್ಹರಲ್ಲ. 2018-22ರ ಅವಧಿಯಲ್ಲಿ ಕೆಲಸದ ಸ್ಥಳದ ಅಪಘಾತಗಳ ಅಧಿಕೃತ ವರದಿಯಾಗುವಿಕೆ ಕೇವಲ ಶೇಕಡ 35 ರಷ್ಟು ಇದ್ದರೂ, 15,೦೦೦ ಕ್ಕೂ ಹೆಚ್ಚು ಕಾರ್ಖಾನೆಗಳಲ್ಲಿ ಅಪಘಾತಗಳು ಸಂಭವಿಸಿವೆ ಮತ್ತು 45೦೦ ಕ್ಕೂ ಹೆಚ್ಚು ಕಾರ್ಮಿಕರ ಮರಣ ವರದಿಯಾಗಿದೆ. 12 ಲಕ್ಷಕ್ಕೂ ಹೆಚ್ಚು ವಿವಾದಗಳು ನ್ಯಾಯನಿರ್ಣಯಕ್ಕಾಗಿ ಬಾಕಿ ಇವೆ ಮತ್ತು ಸರಾಸರಿ ತೀರ್ಮಾನ ಅವಧಿ 3 ರಿಂದ 4 ವರ್ಷಗಳವರೆಗೆ ಇದೆ ಮತ್ತು ಕೇವಲ ಶೇಕಡ 25 ರಷ್ಟು ವಿವಾದಗಳು 2 ವರ್ಷಗಳ ಒಳಗೆ ತೀರ್ಮಾನಗೊಳ್ಳುತ್ತಿವೆ.
ಮೂಲಭೂತ ಕಾಮಿ೯ಕ ಕಾನೂನುಗಳ ಉಲ್ಲಂಘನೆ/ಅನುಸರಣೆಯಿಲ್ಲದಿರುವಿಕೆಯ ಮೇಲಿನ ಅಧಿಕೃತ ವರದಿಗಳು, ಶ್ರಮ ಧರ್ಮದ ಅಡಿಯಲ್ಲಿ ಉದ್ಯೋಗ ಸೌಲಭ್ಯ ಒದಗಿಸುವವನಾಗಿ ತನ್ನ ಹೊಸ ಅವತಾರದ ಪುನರ್ ಸ್ಥಾನನಿರ್ದೇಶನ ಮಾಡುವ ಮೊದಲು, ಸಚಿವಾಲಯದ ನೇತೃತ್ವದಲ್ಲಿ ಅನುಷ್ಠಾನದ ಅಪಮಾನಕರ ಸ್ಥಿತಿಯನ್ನು ಬಹಿರಂಗಪಡಿಸುತ್ತವೆ. ಸರ್ಕಾರವು ಅನುಸರಣೆಯ ತನ್ನ ಜವಾಬ್ದಾರಿಯಿಂದ ಅಧಿಕೃತವಾಗಿ ದೂರ ಸರಿದಾಗ, ಈಗಾಗಲೇ ಅಸ್ಥಿರವಾಗಿರುವ ಕಾರ್ಮಿಕ ಕಾನೂನುಗಳ ಉಲ್ಲಂಘನೆ/ಅನುಸರಣೆಯಿಲ್ಲದಿರುವಿಕೆಯ ಸ್ಥಿತಿಯು ಮತ್ತಷ್ಟು ಯಾವ ವಿನಾಶಕಾರಿ ಮಟ್ಟಕ್ಕೆ ಅವನತಿ ಹೊಂದುವುದೆಂದು ಚೆನ್ನಾಗಿ ಊಹಿಸಬಹುದು.
