ಸರಿಯಾಗಿ ಮೂರು ದಶಕಗಳ ಹಿಂದೆ 1991ರಲ್ಲಿ ಹರಿಯಬಿಟ್ಟ ನವ-ಉದಾರವಾದಿ ಆರ್ಥಿಕ ಸುಧಾರಣೆಗಳು ದೇಶದಲ್ಲಿ ಆಳವಾದ ಬದಲಾವಣೆಗಳನ್ನು ತಂದಿವೆ- ಅವು ವಿವಿಧ ಜನವಿಭಾಗಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಿದೆ. ದುಡಿಯುವ ಜನವಿಭಾಗಗಳ ಮೇಲೆ ಅದರಿಂದಾದ ಪರಿಣಾಮಗಳೇನು, ಇದನ್ನು ಎಡಪಂಥೀಯರು ಹೇಗೆ ಕಾಣುತ್ತಾರೆ, ಈ ಕುರಿತು ಫ್ರಂಟ್‌ಲೈನ್ ಪಾಕ್ಷಿಕ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಯವರ ಸಂದರ್ಶನದ ಎರಡನೇ ಭಾಗವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.
ಸಂದರ್ಶನ: ಟಿ.ಕೆ.ರಾಜಲಕ್ಷ್ಮಿ
ಭಾರತದ ಆರ್ಥಿಕ ಸುಧಾರಣಾ ಪ್ರಕ್ರಿಯೆ ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಪ್ರಾಬಲ್ಯಕ್ಕೆ ಒಳಗಾಗಿರುವ ನವ ಉದಾರವಾದದ ಸೈದ್ಧಾಂತಿಕ ನಿಲುಮೆಯ ಅಭಿನ್ನ ಅಂಗ. ಅದರ ಉದ್ದೇಶ, ಬಂಡವಾಳಶಾಹಿ ವ್ಯವಸ್ಥೆಯ ಅತ್ಯಂತ ಹೀನ ಸುಲಿಗೆಕೋರ ಚಾರಿತ್ರ್ಯವನ್ನು, “ಮೃಗೀಯ ಶಕ್ತಿ”ಯನ್ನು ಹರಿಯಬಿಟ್ಟು ಲಂಗುಲಗಾಮಿಲ್ಲದೆ ಲಾಭಗಳನ್ನು ಗರಿಷ್ಟ ಪ್ರಮಾಣಕ್ಕೆ ಏರಿಸುವುದು. 2014 ರಿಂದೀಚೆಗೆ ಆಗಿರುವುದೇನೆಂದರೆ ಕಾರ್ಪೊರೇಟ್ ಹಿತಾಸಕ್ತಿ ಮತ್ತು ಕೋಮು ರಾಜಕೀಯದ ಭ್ರಷ್ಟಮಿಶ್ರಣದ ಹೊರಹೊಮ್ಮುವಿಕೆ. ಇದು, ರಾಷ್ಟ್ರೀಯ ಆಸ್ತಿಗಳ ವ್ಯಾಪಕ ಲೂಟಿ, ಸಾರ್ವಜನಿಕ ವಲಯಗಳು, ಸಾರ್ವಜನಿಕ ಬಳಕೆಗಳು ಮತ್ತು ಖನಿಜ ಸಂಪತ್ತುಗಳ ಬೃಹತ್ ಖಾಸಗೀಕರಣದ ಮೂಲಕ ಲಾಭವನ್ನು ಗರಿಷ್ಟ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತದೆ. ಇದು ಹಿಂದೆಂದೂ ಕೇಳರಿಯದ ಮಟ್ಟದ ಚಮಚಾ ಬಂಡವಾಳಶಾಹಿ ಮತ್ತು ರಾಜಕೀಯ ಭ್ರಷ್ಟಾಚಾರಕ್ಕೆ ಎಡೆ ಮಾಡುತ್ತದೆ. ಇದರ ಜೊತೆಯಲ್ಲಿಯೇ, ಜನರ ಪ್ರಜಾಸತ್ತಾತ್ಮಕ ಹಕ್ಕುಗಳು, ನಾಗರಿಕ ಸ್ವಾತಂತ್ರ‍್ಯ ಮತ್ತು ಮಾನವ ಹಕ್ಕುಗಳ ಮೇಲೆ ನಿರ್ದಯ ದಾಳಿ ನಡೆಯುತ್ತದೆ ಎನ್ನುತ್ತಾರೆ ಸೀತಾರಾಂ ಯೆಚುರಿಯವರು ಈ ಸಂದರ್ಶನದಲ್ಲಿ…
ಭಾರತದಲ್ಲಿ ಸುಧಾರಣಾ ದಶಕಗಳು ಜನಕೇಂದ್ರಿತ ವಾಗುವ ಬದಲು ಲಾಭ ಕೇಂದ್ರಿತವಾಗಿ ಇರುವುದರಿಂದ ಆರ್ಥಿಕ ಅಸಮಾನತೆಗಳು ವೇಗವಾಗಿ ಹೆಚ್ಚಿವೆ. ಪ್ರಧಾನಮಂತ್ರಿ ಮೋದಿಯವರು ಸಂಪತ್ತಿನ ಉತ್ಪಾದಕರನ್ನು ಗೌರವಿಸುವಂತೆ ಉತ್ತೇಜಿಸುತ್ತಾರೆ. ಸಂಪತ್ತು ಎಂದರೆ ದುಡಿಯುವ ವರ್ಗ ಉತ್ಪಾದಿಸುವ ಮೌಲ್ಯಗಳನ್ನು ನಗದೀಕರಿಸುವುದೇ ಸಂಪತ್ತು. ನಮ್ಮ ಜನತೆಯ ಒಟ್ಟಾರೆ ಸಂಪತ್ತಿಗಾಗಿ ಮೌಲ್ಯ ಉತ್ಪಾದಕರನ್ನು ಗೌರವಿಸಬೇಕಿರುವುದು ಅಗತ್ಯ.
