ಬಾಗಲಕೋಟೆ: ದೇಗುಲ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಲಿತ ಯುವಕನನ್ನ ಕಂಬಕ್ಕೆ ಕಟ್ಟಿ ಥಳಿಸಿದ್ದಲ್ಲದೆ ದಲಿತರಿಗೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತರಪಡಿಸಿದ್ದು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಉಗಲವಾಟ ಗ್ರಾಮದ ಅರ್ಜುನ್ ಮಾದರ(28) ಥಳಿತಕ್ಕೊಳಗಾದ ಯುವಕ. ಈ ಸಂಬಂಧ ಮುದ್ದಿನಗೌಡ ದ್ಯಾಮನಗೌಡ ಸತ್ಯನ್ನವರ, ಮಂಜುನಾಥ ಲೆಂಕೇಶ ಮೂಲಿಮನಿ, ತುಳಸಿಗೇರಪ್ಪ ಕಾಮಪ್ಪ ತಳವಾರ ಸೇರಿದಂತೆ 21 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ದೇವಾಲಯ
ಏನಿದು ಘಟನೆ?:
ಸೆ.10ರಂದು ಅರ್ಜುನ ಬಸಪ್ಪ ಮಾದರ(28) ಎಂಬ ಯುವಕ ಉಗಲವಾಟ ಗ್ರಾಮದ ದೇವಾಲಯ ಒಳಗೆ ಹೋಗಿ ದೇವರಿಗೆ ನಮಸ್ಕಾರ ಮಾಡಿದ್ದಾನೆ. ಇದೇ ವೇಳೆ ಅಲ್ಲಿಯೇ ಇದ್ದ ಕೆಲವರು ನೀನು ದಲಿತ ಇದ್ದೀಯಾ ಯಾಕೆ ಗುಡಿಯ ಒಳಗೆ ಹೋಗಿ ನಮಸ್ಕಾರ ಮಾಡಿದಿಯಾ ಎಂದು ಆತನೊಂದಿಗೆ ವಾಗ್ವಾದ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಯುವಕನೊಬ್ಬನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಮಾಡಿದ ದುಷ್ಕರ್ಮಿಗಳು; ಎಫ್‌ಐಆರ್ ದಾಖಲು
ಈ ಸಂದರ್ಭದಲ್ಲಿ 20ಕ್ಕೂ ಅಧಿಕ ಜನರು ಸೇರಿ ಆತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಸಂಬಂಧ 21 ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಗ್ರಾಮಕ್ಕೆ ಎಸ್ಪಿ ಭೇಟಿ
ಈ ಘಟನೆ ಮಾಹಿತಿ ತಿಳಿದು ಬಾಗಲಕೋಟೆ 2.2. ಅಮರನಾಥ ರೆಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದರು. ಇತ್ತ ವಿಷಯ ತಿಳಿದ ದಲಿತ ಮುಖಂಡರು ಉಗಲವಾಟ ಗ್ರಾಮಕ್ಕೆ ಆಗಮಿಸಿ ಗ್ರಾಮದ ದಲಿತ ಮುಖಂಡರ ಜೊತೆ ಚರ್ಚೆ ನಡೆಸಿದರು. ನಂತರ ಈ ಘಟನೆಗೆತೀವ್ರ ಆಕ್ರೋಶವ್ಯಕ್ತಪಡಿಸಿದರು. ಅಲ್ಲದೇ ಘಟನೆ ಖಂಡಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಪಾದಯಾತ್ರೆ ಹೊರಡಲು ನಿರ್ಧಾರ ಮಾಡಿದರು.
ಇದನ್ನೂ ನೋಡಿ: ಕರ್ನಾಟಕದ ಜನ ಚಳುವಳಿಯಲ್ಲಿ ಸೀತಾರಾಂ ಯೆಚೂರಿ Janashakthi Media