ಮೈಸೂರು: ರಾಜ್ಯದಲ್ಲಿ ಒಂದಲ್ಲ ಒಂದು ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಜನರು ಆತಂಕದಲ್ಲಿ ಜೀವನ ಮಾಡುವಂತಾಗಿದೆ. ಸೋಮವಾರ ಮುಂಜಾನೆ ತಾಲೂಕಿನ ಗುಜ್ಜೇಗೌಡನಪುರ ಗ್ರಾಮದ ಹತ್ತಿರ ಉದ್ಯಮಿಯ ಕಾರು ಗಡ್ಡಗಟ್ಟಿ 1.5 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ನಡೆದಿದೆ.
ಮಸುಕುಧಾರಿಗಳ ಗುಂಪುವೊಂದು ಕಾರು ಗಡ್ಡಗಟ್ಟಿ ಉದ್ಯಮಿ ಮೇಲೆ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದೆ. ಕೇರಳ ಮೂಲದ ಅಡಿಕೆ ವ್ಯಾಪಾರಿ ಶಫಿ ಹಾಗೂ ಕಾರು ಚಾಲಕನ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು| ಹಳೇ ಪಿಂಚಣಿ ಯೋಜನೆ ಜಾರಿಗೆ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಧರಣಿ
ಅಲ್ಲದೆ ಅದೇ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಮೈಸೂರು-ಮಾನಂದವಾಡಿ ರಾಜ್ಯ ಹೆದ್ದಾರಿ ಮೂಲಕ ಇವರು ತೆರಳುತ್ತಿದ್ದರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟಿದ್ದು, ಪರಿಶೀಲನೆ ನಡೆಸಿದ್ದಾರೆ. ಮೇಲಿಂದ ಮೇಲೆ ದರೋಡೆ ಘಟನೆಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆಗೆ ತಲೆನೋವು ತಂದಿದ್ದಾರೆ. ಇನ್ನೊಂದು ಕಡೆ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ ಎಂದು ಕಿಡಿ ಕಾರುತ್ತಿದ್ದಾರೆ.
ಇದನ್ನೂ ನೋಡಿ: ಕಲಬುರಗಿ | ಬಹುತ್ವ ಸಂಸ್ಕತಿ ಭಾರತೋತ್ಸವ-2025; ತತ್ವಪದ ಗಾಯನ ಸಮಾವೇಶ, ಕಲಬುರಗಿ