ಯೋಜನಾ ಆಯೋಗವನ್ನು ರದ್ದುಪಡಿಸುತ್ತಲೇ ಮೋದಿ ಸರ್ಕಾರವು ನಮ್ಮ ದೇಶ ಸ್ವಾತಂತ್ರö್ಯಪಡೆದ ಕಾಲದಿಂದಲೂ ಬಡತನ ಮಟ್ಟವನ್ನು ಅಳೆಯಲು ಬಳಸುತ್ತಿದ್ದ ಮೂಲಭೂತ ಪೌಷ್ಠಿಕಾಂಶ ಪ್ರಮಾಣವನ್ನು ಪ್ರತಿಯೊಬ್ಬರಿಗೂ ಪ್ರತಿದಿನದಂತೆ 2200 ಕ್ಯಾಲೋರಿಗಳು ಮತ್ತು ನಗರ ಭಾರತದಲ್ಲಿ ಶೇ. 2100 ಕ್ಯಾಲೋರಿ ಎಂದು £ಗದಿಗೊಳಿಸಿತ್ತು. ರಾಷ್ಟ್ರೀಯ ಸ್ಯಾಂಪಲ್ ಸರ್ವೆಯು, ಈ ಮಾನದಂಡದ ಪ್ರಕಾರ 1993-94 ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇಕಡ 50 ಮತ್ತು ನಗರ ಪ್ರದೇಶಗಳಲ್ಲಿ ಶೇ. 57ರಷ್ಟು ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ. 2011-12ರ ಓSS ಪ್ರಕಾರ, ಈ ಪ್ರಮಾಣ ಶೇ. 68 ಮತ್ತು ಶೇ. 65 ರಷ್ಟಿದೆ. 2017-18 ರಲ್ಲಿ ಬಂದ ಓSS ನ ವರದಿಯನ್ನು ಮೋದಿ ಸರ್ಕಾರವು ನಮ್ಮ ವಿಶ್ವ ಪ್ರಶಂಸಿತ ಮಾಹಿತಿ ಸಂಚಯ(ಆಚಿಣಚಿ bಚಿse) ಸಂಸ್ಥೆಗಳನ್ನು ನಾಶ ಮಾಡುತ್ತದೆ. ಮಾಧ್ಯಮಗಳಿಗೆ ಸೇರಿದ ಅಂಕಿ ಅಂಶಗಳು ಗ್ರಾಮೀಣ ಭಾರತದಲ್ಲಿ ನೈಜ್ಯ ಉಪಭೋಗ ವೆಚ್ಚವು (ಕೇವಲ ಆಹಾರ ಮಾತ್ರವಲ್ಲ) ಶೇ. 9 ರಷ್ಟು ಕುಸಿದಿದೆ ಎಂದು ತೋರಿಸಿವೆ. ಸಾಂಕ್ರಾಮಿಕಕ್ಕೆ ಮುನ್ನವೇ ಗ್ರಾಮೀಣ ಮತ್ತು ನಗರ ಭಾರತದಲ್ಲಿ ನಿಚ್ಚಳ ಬಡತನವು ಹಿಂದೆAದೂ ಕಂಡರಿಯದ ಪ್ರಮಾಣದಲ್ಲಿ ಏರಿದೆ. ನಂತರದಲ್ಲಿ, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಇದನ್ನು ಓದಿ: ‘ಆರ್ಥಿಕ ಸುಧಾರಣೆ’ಗಳ ಮೂರು ದಶಕಗಳು
ಇಂದು ಭಾರತವನ್ನು “ಜಾಗತಿಕ ಹಸಿವು ಸೂಚ್ಯಂಕ”ವು “ಗಂಭೀರ ವಿಧ”ದಲ್ಲಿ ಸೇರಿಸಿದೆ. ಅಪೌಷ್ಟಿಕತೆ, ಅದರಲ್ಲೂ ಮಕ್ಕಳಲ್ಲಿ, ಶಿಶು ಮರಣ ಮತ್ತು ಇನ್ನಿತರ ಸೂಚ್ಯಾಂಕಗಳಲ್ಲಿ ಕಳವಳಕಾರಿ ಹೆಚ್ಚಳ ಕಾಣಬರುತ್ತಿದೆ ಎಂಬುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ-5 ಸೂಚಿಸುತ್ತಿದೆ. ಇತ್ತೀಚಿಗೆ, ಸುಸ್ಥಿರ ಅಭಿವೃದ್ಧಿ ಗುರಿಗಳ ಜಾಗತಿಕ ಸೂಚ್ಯಂಕದಲ್ಲಿ ಭಾರತದ ಸ್ಥಾನವನ್ನು 2 ಶ್ರೇಯಾಂಕಗಳಷ್ಟು ಕೆಳಗಿಳಿಸಲಾಗಿದೆ. ಕಳೆದ ಒಂದು ವಷÀðದಲ್ಲಿ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನ ಸಂಖ್ಯೆಯು ಅರವತ್ತು ಮಿಲಿಯನ್ ಯಿಂದ 134 ಮಿಲಿಯನ್ ಗೆ ಹೆಚ್ಚಿದೆ ಎಂದು ಪ್ಯು ಸಂಶೋಧನಾ ಕೇಂದ್ರವು ಅಂದಾಜು ಮಾಡಿದೆ. ಕಳೆದ ವಷÀðದಲ್ಲಿ ಜಾಗತಿಕ ಬಡವರ ಸಂಖ್ಯೆ ಹೆಚ್ಚಳದಲ್ಲಿ ಭಾರತದ ಕೊಡುಗೆ ಶೇ. 57.3 ರಷ್ಟಿದೆ. ಶೇ. 59.3 gಷ್ಟು ದೊಡ್ಡ ಪ್ರಮಾಣದ ನಮ್ಮ ಮಧ್ಯಮ ವರ್ಗಗಳು ಬಡತನಕ್ಕೆ ಕುಸಿದಿವೆ.