ವಾಸ್ತವತೆಗೆ ಕುರುಡುಗಣ್ಣು
ಮೇಲಿನ ಕಠೋರ ವಾಸ್ತವತೆಗಳನ್ನು ನಿರ್ಲಕ್ಷಿಸಲು ಆದ್ಯತೆ ನೀಡಿ, ಒಳಗೊಳ್ಳುವಿಕೆಯ ಮತ್ತು ಸಾಮಾಜಿಕ ಭದ್ರತಾ ತತ್ವಗಳ ಸಾರ್ವತ್ರಿಕ ವ್ಯಾಪ್ತಿ ಮತ್ತು ವಹಿವಾಟು ಸಾಧ್ಯತೆಯ ಎಲ್ಲಾ ಮಾತುಗಳು, ಇಡೀ ಆರ್ಥಿಕತೆ ಮತ್ತು ಸಮಾಜಕ್ಕೆ ಮೌಲ್ಯವನ್ನು ಸೃಷ್ಟಿಸುವ ದುಡಿಯುವ ಜನಸಾಮಾನ್ಯರಿಗೆ ಕ್ರೂರ ಅಪಹಾಸ್ಯ ವಾಗಿದೆ. ಬಹುತೇಕ ಎಲ್ಲಾ ಕಾರ್ಮಿಕರನ್ನು ಎಲ್ಲಾ ರಕ್ಷಣೆಗಳು ಮತ್ತು ಕಾನೂನುಬದ್ಧ ಹಕ್ಕುಗಳಿಂದ ಹೊರಗಿಡಲು ಎಚ್ಚರಿಕೆಯಿಂದ ರೂಪಿಸಲಾದ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವಾಗ, ಹೊಸ ನೀತಿಯು ಕಾಮಿ೯ಕ-ಕಾನೂನು-ಅನುಸರಣೆಯ ಆಡಳಿತವನ್ನು ಮತ್ತಷ್ಟು ನಿಯಂತ್ರಣ ರಹಿತಗೊಳಿಸುವಿಕೆಗೆ ಉತ್ತೇಜಿಸುತ್ತದೆ ಮತ್ತು ಅದನ್ನು ಸ್ವ-ಪ್ರಮಾಣೀಕರಣ ಮತ್ತು ಸ್ವಯಂಪ್ರೇರಿತ ನಂಬಿಕೆ-ಆಧಾರಿತ ಅನುಸರಣೆಯೊಂದಿಗೆ ಬದಲಾಯಿಸಲು ಪ್ರಸ್ತಾಪಿಸುತ್ತದೆ, ಸಚಿವಾಲಯವನ್ನು ಕೇವಲ ಉದ್ಯೋಗ ಸೌಲಭ್ಯ ಒದಗಿಸುವವನಾಗಿ ಪುನರ್ ಸ್ಥಾನನಿರ್ದೇಶನ ಮಾಡುತ್ತದೆ, ಇದು ಕೆಲಸದ ಇಡೀ ಜಗತ್ತಿನಲ್ಲಿ ಕಾನೂನು ರಹಿತ ಅರಾಜಕತೆಯನ್ನು ಸೃಷ್ಟಿಸುವುದು.
ಕಾಮಿ೯ಕ ಸಂಹಿತೆಗಳನ್ನು ಜಾರಿಗೊಳಿಸಲು ನಿರಾಶಾದಾಯಕ ಹಿಂಬಾಗಿಲ ಪ್ರಯತ್ನ
ನವ ಉದಾರವಾದಿ ವ್ಯವಸ್ಥೆಯ ಅಡಿಯಲ್ಲಿ, ವಿದೇಶಿ ಮತ್ತು ದೇಶೀಯ ಖಾಸಗಿ ಕಾರ್ಪೊರೇಟ್‌ಗಳ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ನಾಲ್ಕು ಕಾರ್ಮಿಕ ಸಂಹಿತೆಗಳ ಕಾರ್ಮಿಕ ವಿರೋಧಿ ತತ್ವಗಳನ್ನು ಸಮರ್ಥಿಸಲು, ಅವರ ಇಚ್ಛೆಯಂತೆ ಕಾಮಿ೯ಕ ಸಂಹಿತೆಗಳನ್ನು ಸಹ ಉಲ್ಲಂಘಿಸಲು ಶಾಶ್ವತ ಮತ್ತು ಮುಕ್ತ ಅಧಿಕಾರ ನೀಡುವ, ಈ ನೀತಿಯು ಒಂದು ನಿರಾಶಾದಾಯಕ ಪ್ರಯತ್ನವಾಗಿದೆ.

