ಬೆಂಗಳೂರು: ಸುಮಾರು 200 ಜನ – ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಮತ್ತು ಬೆಂಬಲಿಗರು ರೈನ್ಬೋ ಹಬ್ಬ 2025 ರಲ್ಲಿ ಸಂಗೀತ ಮತ್ತು ನೃತ್ಯಗಳೊಂದಿಗೆ 56 ನೇ ಸ್ಟೋನ್ವಾಲ್ ದಂಗೆಗಳ ದಿನವನ್ನು ಸ್ಟೂಡೆಂಟ್ಸ್ ಕ್ರಿಶ್ಚಿಯನ್ ಮೂವ್ಮೆಂಟ್ ಆಫ್ ಇಂಡಿಯಾ ಸಭಾಂಗಣದಲ್ಲಿ ಆಚರಿಸಿದರು. ಹಬ್ಬ
ಮಹೇಶ್ ಬಾಬು (ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು) ರವರು ಮಾತನಾಡುತ್ತಾ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ದಿಗಾಗಿ ಸಾರ್ವಜನಿಕ ನೀತಿಗಳು ರಚನೆಯಾಗುವುದು ಬಹಳ ಮುಖ್ಯ, ಆ ನಿಟ್ಟಿನಲ್ಲಿ ತಾವು ಕೆಲಸಮಾಡಬೇಕು ಎಂದು ತಿಳಿಸಿದರು. ನಾನು ಸಂಪೂರ್ಣವಾಗಿ ನಿಮಗೆ ಸಹಕಾರವನ್ನು ನಿಡುತ್ತೇನೆ ಎಂದು ಭರವಸೆ ನೀಡಿದರು. ಹಬ್ಬ
ಇದನ್ನೂ ಓದಿ: ಶಾಲೆಯ ಕಟ್ಟಡದ ಮೇಲ್ಛಾವಣಿ ಕುಸಿತ; 5 ಮಕ್ಕಳು ಸಾವು
ಸಂಗಮ ಸಂಸ್ಥಾಪಕರು ಮತ್ತು ಕಾರ್ಯಕಾರಿ ನಿರ್ದೇಶಕರಾದ ಮನೋಹರ್ ಎಲವರ್ತಿ ಯವರು ಮಾತನಾಡುತ್ತಾ ಈ ಸಮಯದಲ್ಲಿ ಸ್ಟೋನ್ವಾಲ್ ದಂಗೆಗಳ ನಾಡಾದ ಅಮೇರಿಕಾದಲ್ಲಿ ನಮ್ಮ ಸಮುದಾಯವು ಕಷ್ಟಪಟ್ಟು ಗಳಿಸಿದ ಹಕ್ಕುಗಳನ್ನು ಕಳೆದುಕೊಳ್ಳುತ್ತಿದೆ. ನಾವು ಜಾಗರೂಕರಾಗಿರಬೇಕು ಮತ್ತು ಬೀದಿಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ನಮ್ಮ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಬೇಕು.
ಸೋನು ನಿರಂಜನ್ (ಲಿಂಗತ್ವ ಅಲ್ಪಸಂಖ್ಯಾತ ಗಂಡಸು) ಮಾತನಾಡುತ್ತಾ ಸಮಾಜ ಮತ್ತು ರಾಜಕಾರಣಿಗಳು ಕೇವಲ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರ ಬಗ್ಗೆ ಅರಿವು ಮೂಡಿಸಿಕೊಳ್ಳುತ್ತಿದೆ ಆದರೆ ಲಿಂಗತ್ವ ಅಲ್ಪಸಂಖ್ಯಾತ ಗಂಡಸರಿಗೆ ಈಗಲೂ ಸ್ವಾತಂತ್ರ್ಯ ಮತ್ತು ಅವಕಾಶಗಳು ಸಿಗುತ್ತಿಲ್ಲ ಇದು ಬದಲಾಗಬೇಕಾದರೆ ಸರ್ಕಾರ ನಮ್ಮ ಸಮುದಾಯದ ಬಗ್ಗೆ ತಿಳಿಯಬೇಕು ಎಂದು ಒತ್ತಾಯಿಸಿದರು.
ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳನ್ನು ಸ್ವೀಕರಿಸಿದ ತಾಯಿಯರನ್ನು ಸನ್ಮಾನಿಸಲಾಯಿತು.

ಆಶಾ ಇಮಾಮ್ ಸಾಬ್ ನಾಯಕ್ ವಾಡಿ: ಬೆಳಗಾವಿ ಜಿಲ್ಲೆಯ ಐನಾ ಶೇಕ್ (ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ) ಅವರ ತಾಯಿ ಆಶಾ ಇಮಾಮ್ ಸಾಬ್ ನಾಯಕ್ ವಾಡಿ ಯವರು “ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಆಗಿರುವ ಐನಾ ಬಹಳ ವರ್ಷ ಪೂನಾ ದಲ್ಲಿ ಇದ್ದು ಈಗ ಬೆಳಗಾವಿಯ ನಮ್ಮ ಮನೆಯಲ್ಲಿ ವ್ಯವಸಾಯ ಮಾಡುತ್ತಾ ಇತರೇ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಿಗೆ ಸಹಾಯ ಮಾಡುತ್ತಿದ್ದಾಳೆ” ಎಂದು ಹೇಳಿದರು.
ಲಕ್ಷ್ಮಿ: ಬೆಂಗಳೂರು ಮೂಲದ ಪಾರು (ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ) ಅವರ ತಾಯಿ ಲಕ್ಷ್ಮಿ ಯವರು “ನನ್ನ ಪ್ರೀತಿಯ ಕೊನೆ ಮಗನಾದ ಪಾರು ಚಿಕ್ಕವಯಸ್ಸಿನಿಂದಲೇ ಹೆಣ್ಣಿನ ತರಹ ಆಡುತ್ತಿದ್ದ ಈಗಲೂ ಈ ಪಾರೂ ನೇ ನಮ್ಮ ಮನೆ ನಡೆಸುತ್ತಿರುವುದು.

ಶೇಕಡಾ 1% ಮೀಸಲಾತಿಯ ಅಡಿಯಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆದಿರುವ ಬೆಳಗಾವಿಯ ಸಿದ್ದಪ್ಪ ಹುಕ್ಕೇರಿ (ನ್ಯಾಯಾಂಗ ಇಲಾಖೆಯಲ್ಲಿ) ಯವರನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮವು ಘೋಷಣೆಗಳೊಂದಿಗೆ (ನನ್ನ ದೇಹ-ನನ್ನ ಹಕ್ಕು, ನನ್ನ ಲೈಂಗಿಕತೆ-ನನ್ನ ಹಕ್ಕು, ಬೇಕೇ ಬೇಕು–ನ್ಯಾಯ ಬೇಕು, ಏನೇ ಬರಲಿ-ಒಗ್ಗಟ್ಟಿರಲಿ) ಮುಕ್ತಾಯವಾಯಿತು.
ಇದನ್ನೂ ನೋಡಿ: ಪರಿಸರ ಜಾಗೃತಿ | ‘ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗೆ ಅಪಾಯ‘ Janashakthi Media