ಯು.ಪಿ.ಎ. ಮೇಲೆ ಎಡ ಪಕ್ಷಗಳ ಒತ್ತಡ
ಯು.ಪಿ.ಎ. ಸರ್ಕಾರದ ಅವಧಿಯಲ್ಲಿ ಎಡ ಪಕ್ಷಗಳ ಒತ್ತಡದಿಂದಾಗಿ ಸುಧಾರಣಾ ಪ್ರಕ್ರಿಯೆಗಳನ್ನು ಸ್ವಲ್ಪ ಸಮಯ ತಡೆಹಿಡಿಯಲಾಗಿತ್ತು ಎಂದು ಹೇಳಲಾಗಿತ್ತು. ಯು.ಪಿ.ಎ. ಸರ್ಕಾರದ ನೀತಿಗಳು ನವ ಉದಾರವಾದದಿಂದ ಗಮನಾರ್ಹವಾಗಿ ಭಿನ್ನವಾಗಿತ್ತೇ?
ಯೆಚುರಿ: ಯು.ಪಿ.ಎ. ಸರ್ಕಾರವು ಆರ್ಥಿಕ ಸುಧಾರಣೆಗಳನ್ನು ತಡೆಹಿಡಿದಿತ್ತು ಎಂದಲ್ಲ. ನವ ಉದಾರವಾದ ಸುಧಾರಣಾ ನೀತಿಗಳನ್ನು ಮುಂದುವರಿಸಲು ಸಮಾನ ಕನಿಷ್ಠ ಕಾರ್ಯಕ್ರಮವು ಒಂದು ನೀಲ ನಕ್ಷೆಯನ್ನು ತಯಾರಿಸಿದ್ದರಿಂದ ಎಡ ಪಕ್ಷಗಳು ಯು.ಪಿ.ಎ. ಸರಕಾರಕ್ಕೆ ಬಾಹ್ಯ ಬೆಂಬಲ ನೀಡಿದವು. ಭಾರತದ ಗಣತಂತ್ರದ ಧರ್ಮ ನಿರಪೇಕ್ಷ ಗುಣಲಕ್ಷಣಗಳನ್ನು ರಕ್ಷಿಸುವ ಹಿತಾಸಕ್ತಿಯಿಂದ ಮತ್ತು ಕೋಮುವಾದಿ ಶಕ್ತಿಗಳು ಪ್ರಭುತ್ವದ ಅಧಿಕಾರ ಹಿಡಿಯುವುದನ್ನು ತಡೆಯುವ ಸಲುವಾಗಿ ಈ ಬೆಂಬಲ ನೀಡಲಾಗಿತ್ತು.
ನಿಜ, ಎಡ ಪಕ್ಷಗಳ ಒತ್ತಡದಿಂದಾಗಿಯೇ ಒಂದು ಸಮಾನ ಕನಿಷ್ಟ ಕಾರ್ಯಕ್ರಮ ರಚಿಸಲಾಯಿತು ಮತ್ತು ಇದರಲ್ಲಿ ಒಂದು ಹೆಗ್ಗುರುತಿನ ಕಾಯಿದೆಯಾದ ಮನರೇಗಾ, ಅರಣ್ಯ ಹಕ್ಕುಗಳ ಕಾಯ್ದೆ, ಆಹಾರದ ಹಕ್ಕು, ಭೂಸ್ವಾಧೀನಕ್ಕೆ ಸಂಬಂಧಿಸಿದ ಹೊಸ ಕಾನೂನು, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಮತ್ತು ಇಂತಹ ಹಲವು ಕ್ರಮಗಳಿದ್ದವು. ನಮ್ಮ ಒತ್ತಡ ಇಲ್ಲದಿದ್ದಲ್ಲಿ ಇವುಗಳು ಪ್ರಾಯಶಃ ಬೆಳಕಿಗೆ ಬರುತ್ತಲೇ ಇರಲಿಲ್ಲ. ಸಂವಿಧಾನವು ತನ್ನ ಎಲ್ಲಾ ನಾಗರಿಕರಿಗೆ ಕೆಲವು ಮೂಲಭೂತ ಹಕ್ಕುಗಳು ಮತ್ತು ಗ್ಯಾರಂಟಿಗಳನ್ನು ನೀಡುತ್ತದೆ. ಭಾರತವು ಅಭಿವೃದ್ಧಿಯಾದಂತೆ, ಈ ಹಕ್ಕುಗಳು ಮತ್ತು ಗ್ಯಾರಂಟಿಗಳು ವಿಸ್ತಾರವಾಗುತ್ತಾ ಮುಂದುವರೆಯಲೇ ಬೇಕು ಎಂಬುದು ಎಡ ಪಕ್ಷಗಳ ದೃಢ ನಂಬಿಕೆ. ಉದ್ಯೋಗದ ಹಕ್ಕು ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ ಆದರೆ ಮನರೇಗಾ ಯೋಜನೆಯು ಕನಿಷ್ಟ ಗ್ರಾಮೀಣ ಪ್ರದೇಶಗಳಲ್ಲಾದರೂ ಈ ಹಕ್ಕನ್ನು ನೀಡಿತು. ಇದರಲ್ಲಿ ಕೆಲವು ಇತಿಮಿತಿಗಳಿದ್ದರೂ ಮತ್ತು ಆಳುವ ವರ್ಗಗಳು ಇದನ್ನು ಜಾರಿ ಮಾಡದಿರಲು ಬೇಕೆಂದೇ ಪ್ರಯತ್ನಿಸಿದರೂ, ಗ್ರಾಮೀಣ ಉದ್ಯೋಗದ ಉದ್ಯೋಗ ಹಕ್ಕಿನ ವಿಸ್ತರಣೆ ಎಂಬುದAತೂ ವಾಸ್ತವ. ಮನ ರೇಗಾ ಕಾನೂನಾದಾಗ ಈ ರೀತಿಯ ನಗರ ಉದ್ಯೋಗ ಗ್ಯಾರಂಟಿ ಯೋಜನೆಯು ಜಾರಿ ಆಗಬೇಕು ಎಂದು ನೀಡಿದ್ದ ಭರವಸೆಯನ್ನು ಜಾರಿ ಮಾಡಬೇಕು ಎಂದು ಎಡ ಪಕ್ಷಗಳು ಕೇಳುತ್ತಲೇ ಇವೆ. ಇದೇ ರೀತಿ ಶಿಕ್ಷಣವು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ಆದರೆ, ಶಿಕ್ಷಣದ ಹಕ್ಕು ಜಾರಿಯಾಗದಿದ್ದರೂ, ಕನಿಷ್ಠ ಒಂದು ವಿಸ್ತರಣೆಯಾಗಿದೆ. ಆಗೆಯೇ ಮಾಹಿತಿ ಹಕ್ಕು, ಬುಡಕಟ್ಟು ಜನಾಂಗದವರಿಗೆ ಅರಣ್ಯ ಹಕ್ಕು ಕಾಯ್ದೆ ಇತ್ಯಾದಿಗೂ ಜನರಿಗೆ ಹಕ್ಕುಗಳು ಗ್ಯಾರಂಟಿಗಳ ವಿಸ್ತರಣೆಯಾಗಿದೆ. ಒಂದರ್ಥದಲ್ಲಿ, ಎಡಪಕ್ಷಗಳ ಒತ್ತಡ ಇರದಿದ್ದರೆ, ನವ-ಉದಾರವಾದದಲ್ಲಿ ಈ ಕಾನೂನುಗಳು ಪ್ರಾಯಶಃ ಇರುತ್ತಿರಲಿಲ್ಲ.