ಹೀಗಾಗಿ, ಈ ನೀತಿಯು ಹಳೆಯ ಸ್ಮೃತಿ ಶಾಸ್ತ್ರಗಳ ಪರಿಕಲ್ಪನೆಗಳೊಂದಿಗೆ ಮಿಶ್ರಣಗೊಂಡ ಲೈಸೆಜ್ ಫೇರ್ ನವೀನ ಆವೃತ್ತಿಯಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕಳೆದ 11 ವರ್ಷಗಳಲ್ಲಿ ಆಕ್ರಮಣಶೀಲವಾಗಿ ಪ್ರಾರಂಭಿಸಲಾದ ಪುನರ್ರಚನೆಯ ಪ್ರಯತ್ನಗಳು – ಅದೂ ವಿನಾಶಕಾರಿ ಸ್ವರೂಪದವು, ಈ ನೀತಿಯ ಮೂಲಕ ಪ್ರತಿಧ್ವನಿಸುತ್ತವೆ.
ಶಾಸನವಾಗಿ 5-6 ವರ್ಷಗಳಾಗಿದ್ದರೂ, ಜಂಟಿ ಕಾರ್ಮಿಕ ಚಳುವಳಿಯ ಸತತ ಪ್ರತಿರೋಧದ ಕಾರಣದಿಂದಾಗಿ, 2019-2೦ ರಿಂದಲೂ, ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಸಾಧ್ಯವಾಗದ ಕಾರಣ ಕೇಂದ್ರ ಸರ್ಕಾರವು ಈ ನೀತಿಯ ಮೂಲಕ ಅವುಗಳನ್ನು ಜಾರಿಗೊಳಿಸಲು ಹತಾಶ ಪ್ರಯತ್ನ ನೆಡೆಸಿದೆ. ಶ್ರಮ ಸಂಹಿತೆಗಳ ತತ್ವಗಳನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾದ ಸರ್ಕಾರವು, ಪ್ರಧಾನ ಮಂತ್ರಿಯವರ 2025 ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿನ ತೃತೀಯ ತಲೆಮಾರಿನ ಸುಧಾರಣೆಗಳಿಗೆ ಅನುಗುಣವಾಗಿ ಈ ನೀತಿಯನ್ನು ತಂದಿದೆ. ಹಲವಾರು ರಾಜ್ಯಗಳಲ್ಲಿ ರಾಷ್ಟ್ರವ್ಯಾಪಿಯಾಗಿ ಕೆಲಸದ ಗಂಟೆಗಳನ್ನು ಹೆಚ್ಚಿಸಿರುವುದು, ತಯಾರಕರಿಗೆ ಪ್ರಧಾನಮಂತ್ರಿಯವರ ‘ಧಾಮ್ ಕಮ್-ಧಮ್ ಜ್ಯಾದಾ’ (ಕಡಿಮೆ ವೆಚ್ಚ – ಹೆಚ್ಚು ಗುಣಮಟ್ಟ) ಮಂತ್ರಕ್ಕೆ ಅನುಗುಣವಾಗಿದೆ.