“ಚುನಾಯಿತ ನಿರಂಕುಶತ್ವ”
ಭಾರತದ ಧರ್ಮ ನಿರಪೇಕ್ಷ ಪ್ರಜಾಸತ್ತೆಯ ಮೇಲೆ ಭಾರತವು ನವ ಉದಾರವಾದದತ್ತ ತಿರುಗುವುದರಿಂದಾಗುವ ಪರಿಣಾಮಗಳೇನು ಮತ್ತು ಇದಕ್ಕೂ ಹಾಗೂ ಸರ್ವಾಧಿಕಾರಶಾಹಿಯ ಉದಯಕ್ಕೂ ಏನಾದರೂ ಸಂಬಂಧವಿದೆಯೇ?
ಯೆಚುರಿ: 2014 ರಿಂದೀಚೆಗೆ ಆಗಿರುವುದೇನೆಂದರೆ ಕಾರ್ಪೊರೇಟ್ ಹಿತಾಸಕ್ತಿ ಮತ್ತು ಕೋಮು ರಾಜಕೀಯದ ಭ್ರಷ್ಟಮಿಶ್ರಣದ ಹೊರಹೊಮ್ಮುವಿಕೆ. ಇದು, ರಾಷ್ಟ್ರೀಯ ಆಸ್ತಿಗಳ ವ್ಯಾಪಕ ಲೂಟಿ, ಸಾರ್ವಜನಿಕ ವಲಯಗಳು, ಸಾರ್ವಜನಿಕ ಬಳಕೆಗಳು ಮತ್ತು ಖನಿಜ ಸಂಪತ್ತುಗಳ ಬೃಹತ್ ಖಾಸಗೀಕರಣದ ಮೂಲಕ ಲಾಭವನ್ನು ಗರಿಷ್ಟ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತದೆ. ಇದು ಹಿಂದೆಂದೂ ಕೇಳರಿಯದ ಮಟ್ಟದ ಚಮಚಾ ಬಂಡವಾಳಶಾಹಿ ಮತ್ತು ರಾಜಕೀಯ ಭ್ರಷ್ಟಾಚಾರಕ್ಕೆ ಎಡೆ ಮಾಡುತ್ತದೆ. ಇದರ ಜೊತೆಯಲ್ಲಿಯೇ, ಜನರ ಪ್ರಜಾಸತ್ತಾತ್ಮಕ ಹಕ್ಕುಗಳು, ನಾಗರಿಕ ಸ್ವಾತಂತ್ರ‍್ಯ ಮತ್ತು ಮಾನವ ಹಕ್ಕುಗಳ ಮೇಲೆ ನಿರ್ದಯ ದಾಳಿ ನಡೆಯುತ್ತದೆ. ಸಂವಿಧಾನ ಮತ್ತು ಅದು ಜನರಿಗೆ ನೀಡಿರುವ ಗ್ಯಾರಂಟಿಯನ್ನು ಕಡೆಗಣಿಸುವ ಪ್ರಕ್ರಿಯೆಯಾದ ಎಲ್ಲ ಭಿನ್ನಾಭಿಪ್ರಾಯವನ್ನು ದೇಶ-ವಿರೋಧಿ ಎಂದು ತಳ್ಳಿ ಹಾಕುವುದು, ಯÉಪಿಎ, ರಾಜದ್ರೋಹ ಮುಂತಾದ ಕಠಿಣ ಕಾನೂನುಗಳನ್ನು ಬಳಸಿ ಜನರನ್ನು ಇಷ್ಟಬಂದಂತೆ ಬಂಧಿಸುವುದು.
ಇದರಿಂದಾಗಿಯೇ ಜಗತ್ತು ಭಾರತವನ್ನು ಒಂದು “ಚುನಾಯಿತ ನಿರಂಕುಶತ್ವ’ ಎಂದು ಘೋಷಿಸಿರುವುದು. ಜಾಗತಿಕ ಆರ್ಥಿಕ ಸ್ವಾತಂತ್ರ‍್ಯ ಸೂಚ್ಯಾಂಕದಲ್ಲಿ ಭಾರತವು 105 ನೇ ಸ್ಥಾನದಲ್ಲಿದೆ.(ಕಳೆದ ವರ್ಷ 79 ರಲ್ಲಿತ್ತು) ಮಾನವ ಸ್ವಾತಂತ್ರ‍್ಯ ಸೂಚ್ಯಾಂಕವು ಭಾರತವನ್ನು 111ನೇ ಸ್ಥಾನದಲ್ಲಿ (ಕಳೆದ ವರ್ಳ 94). ಯುಎನ್‌ಡಿಪಿ ಯ ಮಾನವ ಅಭಿವೃದ್ಧಿ ಸುಚ್ಯಾಂಕವು ಭಾರತವನ್ನು ಕಳೆದ ವರ್ಷದ 124ನೇ ಸ್ಥಾನದಿಂದ 131 ನೇ ಸ್ಥಾನಕ್ಕೆ ಇಳಿಸಿದೆ.
ನಮ್ಮ ಜನರಿಗೆ ಹೆಚ್ಚುತ್ತಿರುವ ಸಂಕಷ್ಟಗಳ ಜೊತೆಯಲ್ಲಿ ಏರುತ್ತಿರುವ ಸರ್ವಾಧಿಕಾರಶಾಹಿತ್ವವು ಮುಸ್ಸೋಲಿನಿಯ ಘಾಸೀವಾದವನ್ನು ವಿವರಿಸಿದ ರೀತಿಯಲ್ಲಿ “ಆಳ್ವಿಕೆಯೊಂದಿಗೆ ಕಾರ್ಪೊರೇಟ್ ಗಳ ಬೆಸುಗೆ” ಯತ್ತ ಸಾಗುತ್ತಿದೆ.
ಸುಧಾರಣಾ ಪಥವನ್ನು ಗಂಭೀರವಾಗಿ ವಿಮರ್ಶಿಸಬೇಕು
ನವ-ಉದಾರವಾದವೇ ಇಂದು ಕೋವಿಡ್-19 ರಿಂದ ಇನ್ನಷ್ಟ್ಟು ಬಿಗಡಾಯಿಸಿರುವ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಭವಿಷ್ಯವೇನು? ಮತ್ತು ಪರ್ಯಾಯ ಏನು?
ಯೆಚುರಿ: ಕೋವಿಡ್ ಸಾಂಕ್ರಾಮಿಕ ಮತ್ತು ಜನರ ಜೀವ ಮತ್ತು ಜೀªನೋಪಾಯÀವನ್ನು ರಕ್ಷಿಸಲು ಇರುವ ಅಸಮರ್ಪಕ ಆರೋಗ್ಯ ವ್ಯವಸ್ಥೆ ಇಂದು ಬಹಳ ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ಜಾಗತಿಕ ನವ-ಉದಾರವಾದಿ ಪಥದಲ್ಲಿ ಲಾಭ ಹೆಚ್ಚಿಸುವ ಸಲುವಾಗಿ ಮಿತವ್ಯಯ ಕ್ರಮಗಳಾದ ವೇತನ ಕಡಿತ, ಕೆಲಸಗಳ ನಿರ್ಮೂಲನೆ ಮತ್ತು ಮುಖ್ಯವಾಗಿ ನಮ್ಮ ದೇಶವಲ್ಲದ “ನೋಟುರದ್ದತಿ” ರೀತಿಯಲ್ಲಿ ಸಣ್ಣ ಉತ್ಪಾದನೆಗಳ ನಾಶ ಇತ್ಯಾದಿ ಕ್ರಮಗಳ ಭಾಗವಾಗಿಯೇ ನಾವು ಆಳುವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಎಲ್ಲಾ ಆರ್ಥಿಕ ಚಟುವಟಿಕೆಗಳ ಮಾರ್ಗಗಳನ್ನು ಆಕ್ರಮಿಸುವುದು ಮತ್ತು ಈಗ ಭಾರತದ ಕೃಷಿಯನ್ನು ಕಾರ್ಪೊರೇಟ್ ಲಾಭಕ್ಕಾಗಿ ಧ್ವಂಸ ಮಾಡುವುದು, ಕಾಂಟ್ರಾಕ್ಟ್ ಕೃಷಿ ಪದ್ಧತಿ ಮತ್ತು ಇದರಿಂದಾಗುವ ಆಹಾರ ಕೊರತೆ ಎಲ್ಲವೂ ಈ ಬೆಳವಣಿಗೆಯನ್ನು ಪ್ರತಿಫಲಿಸುತ್ತಿವೆ.
ಜಾಗತಿಕವಾಗಿ, ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವಲ್ಲಿ ನವ-ಉದಾರವಾದಿÀ ಸುಧಾರಣೆಗಳ ದಿವಾಳಿತನವು ನಿಚ್ಚಳವಾಗಿ ಕಾಣಬರುತ್ತಿದೆ. ಈ ಅಪಾಯಕಾರಿ ಅಸಮಾನತೆಯ ಹೆಚ್ಚಳವನ್ನು ಸರ್ವೆ ಮಾಡಿರುವ, “ದಿ ಎಕನಾಮಿಸ್ಟ್,” ಪತ್ರಿಕೆಯು “ಅಸಮಾನತೆಯು ಯಾವ ಹಂತ ತಲುಪಿದೆ ಎಂದರೆ ಅದು ಅದಕ್ಷವಾಗಿದೆ ಮತ್ತು ಬೆಳವಣಿಗೆಗೆ ಕೆಡುಕಾಗಿದೆ” ಎಂದು ಅಭಿಪ್ರಾಯ ಪಟ್ಟಿದೆ. ತನ್ನ ಪುಸ್ತಕ “ಅಸಮಾನತೆಯ ಬೆಲೆ”ಯಲ್ಲಿ ಅಗ್ರ ಶೇ.1 ಮತ್ತು ಅನ್ಯ ಶೇ.99 ಜನರ ಬಗ್ಗೆ ಬರೆಯುತ್ತಾ ಜೋಸೆಫ್ ಸ್ಟಿಗ್‌ಲಿಟ್ಸ್ ಅಂತಿಮವಾಗಿ ಹೀಗೆ ಹೇಳುತ್ತಾರೆ. “ಸಮರ್ಪಕವಾಗಿ ಮಾಡಿದರೆ ನಮ್ಮ ಆರ್ಥಿಕ ಪ್ರಗತಿಯು ಒಂದು ವೇಳೆ ನಮ್ಮ ಸಮಾಜ ಆಳವಾಗಿ ವಿಭಜನೆ ಹೊಂದಿಯೇ ಇದ್ದರೆ ಸಾಧಿಸುವುದಕ್ಕಿಂತ ಹೆಚ್ಚಾಗಿಯೇ ಬೆಳೆಯುತ್ತಿದೆ.”