ರಾಜಿ ಸಂಧಾನದ ಪ್ರಕ್ರಿಯೆಯನ್ನು ಬಲಪಡಿಸುವಿಕೆ, ಶೀಘ್ರ ಷನ್ಯಾಯನಿರ್ಣಯ, ವಿವಾದ ನಿವಾರಣಾ ಯಂತ್ರ, ಕೈಗಾರಿಕಾ ಸಂಬಂಧಗಳು, ಸಂಘ ಕಟ್ಟುವ ಸ್ವಾತಂತ್ರ್ಯದ ಹಕ್ಕು, ಸಾಮೂಹಿಕ ಚೌಕಾಸಿಯ ಹಕ್ಕು, ನ್ಯಾಯೋಚಿತ/ಬದುಕುಳಿಯು ವೇತನ, ಉದ್ಯೋಗದಲ್ಲಿ ಹೆಚ್ಚುತ್ತಿರುವ ಅಸ್ಥಿರತೆಯನ್ನು ನಿಭಾಯಿಸುವಿಕೆ, ಗಿಗ್/ಅಪ್-ಆಧಾರಿತ ಕಾರ್ಮಿಕರ, ಅಸಂಘಟಿತ ಕಾರ್ಮಿಕರ ಸೇವಾ ಷರತ್ತುಗಳು, ಮತ್ತು ಸಂವಿಧಾನದ ನಾಾ ನಿರ್ದೇಶಕ ತತ್ವಗಳನ್ನು ಜಾರಿಗೊಳಿಸುವ ಯೋಜನೆಯ ಅಂಶಗಳನ್ನು ತನ್ನ ದಮನಕಾರಿ ಕಾರ್ಪೊರೇಟ್ ವಿಧೇಯತೆಯ ಪ್ರಕ್ರಿಯೆಯನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಜಾಗರೂಕತೆಯಿಂದ ಬಿಟ್ಟುಬಿಡಲಾಗಿದೆ.
ತ್ರಿಪಕ್ಷೀಯತೆ ಅಪಾಯದಲ್ಲಿ
ಭಾರತೀಯ ಕಾಮಿ೯ಕ ಸಮ್ಮೇಳನದ ತ್ರಿಪಕ್ಷೀಯ ವ್ಯವಸ್ಥೆ, ತ್ರಿಪಕ್ಷೀಯ ಸಲಹಾ ಮಂಡಳಿಗಳು, ಕಾನೂನುಬದ್ಧ ಸಲಹಾ ಸಮಿತಿಗಳು ಎಲ್ಲವನ್ನೂ ಬದಿಗಿರಿಸಲಾಗಿದೆ ಮತ್ತು ಕಾಮಿ೯ಕ ಸಂಹಿತೆಗಳಲ್ಲಿ ನಿಗದಿಪಡಿಸಿದ ಇತರ ಸಂರಚನೆಗಳನ್ನು ಮತ್ತು ಶ್ರಮ ಸಮಸ್ಯೆಗಳ ಆಡಳಿತದಲ್ಲಿ ಕಾರ್ಮಿಕರ ಧ್ವನಿಯನ್ನು, ಪಾತ್ರವನ್ನು ಕನಿಷ್ಠಗೊಳಿಸಲು ಪ್ರಸ್ತಾಪಿಸಲಾಗಿದೆ. ಕೇಂದ್ರ ಕಾರ್ಮಿಕ ಸಂಘಟನೆಗಳ ಸತತ ಒತ್ತಡ ಮತ್ತು ಸಂಸದೀಯ ಸ್ಥಾಯಿ ಸಮಿತಿಯ ಟೀಕೆಗಳ ಹೊರತಾಗಿಯೂ, ಕಳೆದ 11 ವರ್ಷಗಳಿಂದ ಭಾರತೀಯ ಕಾಮಿ೯ಕ ಸಮ್ಮೇಳನವನ್ನು ನಡೆಸದ ಮೋದಿ ಸರ್ಕಾರದ ದಾಖಲೆಯನ್ನು ಸಹಾ ಈ ನೀತಿಯು ಪರಿಹರಿಸಿಲ್ಲ.