ಎಲ್ಲಾ ಮುಂದುವರೆದ ದೇಶಗಳು ನವ-ಉದಾರವಾದಕ್ಕೆ ಅಸಹನೀಯವಾಗಿರುವ ಕ್ರಮಗಳಿಂದ ಬೃಹತ್ ಪ್ರಮಾಣದಲ್ಲಿ ಸರ್ಕಾರಿ ವೆಚ್ಚವನ್ನು ಉತ್ತೇಜಕ ಪ್ಯಾಕೇಜ್ ಗಳಾಗಿ ಘೋಷಿಸಿವೆ. ಇವು ಆಂತರಿಕ ಬೇಡಿಕೆ ಮತ್ತು ಆರ್ಥಿಕ ಚಟುವಟಿಕೆಯನ್ನು ಪುನಶ್ಚೇತನಗೊಳಿಸುವ ಉದ್ದೇಶ ಹೊಂದಿವೆ. ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ರವರು ಹೆಚ್ಚಿಸಿದ ಸರ್ಕಾರಿ ವೆಚ್ಚದ ಮಹತ್ವವನ್ನು ಕುರಿತು ಮಾತನಾಡುವ ಮೊದಲು ಹೇಳಿದ ನುಡಿಗಳು ಇವು: “ನಾನು ಒಬ್ಬ ಕಮ್ಯುನಿಸ್ಟ್ ಅಲ್ಲ, ಆದರೆ….”.
ಮೋದಿ ಸರ್ಕಾರದ ಚಮಚಾ ಬಂಡವಾಳಶಾಹಿಗಳ ಬೃಹತ್ ಪ್ರಮಾಣದ ತೀರಿಸಲಾಗದ ಸಾಲಗಳ, ಮನ್ನಾವನ್ನು ಒಂದೆಡೆ ಮಾಡುತ್ತಲೇ, ಇನ್ನೊಂದೆಡೆ ತನ್ನ ಸರ್ಕಾರಿ ವೆಚ್ಚವನ್ನು ಹೆಚ್ಚಿಸಲು ಒಪ್ಪುತ್ತಿಲ್ಲ. ಪೆಟ್ರೋಲ್, ಡೀಸೆಲ್ ನ ದೈನಂದಿನ ಬೆಲೆ ಏರಿಕೆ ಮತ್ತು ಇದರಿಂದಾಗುವ ಒಟ್ಟಾರೆ ಹಣದುಬ್ಬರದ ಮೂಲಕ ಜನರ ಮೇಲೆ ಇನ್ನಷ್ಟು ಹೊರೆಯನ್ನು ಸರ್ಕಾರ ಹಾಕುತ್ತಿದೆ. ಇದು ಆಂತರಿಕ ಬೇಡಿಕೆಯನ್ನು ಕುಂಠಿತಗೊಳಿಸುತ್ತಿದೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ಇನ್ನಷ್ಟ್ಟು ತೀವ್ರಗೊಳಿಸುತ್ತಿದೆ.
ನಾವು, ನಮ್ಮ ದೇಶದಲ್ಲಿ ಈ ಸುಧಾರಣಾ ಪಥವನ್ನು ಗಂಭೀರವಾಗಿ ವಿಮರ್ಶಿಸಬೇಕು ಮತ್ತು ನಮ್ಮ ಆದ್ಯತೆಯನ್ನು ಕೆಳ ಕಾಣಿಸಿದಂತೆ ಸರಿಪಡಿಸಿಕೊಳ್ಳಬೇಕು:
ಕೃಷಿ ಮತ್ತು ಆಹಾರ ಭದ್ರತೆಯನ್ನು ಬಲಪಡಿಸುವುದು, ಆರೋಗ್ಯ, ಶಿಕ್ಷಣದಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಆಂತರಿಕ ಬೇಡಿಕೆ ಉತ್ತೇಜಿಸಲು ಬಹಳ ಅಗತ್ಯವಿರುವ ಆರ್ಥಿಕ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳಲ್ಲಿ ಸಾರ್ವಜ£ಕ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸುವುದು.
ತನ್ನನ್ನು ಒಂದು ರಾಷ್ಟ್ರೀಯವಾದಿ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯು 1990 ರ ಆರಂಭದಲ್ಲಿ ಬುನಾದಿ ಹಾಕಿದ ನವ-ಉದಾರವಾದಿ ಪಥದಲ್ಲಿ ನಿರಂತರವಾಗಿ ಸಾಗುತ್ತಿದೆ. ಬೇರೆ ಪಕ್ಷಗಳಿಗಿಂತಲೂ ಬಿಜೆಪಿಯ ನವ-ಉದಾರವಾದಿ ಸುಧಾರಣೆಗಳ ದೃಷ್ಟಿಕೋನವು ತುಂಬಾ ಆಕ್ರಮಣಕಾರಿಯೇ?
ಬಿಜೆಪಿಯು ಯಾವಾಗಲೂ ಎರಡು ನಾಲಿಗೆ ಹೊಂದಿದೆ. ಅದು ಹೇಳುವುದು ಒಂದು, ಮಾಡುವುದೇ ಇನ್ನೊಂದು. ರಾಷ್ಟ್ರೀಯವಾದಿ ಪಕ್ಷ ಎಂದು ಹೇಳಿಕೊಳ್ಳುತ್ತಾ, ಒಂದು ಸಮಯದಲ್ಲಿ ಸ್ವದೇಶಿ ಯಂತಹ ಘೋಷಣೆ ಕೊಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ) ಯನ್ನು ವಿರೋಧಿಸುತ್ತದೆ. ಆದರೆ ಸರ್ಕಾರದ ಅಧಿಕಾರ ಹಿಡಿದಾಕ್ಷಣ ಈ ನಿಲುವುಗಳು ತಿರುಗು ಮುರುವಾಗುತ್ತವೆ.