ಬದಲಿಗೆ, 1942 ರಿಂದಲೂ ಅಸ್ತಿತ್ವದಲ್ಲಿರುವ ಭಾರತೀಯ ಕಾರ್ಮಿಕ ಸಮ್ಮೇಳನದ ಸಹಮತ-ಆಧಾರಿತ ತ್ರಿಪಕ್ಷೀಯ ವೇದಿಕೆಯ ದೀರ್ಘಕಾಲೀನ ಪ್ರಕ್ರಿಯೆಯನ್ನು ಈ ನೀತಿಯ ಮೂಲಕ ಬದಿಗಿರಿಸಲಾಗಿದೆ ಮತ್ತು ನೀತಿಯ ಅನುಷ್ಠಾನದ ಜಂಟಿ ಪರಿಶೀಲನೆಗೆಂದು ಕರೆಯಲಾಗುವ ವಾರ್ಷಿಕ ಸಮ್ಮಿಲನ ಸಮಾವೇಶ ಸಂಘಟಿಸಲು ಪ್ರಸ್ತಾಪಿಸಲಾಗಿದೆ. ರಾಷ್ಟ್ರೀಯ ಕಾಮಿ೯ಕ ಮತ್ತು ಉದ್ಯೋಗ ನೀತಿ ಅನುಷ್ಠಾನ ಮಂಡಳಿ (NCLPI ಮಂಡಳಿ), ರಾಜ್ಯ ಕಾರ್ಮಿಕ ಮತ್ತು ಉದ್ಯೋಗ ಮಿಷನ್ಗಳು; ಜಿಲ್ಲಾ ಶ್ರಮ ಮತ್ತು ಸಂಪನ್ಮೂಲ ಕೇಂದ್ರಗಳ (DLERC ಗಳ) ಅನುಷ್ಠಾನ ರಚನೆಯಲ್ಲಿ ಕಾರ್ಮಿಕ ಸಂಘಟನೆಗಳ ಪ್ರಾತಿನಿಧ್ಯವನ್ನು ಪ್ರಸ್ತಾಪಿಸಿಲ್ಲ. ತ್ರಿಪಕ್ಷೀಯ ಯಾಂತ್ರಿಕತೆಯನ್ನು ಕಾಮಿ೯ಕ ಕ್ಷೇತ್ರದಲ್ಲಿ ನವ ಉದಾರವಾದಿ ಆಡಳಿತವನ್ನು ಮುಂದುವರೆಸಲು ಏಕಪಕ್ಷೀಯತೆಯಿಂದ ಬದಲಾಯಿಸಲಾಗಿದೆ.
ಒಕ್ಕೂಟವಾದಿ ವ್ಯವಸ್ಥೆಯ ಮೇಲಿನ ದಾಳಿ
ಕಾರ್ಮಿಕ ವಿಷಯಗಳನ್ನು ಸಮವರ್ತಿ ಪಟ್ಟಿಯಲ್ಲಿ ಸೇರಿಸಿರುವ ಭಾರತದ ಸಂವಿಧಾನದ ಒಕ್ಕೂಟವಾದಿ ವ್ಯವಸ್ಥೆಯ ಮೂಲಭೂತ ಅಡಿಪಾಯವನ್ನು ಸಹ ನೀತಿಯು ಕಡೆಗಣಿಸಿದೆ. ಕಾಮಿ೯ಕ ಮತ್ತು ಉದ್ಯೋಗ ನೀತಿ ಮೌಲ್ಯಮಾಪನ ಸೂಚ್ಯಂಕ (LPEI) ಮೂಲಕ ರಾಜ್ಯಗಳನ್ನು ಮಾನದಂಡಕ್ಕೆ ಒಳಪಡಿಸಿ ಮತ್ತು ಸ್ವತಂತ್ರ ತೃತೀಯ ಪಕ್ಷದ ವಿಮರ್ಶೆಗಳ ಮೂಲಕ ನೀತಿಯ ಅನುಷ್ಠಾನವನ್ನು ಕೇಂದ್ರೀಕರಿಸುವ ಮೂಲಕ ನವ ಉದಾರವಾದಿ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಕಾರ್ಮಿಕ ಕಾನೂನುಗಳ ಆಡಳಿತವನ್ನು ಪುನರ್ರಚಿಸಲು ಒಕ್ಕೂಟವಾದಿ ವ್ಯವಸ್ಥೆಯನ್ನು ಘೋರವಾಗಿ ನಾಶಪಡಿಸಲಾಗುತ್ತಿದೆ.