ಮುಖ್ಯವಾಗಿ 2014 ರಿಂದ, ಬಿಜೆಪಿ ಸರ್ಕಾರ ನವ ಉದಾರವಾದಿ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದೆ. ಮೊದಲು ಈ ಧೋರಣೆ ಹೀಗಿರಲಿಲ್ಲ. ಇದಕ್ಕೊಂದು ಕಾರಣ ಇದೆ. ಬಿಜೆಪಿಯು ಆರೆಸ್ಸೆಸ್ ನ ರಾಜಕೀಯ ಅಂಗ. ಒಂದು ಉನ್ನತ್ತ ಅಸಹಿಷ್ಣುತೆಯ ಅಸಹನೀಯ ಮತೀಯ ಫ್ಯಾಸಿಸ್ಟ್ ತೆರನ “ಹಿಂದುತ್ವ ರಾಷ್ಟ್ರ” ಸ್ಥಾಪಿಸುವ ತನ್ನ ರಾಜಕೀಯ ಯೋಜನೆಯನ್ನು ಆರೆಸ್ಸೆಸ್ ಮುಂದುವರೆಸುತ್ತಿರುತ್ತದೆ. ಸ್ವಾತಂತ್ರ‍್ಯ ಗಳಿಸಿದ ಸಂದರ್ಭದಲ್ಲಿ ಇದನ್ನು ಸಾಧಿಸಲು ವಿಫಲವಾದ ನಂತರ, ಅದು ಸಂವಿಧಾನವು ಅಳವಡಿಸಿಕೊಂಡಿರುವ ಧರ್ಮ ನಿರಪೇಕ್ಷ, ಪ್ರಜಾಪ್ರಭುತ್ವವಾದಿ ಗಣತಂತ್ರವನ್ನು ದುರ್ಬಲಗೊಳಿಸಲು ಮತ್ತು ಈ ಜಾಗದಲ್ಲಿ ತನ್ನ ಘಾಸಿಸ್ಟ್ ತೆರನ “ಹಿಂದುತ್ವ ರಾಷ್ಟ್ರ” ಸ್ಥಾಪಿಸಲು ಪ್ರಯತ್ನಿಸುತ್ತಲೇ ಇದೆ. ಈ ಯೋಜನೆಯನ್ನು ಜಾಗತಿಕರಣಗೊಂಡ ವಿಶ್ವದಲ್ಲಿ ಸಾಧಿಸಬೇಕಾದಲ್ಲಿ ಅಂತರಾಷ್ಟ್ರೀಯ ಬೆಂಬಲ ಇರಬೇಕು ಅಥವಾ ಕನಿಷ್ಟ ಅಂತರಾಷ್ಟ್ರೀಯ ಪ್ರತಿರೋಧ ಇರಬಾರದು. ಇದಕ್ಕಾಗಿ ಅದು ನವ-ಉದಾರವಾದಿ ಸುಧಾರಣೆಗಳನ್ನು ಆಕ್ರಮಣಕಾರಿಯಾಗಿ ಜಾರಿ ಮಾಡಿ, ಜಾಗತಿಕ ಮತ್ತು ಆಂತರಿಕ ಕಾರ್ಪೊರೇಟ್ ಗಳಿಗೆ ತಮ್ಮ ಲಾಭವನ್ನು ಗರಿಷ್ಟಮಟ್ಟದಲ್ಲಿ ಹೆಚ್ಚಿಸಿಕೊಳ್ಳಲು ಹೊಸ ಹೊಸ ಕ್ಷೇತ್ರಗಳನ್ನು ಒದಗಿಸುವ ಮೂಲಕ ಅವರ ಬೆಂಬಲ ಗಳಿಸಿಕೊಳ್ಳುವುದು ಒಂದು ಅತ್ಯುತ್ತಮ ಮಾರ್ಗ ಎಂದು ತಿಳಿದು, ನಡೆಯುತ್ತಿದೆ.
ಬಲಪಂಥೀಯ ಪಲ್ಲಟ
ಭಾರತವು ನವ-ಉದಾರವಾದಕ್ಕೆ ತಿರುಗಿರುವುದರ ಪರಿಣಾಮವು ಭಾರತವು ವಿಶ್ವ ರಾಜಕೀಯವನ್ನು ನೋಡುವ ಮತ್ತು ಅದರ ಪಾತ್ರದ ಮೇಲೆ ಏನಾಗಬಹುದು?