ಉತ್ಪಾದನೆ-ಸಂಬಂಧಿತ ಪ್ರೋತ್ಸಾಹದ ಮೂಲಕ ಮಾಲಿಕರಿಗೆ ಮತ್ತು ರಾಜ್ಯಗಳು ಮಾಡುವ ಶ್ರಮ ಆಡಳಿತ ಸುಧಾರಣೆಗಳಿಗೆ ಸಂಬಂಧಿಸಿದ ರರಾಜ್ಯಗಳಿಗೆ ನೆರವು ಧನದ ಮೂಲಕ, ಮೋದಿ ನೇತೃತ್ವದ ಸರ್ಕಾರದ ಸುಧಾರಣೆಗಳ ಪ್ರೋತ್ಸಾಹದ ಮುಂದುವರಿಕೆಯನ್ನು ಈ ನೀತಿಯು ಪ್ರಾರಂಭಿಸುತ್ತದೆ. ಈ ನೀತಿಯು ತತ್ಕ್ಷಣದ 2025-27, ಮಧ್ಯಮ-ಅವಧಿಯ 2027-3೦ ಮತ್ತು 2030ರ ನಂತರದ ದೀರ್ಘ-ಅವಧಿಯ ಹಂತದ ಮೂರು-ಹಂತದ ಅನುಷ್ಠಾನವನ್ನು ಪ್ರಸ್ತಾಪಿಸುತ್ತದೆ, ಇದು ಈ ಕೇಂದ್ರ ಸರ್ಕಾರದ ಅವಧಿಯನ್ನು ಮೀರಿ ವಿಸ್ತರಿತವಾಗಿದೆ. ಎಲ್ಲಾ ಮೂರು ಹಂತಗಳನ್ನು ಬೆಂಬಲಿಸಲು, ಆರ್ಥಿಕ ಸುಸ್ಥಿರತೆಗಾಗಿ ಕೇಂದ್ರ, ರಾಜ್ಯ ಮತ್ತು ಖಾಸಗಿ ಪಾಲುದಾರರಿಂದ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಶ್ರಮ ಸುಧಾರಣಾ ನಿಧಿಯನ್ನು ಸೃಷ್ಟಿಸಲು ಆದ್ಯತೆ ನೀಡಲು ಇದು ಪ್ರಸ್ತಾಪಿಸುತ್ತದೆ.
ಹಳೆಯ ಸ್ಮೃತಿ-ಆಧಾರಿತ ಆಡಳಿತ ತತ್ವಶಾಸ್ತ್ರ
ಹಳೆಯ ಸ್ಮೃತಿಶಾಸ್ತ್ರಗಳ ಆಧಾರದ ಮೇಲಿನ ಶ್ರಮ ಧರ್ಮವು ಸ್ವತಃ ಭಾರತದ ಸಂವಿಧಾನದ ತ್ರಿವಳಿ ಆಧಾರಗಳಾದ- ಪ್ರಸ್ತಾವನೆ, ಮೂಲಭೂತ ಹಕ್ಕುಗಳು ಮತ್ತು ನಾಮ ನಿರ್ದೇಶಕ ತತ್ವಗಳು ಮತ್ತು ಅದರ ಆಧಾರದ ಮೇಲಿರುವ ಆಧುನಿಕ ಪ್ರಜಾಪ್ರಭುತ್ವ ಶ್ರಮ ಕಾನೂನು ಆಡಳಿತಕ್ಕೆ ವಿರುದ್ಧವಾದ ಅತ್ಯಂತ ಪ್ರತಿಗಾಮಿ-ಕಾರ್ಮಿಕ ವಿರೋಧಿ ಪರಿಕಲ್ಪನೆಯಾಗಿದೆ. ಕಾರ್ಮಿಕ ಕ್ಷೇತ್ರದ ಸಾಂವಿಧಾನಿಕ ಪ್ರಜಾಪ್ರಭುತ್ವೀಯ ಆಡಳಿತವನ್ನು, RSS/ಬಿಜೆಪಿಯ ಹಿಂದುತ್ವದ ರಾಜಕೀಯ ಯೋಜನೆಯ ತಾತ್ವಿಕ ವಿಚಾರಧಾರೆಯ ದೃಷ್ಟಿಕೋನದ ಆಧಾರದ ಮೇಲೆ ನಿರ್ಮಿತವಾದ ಹಳೆಯ ಅಮಾನವೀಯ – ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ನಾರದ ಸ್ಮೃತಿ, ಶುಕ್ರನೀತಿ, ಅರ್ಥಶಾಸ್ತ್ರ ಮತ್ತು ಸುಲ್ಕ ನ್ಯಾಯದ ಶಾಸ್ತ್ರಗಳ ಆಧಾರಿತ ರಾಜ ಧರ್ಮದ ತತ್ವಶಾಸ್ತ್ರ ಕೇಂದ್ರತವಾಗಿ ಬದಲಾಯಿಸುವ ಒಂದು ಸಂಪೂರ್ಣವಾಗಿ ಪ್ರತಿಗಾಮಿ ಪ್ರಯತ್ನವಾಗಿದೆ.
ಮಹಿಳೆಯರು ಸ್ವಾತಂತ್ರ್ಯಕ್ಕೆ ಅಹ೯ರಲ್ಲ ಮತ್ತು ವರ್ಣ (ಜಾತಿ) ಆಧಾರಿತ ಉದ್ಯೋಗ ಮತ್ತು ಬಲವಂತದ ಶ್ರಮ ಪ್ರತಿಪಾದಿಸಿದ ಮನುಸ್ಮೃತಿಯು- ಆಧುನಿಕ ಪ್ರಜಾಪ್ರಭುತ್ವೀೀ ಗಣರಾಜ್ಯದ ಸಾಂವಿಧಾನಿಕತೆ ಮತ್ತು ಆಡಳಿತದ ತತ್ವಶಾಸ್ತ್ರಕ್ಕೆ ವಿರುದ್ಧವಾಗಿದೆ. ಈ ನೀತಿಯನ್ನು ರೂಪಿಸುವಲ್ಲಿ ಮನುಧಮ೯ ಶಾಸ್ತ್ರ ಆಧಾರಿತ ರಾಜ ಧರ್ಮವನ್ನು ಮೂಲವಾಗಿ ತೆಗೆದುಕೊಳ್ಳಲಾಗಿದೆ. ಇದು ಸ್ವತಃ ನೀತಿಯು ಎಷ್ಟು ಕಾರ್ಮಿಕ ವಿರೋಧಿ, ಜನ ವಿರೋಧಿ ಮತ್ತು ಫಾಸಿಸ್ಟ್ ವಿಷಯವನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತದೆ.