ಯೆಚುರಿ: ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟು ಮುಂದುವರೆಯುತ್ತಿರುವ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ರಾಜಕೀಯ ಬಲಪಂಥೀಯ ಪಲ್ಲಟ ಕಾಣ ಬರುತ್ತಿದೆ. ಗರಿಷ್ಟ ಲಾಭದಲ್ಲಿನ ಕುಸಿತ ಜಾಗತಿಕ ಬಂಡವಾಳಶಾಹಿಯ ಹಿತಾಶಕ್ತಿಗೆ ಘಾಸಿ ತರುತ್ತದೆ. ವಿಶ್ವದಲ್ಲೆಡೆ ಬೆಳೆದು ಬರುತ್ತಿರುವ ದುಡಿಯುವ ವರ್ಗದ ನೇತೃತ್ವದ ಪ್ರತಿಭಟನೆಯ ಐಕ್ಯತೆಯನ್ನು ಒಡೆಯಲು ಭಾವನೆಗಳನ್ನು ಕೆರಳಿಸುವ, ವರ್ಣಭೇದ, ಅನ್ಯರ ದ್ವೇಷÀ ಮುಂತಾದ ವಿಭಜಕ ಧೋರಣೆಗಳು, ದ್ವೇಷÀ ಹರಡುವುದು, ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ನಾಗರಿಕ ಸ್ವಾತಂತ್ರ‍್ಯಗಳನ್ನು ಮೊಟಕುಗೊಳಿಸುವ ಇತ್ಯಾದಿ ಬಲಪಂಥೀಯ ರಾಜಕೀಯ ಪಲ್ಲಟಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಭಾರತದಲ್ಲಿ, ಈ ಬಲಪಂಥೀಯ ಪಲ್ಲಟವನ್ನು ಕೋಮು ಧ್ರುವೀಕರಣ, ವಿ¼ಷಭರಿತ ದ್ವೇಷÀ ಮತ್ತು ಹಿಂಸೆಯನ್ನು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹರಿಬಿಡುವ ಮೂಲಕ ಆರೆಸ್ಸೆಸ್ ನ ಘಾಸಿಸ್ಟ್ ತೆರನ ಯೋಜನೆಯ ಮುನ್ನಡೆಗೆ ಎಡೆ ಮಾಡಲಾಗುತ್ತಿದೆ. ಸಹಜವಾಗಿ ಇದು ಸರ್ವಾಧಿಕಾರಶಾಹಿತ್ವ ಘಾಸಿಸ್ಟ್ ತೆರನ ಪ್ರಮಾಣಕ್ಕೆ ಬೆಳೆಯಲು ಎಡೆ ಮಾಡಿಕೊಡುತ್ತಿದೆ.
ಮುಖ್ಯವಾಗಿ 2014ರಿಂದ ಒಂದು ಕಾರ್ಪೊರೇಟ್- ಕೋಮುವಾದಿ ನಂಟು ಹೊರಹೊಮ್ಮಿ, ನಿರಂತರವಾಗಿ ಬಲಗೊಳ್ಳುತ್ತಿದೆ. ಇದು ಚಮಚಾ ಬಂಡವಾಳಶಾಹಿಯ ಅತ್ಯಂತ ಹೀನ ಅಭಿವ್ಯಕ್ತಿಗೆ ದಾರಿ ಮಾಡಿಕೊಡುತ್ತಿದೆ. ಚಮಚಾ ಕಾರ್ಪೊರೇಟ್ ಗಳು ಸಂತ್ತನ್ನು ಪೇರಿಸಿಕೊಳ್ಳುತ್ತಿರುವುದರಲ್ಲಿ ಇದನ್ನು ಕಾಣಬಹುದು. ಇತ್ತೀಚಿನ ರಾಷ್ಟ್ರೀಯ ನಗದೀಕರಣ ಕ್ರವiಸರಣಿ(ಎನ್‌ಎಂಪಿ) ಯೋಜನೆ ಒಳಗೊಂಡಂತೆ ಭಾರತದ ರಾಷ್ಟ್ರೀಯ ಆಸ್ತಿಗಳ ದೊಡ್ಡ ಪ್ರಮಾಣದ ಲೂಟಿಗೆ ಮುಂದಾಗಿರುವುದು ಅನಿಯಂತ್ರಿತ ನವ-ಉದಾರವಾದಿ ಸುಧಾರಣೆಗಳ ಯೋಜನೆ ಮತ್ತು ಆರ್.ಎಸ್.ಎಸ್. ನ ಯೋಜನೆಯ ಭಾಗವಾಗಿಯೇ.
ಸಹಜವಾಗಿ ಈ ನೀತಿಯು ಭಾರತವನ್ನು ಅಂತರಾಷ್ಟ್ರೀಯ ಹಣಕಾಸು ಬಂಡವಾಳದ ಬಾಲಂಗೋಚಿಯಾಗಿ ಮತ್ತು ಅಮೆರಿಕ ಸಾಮ್ರಾಜ್ಯಶಾಹಿಯ ಸಾಮಂತನಾಗಿ ಭಾರತದ ಪಾತ್ರವನ್ನು ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಗಟ್ಟಿಗೊಳಿಸುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನ ಮುಂದಾಳು, ಅಲಿಪ್ತ ಚಳುವಳಿಯ ಪ್ರತಿಪಾದಕನಾಗಿ ಕಂಗೊಳಿಸುತ್ತಿದ್ದ ಭಾರತದ ಭವ್ಯತೆ ಇಂದು ಚರಿತ್ರೆಯ ದಾಖಲೆಗಳಿಗೆ ಮಾತ್ರ ಸೀಮಿತವಾಗುವತ್ತ ಸಾಗಿದೆ.
ಅಮೆರಿಕನ್ ಸಾಮ್ರಾಜ್ಯಶಾಹಿಯ ಕಿರಿಯ ಭಾಗೀದಾರನಾಗಿ ಈಗ ನವ-ಉದಾರವಾದಿ ಸುಧಾರಣೆಗಳನ್ನು ಆಕ್ರಾಮಕವಾಗಿ ಅನುಸರಿಸುತ್ತಿರುವ ಕಾರ್ಪೊರೇಟ್-ಕೋಮುವಾದಿ ನಂಟು, ಭಾರತವನ್ನು ಸಂವಿÀಧಾನದಲ್ಲಿ ನಿರೂಪಿಸಿರುವಂತಹ ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರದಿಂದ ಆರೆಸ್ಸೆಸ್ ಕಣ್ಣೋಟದ ಒಂದು ಉನ್ನತ್ತ ಅಸಹಿಷ್ಣು ಮತೀಯವಾದಿ ಫ್ಯಾಸಿಸ್ಟ್ತೆರನ ‘ಹಿಂದುತ್ವ ರಾಷ್ಟ್ರ’ವಾಗಿ ರೂಪಾಂತರಿಸುವ ಒಟ್ಟು ಪ್ಯಾಕೇಜಿನ ಭಾಗವಾಗಿದೆ.
ಅನು: ಶೃಂ.ಶ.ನಾ