ನೀತಿಯನ್ನು ರದ್ದುಗೊಳಿಸಿ – ಸಂಹಿತೆಗಳನ್ನು ರದ್ದುಗೊಳಿಸಿ
ನಿಯಂತ್ರಣ ಮತ್ತು ತಪಾಸಣೆಯ ಆಧಾರಿತ ಅನುಸರಣೆಯಿಂದ ಉದ್ಯೋಗ ಸೌಲಭ್ಯ ಒದಗಿಸುವ ಮತ್ತು ಮಾಲಿಕರಿಗೆ ಮುಕ್ತ ಅಧಿಕಾರ ನೀಡುವಂತಹ, ಭಾರತದ ಶ್ರಮ ಆಡಳಿತದಲ್ಲಿ ಮೂಲಭೂತ ಬದಲಾವಣೆ ತರಲು ಬಯಸುವ ಶ್ರಮ ಶಕ್ತಿ ನೀತಿ 2025 ಅನ್ನು ಪ್ರತಿರೋಧ ಮತ್ತು ನಿರಾಕರಣೆಯ ಮೂಲಕ ಎದುರಿಸಬೇಕು. ಇನ್ನಷ್ಟು, ಮನುಸ್ಮೃತಿ ಮತ್ತು ಇತರ ಹಳೆಯ ಸ್ಮೃತಿಗಳ ಆಧಾರದ ಮೇಲೆ ಶ್ರಮ ಧರ್ಮದಿಂದ ಸ್ಫೂರ್ತಿ ಪಡೆಯುವ ಈ ನೀತಿಯ ಹೇಳಿಕೆಯನ್ನು ಸಾಂವಿಧಾನಿಕ ಮೌಲ್ಯಗಳು ಮತ್ತು ತತ್ವಶಾಸ್ತ್ರದ ಮೂಲಕ ಎದುರಿಸಬೇಕು.
ಕಟ್ಟುನಿಟ್ಟಿನ ನಿಯಮಗಳು, ಅನುಸರಣೆ ಮತ್ತು ತಪಾಸಣೆಗಳ ಮೂಲಕ ಕಲ್ಯಾಣ ಪ್ರಭುತ್ವದ ಸಾಂವಿಧಾನಿಕ ತತ್ವಶಾಸ್ತ್ರದ ಆಧಾರದ ಮೇಲೆ ಪ್ರಜಾಪ್ರಭುತ್ವ ಆಡಳಿತವನ್ನು ಖಚಿತಪಡಿಸುವ ಮತ್ತು ತ್ರಿಪಕ್ಷೀಯ ವ್ಯವಸ್ಥೆಯ ಆಧಾರದ ಮೇಲೆ ಉತ್ತಮ ಕಾರ್ಮಿಕ-ಕೇಂದ್ರಿತ ಶ್ರಮ ಆಡಳಿತವನ್ನು ನೀಡುವ ನೀತಿಯನ್ನು ಒತ್ತಾಯಿಸಬೇಕು. ಕಾರ್ಮಿಕ ಸಂಹಿತೆಗಳು ಮತ್ತು ಈ ನೀತಿಯನ್ನು ರದ್ದುಗೊಳಿಸುವುದು ಅದಕ್ಕೆ ಅನಿವಾರ್ಯ ಅವಶ್ಯಕತೆಯಾಗಿದೆ.
ಶ್ರಮ ಶಕ್ತಿ ನೀತಿ 2025 ಮತ್ತು ಕಾಮಿ೯ಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಕಾರ್ಮಿಕರ ಬೇಡಿಕೆಗಳಿಗೆ ಅನುಗುಣವಾಗಿ ಸಮಗ್ರ ಶ್ರಮ ನೀತಿಯನ್ನು ರೂಪಿಸಲು ಭಾರತೀಯ ಕಾಮಿ೯ಕ ಸಮ್ಮೇಳನವನ್ನು (ILC) ಕರೆಯಬೇಕು ಎಂದು CITU ಒತ್ತಾಯಿಸುತ್ತದೆ.
ಇದನ್ನೂ ನೋಡಿ: ದಣಿವರಿಯದೆ ದುಡಿಯುವ ಮಹಿಳೆಗೆ ಕನಿಷ್ಠ ಕೂಲಿ ಯಾಕಿಲ್ಲ? Janashakthi Media
